ಮೈಸೂರು: ಪೇಜಾವರ ಶ್ರೀಗಳ ಚಾತುರ್ಮಾಸ್ಯ ಸಮಾರೋಪ

Upayuktha
0


ಮೈಸೂರು: ಮೈಸೂರಿನಲ್ಲಿ ನಡೆಯುತ್ತಿರುವ ಪೇಜಾವರ ಶ್ರೀಪಾದರ 36 ನೇ ಚಾತುರ್ಮಾಸ್ಯದ ಸಮಾರೋಪ ಸಮಾರಂಭ ಇಂದು ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಅವಧೂತ ದತ್ತಪೀಠದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ವಹಿಸಿದ್ದರು. ದಿವ್ಯಸಾನಿಧ್ಯ ಸುತ್ತೂರು ಸಂಸ್ಥಾನದ ಶ್ರೀ ಶಿವರಾತ್ರೀಶ್ವರ ದೇಶಿಕೇಂದ್ರ ಸ್ವಾಮಿಜಿಯವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗೌರವಾನ್ವಿತ ಗೋವಾ ರಾಜ್ಯಪಾಲರಾದ ಪಿ.ಎಸ್ ಶ್ರೀಧರನ್ ಪಿಳ್ಯೈ ಆಗಮಿಸಿದ್ದರು.

 

ರಾಷ್ಟ್ರಗೀತೆಯೊಂದಿಗೆ ಸಭೆ ಪ್ರಾರಂಭವಾಯಿತು. ಗೋವಾ ರಾಜ್ಯಪಾಲರು ಸನಾತನ ಧರ್ಮದ ಬಗ್ಗೆ ಹಾಗೂ ಹಿರಿಯ ಗುರುಗಳು (ವಿಶ್ವೇಶ ತೀರ್ಥರು) ಕೇರಳ ಭಾಗದಲ್ಲಿ ಅಸ್ಪೃಶ್ಯತೆ ನಿವಾರಣೆಯನ್ನು ಮಾಡಿದ್ದರು. ಅದರಂತೆ ಈಗಿನ ಗುರುಗಳು ಕೂಡ (ವಿಶ್ವಪ್ರಸನ್ನ ತೀರ್ಥರು) ತಮ್ಮ ಗುರುಗಳ ಹಾದಿಯಲ್ಲಿ ಇದ್ದಾರೆ ಎಂದು ತಿಳಿಸಿದರು.




ಸಚ್ಚಿದಾನಂದ ಸ್ವಾಮಿಜಿಯವರು ಮಾನವ ಶರೀರ ಎಷ್ಟು ಮುಖ್ಯ ಎಂದು ತಿಳಿಸಿದರು. ಶ್ರೀ ಶಿವರಾತ್ರೀಶ್ವರ ಸ್ವಾಮೀಜಿಯವರು ವಿಶ್ವೇಶತೀರ್ಥರಿಗೆ ಲೋಕದಲ್ಲಿ ಸಮಾನ ಯಾರು ಎಂದರೆ ಅದು ವಿಶ್ವೇಶತೀರ್ಥರೆ ಹಾಗೂ ರಾಮಮಂತ್ರ ಜಪವನ್ನು ಎಲ್ಲರೂ ಜಪಿಸಿ ಎಂದು ಹೇಳಿದರು.


ಪೂಜ್ಯ ಪೇಜಾವರ ಶ್ರೀಗಳು ಸನಾತನ ಸಂಸ್ಕೃತಿಯನ್ನು ಉಳಿಸಬೇಕು ಎಂದು ಕರೆ ನೀಡಿದರು ಹಾಗೂ ರಾಜ್ಯಪಾಲರಿಗೆ ಅಭಿನಂದನೆಯನ್ನು ಮತ್ತು ಇಬ್ಬರು ಸ್ವಾಮೀಜಿಗಳಿಗೆ ಕೃತಜ್ಞತೆಯನ್ನು ತಿಳಿಸಿದರು.


ಗುರುವಂದನಾ ನುಡಿಗಳನ್ನು ಡಾ. ಆನಂದತೀರ್ಥಾಚಾರ್ ನಾಗಸಂಪಿಗೆಯವರು ಮಾಡಿದರು. ಕೊನೆಯಲ್ಲಿ ಎಲ್ಲರಲ್ಲೂ ರಾಷ್ಟ್ರ ಭಕ್ತಿ ಉಕ್ಕಿಸುವಂತೆ ರಾಷ್ಟ್ರಗೀತೆ ಮತ್ತೊಮ್ಮೆ ಮೊಳಗಿತು. ಸಭೆಯ ನಿರೂಪಣೆಯನ್ನು ವಾಸುದೇವ ಭಟ್ ಪೆರಂಪಳ್ಳಿ ನೆರೆವೆರಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)
To Top