ನಿಟ್ಟೆ: ಬೆಂಗಳೂರಿನ ವೆಮೆನಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ನಡೆದ ವಿಟಿಯು ಅಂತರ ಕಾಲೇಜು ರಾಜ್ಯ ಮಟ್ಟದ ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಕಾರ್ಕಳದ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಕಾಲೇಜಿನ ವೇಟ್ ಲಿಫ್ಟಿಂಗ್ ಪುರುಷರ ತಂಡವು 02 ಚಿನ್ನ ಮತ್ತು 03 ಬೆಳ್ಳಿ ಪದಕಗಳೊಂದಿಗೆ ಚಾಂಪಿಯನ್ಶಿಪ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ.
ಫಲಿತಾಂಶ:
1. 61 ಕೆ.ಜಿ. ವರ್ಗದಲ್ಲಿ- 4ನೇ ಸೆಮಿಸ್ಟರ್ ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿ ಬಿ.ಸೂರಜ್ ಭಂಡಾರಿಗೆ ದ್ವಿತೀಯ ಸ್ಥಾನ
2. 73 ಕೆ.ಜಿ. ವರ್ಗದಲ್ಲಿ - 7ನೇ ಸೆಮಿಸ್ಟರ್ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿ ಸತ್ಯದೀಪ್ ರಾವ್ ಗೆ ಪ್ರಥಮ ಸ್ಥಾನ
3. 81 ಕೆಜಿ ವಿಭಾಗದಲ್ಲಿ - 7ನೇ ಸೆಮಿಸ್ಟರ್ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿ ಪ್ರಸನ್ನ ಕುಮಾರ್ ಗೆ ದ್ವಿತೀಯ ಸ್ಥಾನ
4. 89 ಕೆಜಿ ವಿಭಾಗದಲ್ಲಿ - 7ನೇ ಸೆಮಿಸ್ಟರ್ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿ ಜೀತ್ ಬಿ ಕೋಟ್ಯಾನ್ ಗೆ ದ್ವಿತೀಯ ಸ್ಥಾನ
5. 109 ಕೆಜಿ ವಿಭಾಗದಲ್ಲಿ - 4ನೇ ಸೆಮಿಸ್ಟರ್ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿ ಸಮರ್ಜೀತ್ ಅಮೀನ್ ಪ್ರಥಮ ಸ್ಥಾನ ಗಳಿಸಿರುವರು ಎಂದು ಕಾಲೇಜಿನ ಪತ್ರಿಕಾ ಪ್ರಕಟಣೆಯು ತಿಳಿಸಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ