ನಿಟ್ಟೆ: ವಿಟಿಯು ಅಂತರ ಕಾಲೇಜು ಪುರುಷ ಮತ್ತು ಮಹಿಳೆಯರ ವಿಭಾಗದ ರಾಜ್ಯ ಮಟ್ಟದ ಯೋಗ ಸ್ಪರ್ಧೆಯು ಆ.30 ರಂದು ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಯಿತು. ಪಂದ್ಯಾವಳಿಯನ್ನು ಸಂಸ್ಥೆಯ ಹಳೆವಿದ್ಯಾರ್ಥಿನಿ ಮತ್ತು ರಾಷ್ಟ್ರೀಯ ಯೋಗ ಆಟಗಾರ್ತಿ ಶ್ರೀವಾಣಿ ಬೈರಿ ಅವರು ಉದ್ಘಾಟಿಸಿದರು. ಡಾ.ನಿರಂಜನ್ ಎನ್.ಚಿಪ್ಲುಂಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಂತಾರಾಷ್ಟ್ರೀಯ ಯೋಗ ರೆಫರಿ ನರೇಂದ್ರ ಕಾಮತ್, ವಿಟಿಯು ಬೆಳಗಾವಿಯ ದೈಹಿಕ ಶಿಕ್ಷಣ ವಿಭಾಗದ ಮಾಜಿ ನಿರ್ದೇಶಕ ರಂಗನಾಥ್ ಜಿ.ಎಚ್, ವಿಟಿಯು ಮಂಗಳೂರು ವಿಭಾಗದ ಪ್ರಾದೇಶಿಕ ನಿರ್ದೇಶಕಿ ವನೀಶಾ ರೊಡ್ರಿಗಸ್, ಕ್ರೀಡಾ ಆಡಳಿತಾಧಿಕಾರಿ ಶ್ಯಾಮ್ ಸುಂದರ್ ಎಂ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸ್ಪರ್ಧೆಯಲ್ಲಿ ಒಟ್ಟು 128 ಯೋಗ ಪಟುಗಳು ಭಾಗವಹಿಸಿದ್ದರು.
ಫಲಿತಾಂಶಗಳು:
ಪುರುಷರ ವಿಭಾಗ ವಿಜೇತರು:
1. ವಿಜೇತರು: ಬಿಎಂಎಸ್ ಕಾಲೇಜ್ ಆಫ್ ಎಂಜಿನಿಯರಿಂಗ್, ಬೆಂಗಳೂರು
2. ರನ್ನರ್ಸ್: ಎನ್ಎಂಎಎಂ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ನಿಟ್ಟೆ
3. ಎರಡನೇ ರನ್ನರ್ ಅಪ್: ಹೆಚ್.ಐ.ಟಿ, ನಿಡಸೋಸಿ
ಮಹಿಳಾ ವಿಭಾಗದ ವಿಜೇತರು:
1. ವಿಜೇತರು: ಬಿಎನ್ಎಂ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಬೆಂಗಳೂರು
2. ರನ್ನರ್ಸ್: ಬಿಎಂಎಸ್ ಕಾಲೇಜ್ ಆಫ್ ಇಂಜಿನಿಯರಿಂಗ್, ಬೆಂಗಳೂರು
3. ದ್ವಿತೀಯ ರನ್ನರ್ ಅಪ್: ಆರ್.ವಿ ಕಾಲೇಜ್ ಆಫ್ ಇಂಜಿನಿಯರಿಂಗ್, ಬೆಂಗಳೂರು
ವೈಯಕ್ತಿಕ ಫಲಿತಾಂಶಗಳು ಪುರುಷರ ವಿಭಾಗ (ಸ್ಥಾನ)
1. ವರಪ್ರಸಾದ್ ವಿ, ಬಿಐಟಿ, ಬೆಂಗಳೂರು
2. ರೋಹಿತ್ ವಿಹಾನ್ ಕೆ, ವಿವಿಸಿಇ, ಮೈಸೂರು
3. ಚರಣ್ ಕುಮಾರ್ ಎನ್, ಎಐಟಿ. ಬೆಂಗಳೂರು
4. ಎಸ್ ನೀರಜ್, ಎನ್ಎಂಎಎಂಐಟಿ, ನಿಟ್ಟೆ
5. ಸಾಧ್ವಿನ್ ಎಸ್ ಶೆಟ್ಟಿ, ಬಿಎಂಎಸ್ಸಿಇ, ಬೆಂಗಳೂರು
6. ಸಮ್ಮಿತ್ ಕೆ, ಬಿಎಂಎಸ್ ಕಾಲೇಜ್ ಆಫ್ ಎಂಜಿನಿಯರಿಂಗ್, ಬೆಂಗಳೂರು
ವೈಯಕ್ತಿಕ ಫಲಿತಾಂಶಗಳು ಮಹಿಳಾ ವಿಭಾಗ (ಸ್ಥಾನ)
1. ಗ್ರಿಷ್ಮಾ, ಕ್ಯಾಮ್ರಿಡ್ಜ್ ಐಟಿ, ಬೆಂಗಳೂರು
2. ಅಂಜಲಿ ಬಿ, ಮಹಾರಾಜ ಐಟಿ, ಮೈಸೂರು
3. ಗೌರಿ ಬಿ ಆರ್ ಕೆ, ಡಿಎಸ್ಸಿಇ, ಬೆಂಗಳೂರು
4. ಡಿ ಆರ್ ನೇಹಾ, ಬಿಎನ್ ಎಂಐಟಿ, ಬೆಂಗಳೂರು
5. ಅನುಶ್ರೀ, ಕ್ಯಾಂಬ್ರಿಡಿಗೆ ಐಟಿ, ಬೆಂಗಳೂರು
6. ಆರ್ಯುಕಾ ರಮೇಶ್, ಸಾಯಿ ವಿದ್ಯಾ ಐಟಿ, ಬೆಂಗಳೂರು.
ಬಹುಮಾನ ವಿತರಣಾ ಸಮಾರಂಭದಲ್ಲಿ ಅಂತಾರಾಷ್ಟ್ರೀಯ ಯೋಗ ರೆಫರಿ ನರೇಂದ್ರ ಕಾಮತ್, ರಾಷ್ಟ್ರೀಯ ಯೋಗ ರೆಫರಿ ಅಶೋಕ್ ಕುಮಾರ್ ಮತ್ತು ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಕಾಲೇಜಿನ ಕ್ರೀಡಾ ಆಡಳಿತಾಧಿಕಾರಿ ಶ್ಯಾಮ್ ಸುಂದರ್ ಎಂ ವಿಜೇತರಿಗೆ ಟ್ರೋಫಿ ಮತ್ತು ಪ್ರಮಾಣಪತ್ರಗಳನ್ನು ವಿತರಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ