ಪ್ರವಾಸ ತಾಣಗಳು ದಕ್ಷಿಣ ಕನ್ನಡದಲ್ಲಿ ಹೇರಳವಾಗಿದೆ. ಅವುಗಳನ್ನು ಕಣ್ಮನ ತುಂಬುವ ಕ್ಷಣಗಳಂತು ಅದ್ಭುತವಾಗಿರುತ್ತದೆ. ನನ್ನ ಜೀವನದಲ್ಲೂ ಇತಂಹ ಒಂದು ಕ್ಷಣವು ಆಗಮಿಸಿತು. ಅದೊಂದು ಮರೆಯಲಾಗದ ದಿನ. ಆ ದಿನ ಮುಂಜಾನೆ ಬೇಗನೆ ಎದ್ದು ಪ್ರವಾಸಕ್ಕೆ ತೆರಳುವುದು ಎಂದಾಗ ಎನೋ ಖುಷಿ. ಐದುಗಂಟೆಯ ಬೆಳ್ಳಿಗಿನ ಜಾವ. ಸುತ್ತಲುಕತ್ತಲಿನ ವಾತವರಣ ಹಕ್ಕಿಗಳ ಚಿಲಿಪಿಲಿ ಮೈಕೊರೆಯುವ ಚಳಿ, ಅದೇನೂ ಆದರೂ ಸಮಯ ಪಾಲನೆಯಿಂದ ಶಿಕ್ಷಕರು ಹೇಳಿದ ಮಾತಿಗೆ ಗೌರವಕೊಟ್ಟು ಕಾಲೇಜಿಗೆ ಬೇಗನೆ ಬಂದು ಬಿಟ್ಟೆವು. ಏನೋ ಸಂತೋಷ, ಗಲಿಬಿಲಿ, ನೂಕು -ನುಗ್ಗಲು ಬಸ್ಸಿನ ಸೀಟಿಗಾಗಿ, ಆರಂಭವಾಗಿಯೇ ಬಿಟ್ಟಿತು. ನಮ್ಮ ಪ್ರವಾಸದ ಪ್ರಯಾಣ ಗಡಾಯಿಕಲ್ಲಿಗೆ. ಸಂತೋಷ ಮುಗಿಲು ಮುಟ್ಟಿತು. ಮುಂಜಾನೆಯ ಪ್ರಯಾಣ ನಿಧಾನವಾಗಿ ಭಕ್ತಿಗೀತೆಗಳ ಹಾಡಿನ ಜೊತೆಗೆ ಅಕ್ಕ ಪಕ್ಕದ ನಿಸರ್ಗದ ಚೆಲುವು ಸವಿಯುತ್ತ ಪ್ರಯಾಣ ಸಾಗತೊಡಗಿತು. ಒಂದಿಷ್ಟು ಹುಡುಗರ ತುಂಟ ಮಾತುಗಳು, ಅಂದು ನಮ್ಮ ಶಿಕ್ಷಕರು ಕೂಡ ನಮ್ಮ ಗೆಳೆಯರಾಗಿ ಬಿಟ್ಟರು.
ನಮ್ಮ ಚಾರಣದ ಸ್ಥಳ ಬೆಳ್ತಂಗಡಿ ತಾಲೂಕಿನ ಪ್ರಸಿದ್ದ ಪ್ರವಾಸಿ ತಾಣ ಗಡಾಯಿಕಲ್ಲು. ಸುತ್ತಲು ಹಚ್ಚ ಹಸಿರಾಗಿರುವ ಬೆಟ್ಟ ಗುಡ್ಡಗಳು ಆಗಸದೆತ್ತರಕ್ಕೆ ನಿಂತಿರುವ ಮರಗಳು, ವಿಸ್ತಾರವಾದ ಪರ್ವತಗಳು ಇದನ್ನು ನೋಡುವುದೇ ಕಣ್ಣಿಗೊಂದು ಹಬ್ಬ, ಇದನ್ನು ನರಸಿಂಹಗಡ ಎಂದು ಕೂಡಾ ಕರೆಯುತ್ತಾರೆ. ಬೆಟ್ಟದ ಕಡೆಗೆ ಕಣ್ಣು ಹಾಯಿಸಿದಾಗ ಆಗಾಧವಾಗಿರುವ ಕಲ್ಲು ಬಂಡೆಗಳಿಂದ ಇಡೀ ಬೆಟ್ಟವೇ ಕಂಗೊಳಿಸುತ್ತಿತ್ತು. ಮೈ ರೋಮಾಂಚಗೊಂಡಿತು. ಗಡಾಯಿಕಲ್ಲನ್ನು ಹತ್ತುವ ಕಾತುರ ಮತ್ತಷ್ಟು ಹೆಚ್ಚಾಯಿತು. ನಮ್ಮ ಪ್ರಯಾಣವನ್ನು ಬೆಟ್ಟದ ಕಡೆಗೆ ಆರಂಭಿಸಿಯೇ ಬಿಟ್ಟೆವು..
ಆರಂಭದಲ್ಲಿ ತುಂಬಾ ಖುಷಿಯಿಂದ ಕಲ್ಲು -ಬಂಡೆಗಳನ್ನು ಮೆಟ್ಟಿಕೊಂಡು ಬೇಗ ಬೇಗನೆ ಹೆಜ್ಜೆಯನ್ನು ಹಾಕುತ್ತಾ, ಬೆಟ್ಟದ ಕಡೆ ಸಾಗಿದೆವು. ಸ್ನೇಹಿತರ ಸಂಕೋಲೆ ಬಹಳಷ್ಟು ವಿಸ್ತಾರವಾಗಿಸಿಕೊಂಡಿದ್ದೆವು. ಬೆಟ್ಟವನ್ನು ಹತ್ತುವಾಗ ಹಾಡುತ್ತಾ, ಚಪ್ಪಾಳೆ ತಟ್ಟುತ್ತಾ ಖುಷಿಯಿಂದಲೇ ಮುಂದೆ ಸಾಗಿದೆವು. ಗಡಾಯಿಕಲ್ಲಿನ ಪ್ರವೇಶದ ಆರಂಭದಲ್ಲಿ ಸಣ್ಣ ಸಣ್ಣ ಅಂಗಡಿಗಳಿದ್ದವು ಅಲ್ಲಿ ತಿನಿಸುಗಳ ದರ ಗಗನಕ್ಕೇರಿತು, ದಾರಿ ಮಧ್ಯೆ ವಿಶ್ರಮಿಸುತ್ತಾ ಹಸಿವಾದಾಗ ತಿಂಡಿ ತಿನಿಸುಗಳನ್ನು ತಿನ್ನುತ್ತಾ ಮುಂದೆ ಸಾಗಿದೆವು. ಕೆಲವರ ಪೇಚಾಟ ನೋಡುವಾಗ ಅಯ್ಯೋ ಅನಿಸುತ್ತಿತ್ತು. ಗಡಾಯಿಕಲ್ಲಿನ ತುತ್ತ ತುದಿಯನ್ನು ತಲುಪುಬೇಕು ಎಂಬ ಆಸೆ ನಮ್ಮದಾಗಿತ್ತು.
ವಿದ್ಯಾರ್ಥಿಗಳು ವೈವಿಧ್ಯಮಯವಾದ ಬಣ್ಣದ ಉಡುಗೆ ತೊಡುಗೆಗಳನ್ನು ತೊಟ್ಟು, ತಲೆಯಲ್ಲೊಂದು ಟೋಪಿ, ಕೈಯಲೊಂದು ನೀರಿನ ಬಾಟಲಿ, ಬೆನ್ನಿನಲೊಂದು ಬ್ಯಾಗ್ ಹಾಕಿಕೊಂಡು ಗಡಾಯಿಕಲ್ಲಿನ ತುತ್ತ ತುದಿಯನ್ನು ಹತ್ತಿದ್ದೆವು. ಗಟ್ಟಿಗರು ಬೆಟ್ಟವನ್ನು ಏರಿದರೆ ನಿಶಕ್ತರು ವಿಶ್ರಾಂತಿ ತೆಗೆದುಕೊಂಡು ಕುಳಿತು ಬಿಟ್ಟರು. ದಾರಿ ಮಧ್ಯೆ ಕಡಿದಾದ ಕಲ್ಲುಗಳು, ಕಣಿವೆ, ಪೊದೆ, ಗಿಡ, ಬಳ್ಳಿಗಳು ನಮ್ಮನ್ನು ಎದುರಾಗುತ್ತವೆ. ಹಾದಿ ಮಧ್ಯೆಯಲ್ಲಿ ಲೆಕ್ಕ ಸಿಗದಷ್ಟು ಚಿಕ್ಕಪುಟ್ಟ ತೊರೆಗಳು ಕಾಣಸಿಗುತ್ತದೆ. ಅಂತೂ ಇಂತೂ ನಾವು ಗಡಾಯಿಕಲ್ಲನ್ನು ತಲುಪಿಯೇ ಬಿಟ್ಟೆವು. ಆ ಸಮಯದಲ್ಲಿ ಸೂರ್ಯನು ತಲೆಯ ಮೇಲೆ ಬಂದೆ ಬಿಟ್ಟಿದ್ದನ್ನು. ಆ ಸ್ದಳವನ್ನು ತಲುಪಿ ಅಲ್ಲಿನ ದೃಶ್ಯವನ್ನು ನೋಡಿದ ಕಣ್ಮನ ತಂಬಿಕೊAಡೆವು. ಕೂಡಲೇ ಆಯಾಸವೆಲ್ಲವೂ ಕ್ಷಣಮಾತ್ರದಲ್ಲಿ ಕಣ್ಮರೆಯಾಯಿತು. ಇವೆಲ್ಲವನ್ನು ಕಣ್ಣು ತುಂಬಿಕೊಳ್ಳುವುದು ಕಣ್ಣಿಗೊಂದು ಹಬ್ಬ.
ಗುಡ್ಡದ ಮೇಲೆ ನಿಂತು ಪರಿಸರವನ್ನು ವೀಕ್ಷಿಸಿದಾಗ ಸುತ್ತಲೂ ಪರ್ವತ ಶಿಖರಗಳು ಕಾಣಿಸುತ್ತವೆ. ತಣ್ಣನೆಯ ಬಿರುಗಾಳಿ ಇವೆಲ್ಲ ಮೆಟ್ಟಿಲನ್ನು ಆಯಾಸವನೆಲ್ಲ ಪರಿಹರಿಸುತ್ತದೆ. ಗಡಾಯಿಕಲ್ಲಿನ ಬಗ್ಗೆ ಅಲ್ಲಿನ ಮಾರ್ಗದರ್ಶಕರು ತುಂಬಾ ಚೆನ್ನಾಗಿಯೇ ವಿವರಿಸಿದರು. ಕಾರ್ಯ ಸಾಹಸವೆಂದು ಭಾವಿಸಿದಾಗ ಸೆಲ್ಪಿ ತೆಗೆಯುವುದು ಯುವಜನತೆಯ ಹೊಸ ಶೈಲಿ. ಆ ಸೆಲ್ಪಿಯು ಗಡಾಯಿಕಲ್ಲಿನ ವಿಕ್ಷಣೆಗೆ ಸಾಕ್ಷಿಯಾಯಿತು. ಅಲ್ಲಿನ ಇತಿಹಾಸವನ್ನು ತಿಳಿದುಕೊಂಡು ಪ್ರಯಾಣವನ್ನು ಅಲ್ಲಿಗೆ ಮುಗಿಸಿ ಹಿಂತಿರುಗಿದೆವು. ಹಿಂದಕ್ಕೆ ಬರುವಾಗ ಅದೇ ದಾರಿಯಲ್ಲಿ ಪುನಃ ಪ್ರಕೃತಿ ಸೌಂದರ್ಯವನ್ನು ಅಸ್ವಾದಿಸುತ್ತಾ ಮರಳಿ ಬಂದೆವು.
ಮನಸ್ಸಿಗೆ ಕತ್ತಲೆ ಕವಿದಿತ್ತು. ಏಕೆಂದರೆ ನಮ್ಮ ಪ್ರವಾಸಕ್ಕೆ ಪೂರ್ಣ ವಿರಾಮ ನೀಡುವ ಸಮಯದ ಹತ್ತಿರ ಬಂದಿತ್ತು. ಒಲ್ಲದ ಮನಸ್ಸಿನಿಂದ ಬಸ್ಸು ಹತ್ತಿ ಕುಳಿತೆವು. ತಿರುಗಾಡಿ ಸುಸ್ತಾಗಿದ್ದರಿಂದ ಕೆಲವರ ಕಣ್ಣಿಗೆ ನಿದ್ರಾದೇವಿ ಆವರಿಸಿದ್ದಳು. ಎಚ್ಚರವಾದಾಗ ಪ್ರಯಾಣ ಮುಕ್ತವಾಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ