ಮಂಗಳೂರು: ನಾಯಕತ್ವ ಗುಣ, ಸಮಯ ಪಾಲನೆ ಮತ್ತು ಶಿಸ್ತು ವಿದ್ಯಾರ್ಥಿಗಳ ಜೀವನದಲ್ಲಿ ಅತೀ ಮುಖ್ಯ ಎಂದು ಶ್ರೀ ಕಟೀಲು ದುರ್ಗಾಪರಮೇಶ್ವರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಕೃಷ್ಣ ಕಾಂಚನ್ ತಿಳಿಸಿದರು.
ಅವರು ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನ ವಿದ್ಯಾರ್ಥಿ ಸಂಘದ ಉದ್ಘಾಟನೆಯನ್ನು ನೆರವೇರಿಸಿ ಜೀವನದಲ್ಲಿ ಬರುವ ಸೋಲುಗಳಿಗೆ ಕುಗ್ಗದೆ ನಿರಂತರ ಪ್ರಯತ್ನದ ಮೂಲಕ ಸಫಲತೆಯನ್ನು ಪಡೆಯಬೇಕು ಎಂದರು.
ಮುಖ್ಯ ಅತಿಥಿಯಾಗಿದ್ದ ಡಾ. ಉಮಪ್ಪ ಪೂಜಾರಿ ಪಿ. ಮಾತನಾಡುತ್ತಾ, ಬದಲಾಗುತ್ತಿರುವ ಜಗತ್ತಿನ ವಿದ್ಯಾಮಾನದೊಂದಿಗೆ ನಾವು ಬದಲಾದರೆ ಮಾತ್ರ ಯಶಸ್ಸು ಕಾಣಲು ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಸಂಚಾಲಕರಾದ ವಸಂತ್ ಕಾರಂದೂರ್ ವಹಿಸಿದ್ದರು. ಪ್ರಾಂಶುಪಾಲರು ಡಾ. ಆಶಾಲತಾ ಎಸ್. ಸುವರ್ಣ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಯತೀನ್, ನಾಯಕಿ ವೈಷ್ಣವಿ, ಕಾರ್ಯದರ್ಶಿ ಅಖಿಲೇಶ್ ಕುಮಾರ್, ಜೊತೆ ಕಾರ್ಯದರ್ಶಿ ಅಕ್ಷಿತಾ ಮತ್ತು ಪವಿತ್ರ ಉಪಸ್ಥಿತರಿದ್ದರು. ಡಾ|ಆಶಾಲತಾ ಸುವರ್ಣ ಸ್ವಾಗತಿಸಿದರು, ಅಕ್ಷಿತಾ ವಂದಿಸಿದರು, ಪ್ರೀತಿಕ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ