ಉಡುಪಿ: ಪ್ರೈಮ್ ಸಂಸ್ಥೆಯ 2023-24 ನೇ ಸಾಲಿನ ಐ.ಎ.ಎಸ್ / ಕೆ.ಎ.ಎಸ್ ತರಬೇತಿಯ ನೂತನ ಬ್ಯಾಚ್ ಉದ್ಘಾಟನಾ ಕಾರ್ಯಕ್ರಮ ಇತ್ತೀಚೆಗೆ ಪ್ರೈಮ್ ಬ್ರಹ್ಮಗಿರಿ ಉಡುಪಿ ಸಂಸ್ಥೆಯ ಸಭಾಂಗಣದಲ್ಲಿ ಜರಗಿತು.
ತೀರ ಅಸಾಧ್ಯ ಎಂದು ಪರಿಗಣಿಸಲಾಗಿದ್ದ ಚಂದ್ರನ ಭೂ ಸ್ಪರ್ಶವನ್ನು ಇಸ್ರೋ ವಿಜ್ಣಾನಿಗಳು ಯಾವ ರೀತಿ ಸಾಧ್ಯಗೊಳಿಸಿದರೋ, ಅದೇ ರೀತಿ ನಮ್ಮ ಕರಾವಳಿ ಜಿಲ್ಲೆಯ ಯುವಕ ಯುವತಿಯರು ಐ.ಎ.ಎಸ್, ಕೆ.ಎ.ಎಸ್ ಅಂತಹ ಮೇರು ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕು ಎನ್ನುವ ಆಶಯವನ್ನು ಡಾ. ರಾಧಾಕೃಷ್ಣ ಐತಾಳ್ಲ್ ನಿರ್ದೇಶಕರು, ಕೆನರಾ ಶಿಕ್ಷಣ ಸಂಸ್ಥೆ, ಮಂಗಳೂರು ಇವರು ಐ.ಎ.ಎಸ್ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಸಾಧನೆಗೆ ಶಿಸ್ತುಬದ್ದ ಕಲಿಕೆ, ದೃಡ ಸಂಕಲ್ಪ ಮತ್ತು ಬದ್ದತೆ ಅನಿವಾರ್ಯ. ಆಕಾಶದಷ್ಟು ಎತ್ತರದ ಗುರಿಯನ್ನು ಹೊಂದಿದ್ದರೆ ನಿರಂತರ ಕಲಿಕೆಯಿಂದ ಎಲ್ಲಾ ಅಡಚಣೆಗಳನ್ನು ನಿವಾರಿಸಿ ಗುರಿಯನ್ನು ತಲುಪಬಹುದು. ಈ ದೆಸೆಯಲ್ಲಿ ನಮ್ಮ ಬುದ್ದಿವಂತ ವಿದ್ಯಾರ್ಥಿಗಳು ಮುಂದೆ ಸಾಗಲಿ ಎಂದು ಹುರಿದುಂಬಿಸಿದರು.
ಸಂಸ್ಥೆಯ ನಿರ್ದೇಶಕರಾದ ಪ್ರೊ. ಗೋಪಾಲಕೃಷ್ಣ ಸಾಮಗ ಪ್ರಾಸ್ತಾವಿಕ ಮಾತುಗಳಲ್ಲಿ ಸಂಸ್ಥೆಯ ಸಾಧನೆಯ ಪುಟಗಳನ್ನು ಅಭ್ಯರ್ಥಿಗಳಿಗೆ ತೋರಿಸಿಕೊಟ್ಟರು.
ಸಂಸ್ಥೆಯ ಸ್ಥಾಪಕರಾದ ರತ್ನಕುಮಾರ್ ಮಾತನಾಡುತ್ತಾ, ಪ್ರೈಮ್ ಸಂಸ್ಥೆ ನಮ್ಮ ದೇಶಕ್ಕೆ ಅತ್ಯುತ್ತಮ ಐ.ಎ.ಎಸ್ ಅಧಿಕಾರಿಗಳನ್ನು ನೀಡುವ ಕನಸನ್ನು ಕಾಣುತ್ತಿದೆ ಎಂದು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು.
ಜಗಜೀವನ್ ನಾಯ್ಕ್ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ರಾಮಕೃಷ್ಣ ಪೈ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿ ಸೃಷ್ಟಿ ವಿ ಪ್ರಾರ್ಥನೆ ಮಾಡಿದರು. ರಾಜಮೂರ್ತಿ ರಾವ್ ಧನ್ಯವಾದ ಸಮರ್ಪಿಸಿದರು.
2023-24ನೇ ಸಾಲಿನ ಐ.ಎ.ಎಸ್/ಕೆ.ಎ.ಎಸ್ ಬ್ಯಾಚ್ ಶನಿವಾರದಂದು ಪ್ರಾರಂಭಗೊಳ್ಳಲಿದ್ದು, 350 ಗಂಟೆಗಳ ಈ ತರಬೇತಿ ಪ್ರತೀ ಶನಿವಾರ ಮಧ್ಯಾಹ್ನ 2.00-5.00 ಗಂಟೆಯವರೆಗೆ ಹಾಗೂ ಪ್ರತೀ ಬಾನುವಾರ ಬೆಳಿಗ್ಗೆ 9.30-4.30 ಗಂಟೆಯವರೆಗೆ ನಡೆಯಲಿದ್ದು, 2024 ರ ಮೇ ತಿಂಗಳಿನಲ್ಲಿ ಅಂತ್ಯಗೊಳ್ಳಲಿದೆ.
ಆಸಕ್ತರು ಹೆಚ್ಚಿನ ಮಾಹಿತಿಗೆ ಪ್ರೈಮ್, ಗ್ರೇಸ್ ಮೇನರ್ ಬಿಲ್ದಿಂಗ್, ಲಯನ್ಸ್ ಭವನದ ಹತ್ತಿರ, ಬ್ರಹ್ಮಗಿರಿ, ಉಡುಪಿ. 0820-4293422, 9243313632 ಇಲ್ಲಿಗೆ ಸಂಪರ್ಕಿಸಬಹುದು ಎಂದು ಸಂಸ್ಥೆಯ ನಿರ್ದೇಶಕರಾದ ಪ್ರೊ. ಗೋಪಾಲಕೃಷ್ಣ ಸಾಮಗ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ