ಶಿಷ್ಯ ವತ್ಸಲ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು

Upayuktha
0


ಈ ದೃಶ್ಯ, ಚಿತ್ರವನ್ನೊಮ್ಮೆ ಗಮನಿಸಿ.‌ ಪೂಜ್ಯ ಶ್ರೀ ಪೇಜಾವರ ಶ್ರೀಪಾದರಿಂದ ಸಂಮಾನಿಸಲ್ಪಡುತ್ತಿರುವ ವ್ಯಕ್ತಿ ಯಾರೋ ಘನ ವಿದ್ವಾಂಸರೋ (ಭವಿಷ್ಯದಲ್ಲಿ ಆ ಸ್ಥಾನಕ್ಕೇರಬಹುದು ಅದು ಬೇರೆ  ವಿಚಾರ). ಶ್ರೀಪಾದರಿಂದ ಶ್ರೀ ಮನ್ನ್ಯಾಯ ಸುಧಾಧ್ಯಯನವನ್ನು ಗೈಯುತ್ತಿರುವ ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದ ಓರ್ವ ವಿದ್ಯಾರ್ಥಿ. ಹೆಸರು ಪೂರ್ಣಪ್ರಜ್ಞ. ಉಡುಪಿ ಮೂಲದ ಹುಡುಗ. ಸರಿ ಆತನ ಯಾವ ಕೆಲಸಕ್ಕೆ ಈ ಸಂಮಾನ ಅಂತೀರಾ ಓರ್ವ ಸಾಮಾನ್ಯ ವಿದ್ಯಾರ್ಥಿಯನ್ನೂ ಸಂದರ್ಭಾನುಸಾರ ವಿಶೇಷವಾಗಿ ಪ್ರೋತ್ಸಾಹಿಸುವ ಶ್ರೀಗಳ ಶಿಷ್ಯ ವಾತ್ಸಲ್ಯಕ್ಕೊಂದು ಗೌರವದ ಪ್ರಣಾಮ.



ಶ್ರೀಗಳವರಲ್ಲಿ ವಿದ್ಯಾರ್ಜನೆಗೈಯುತ್ತಿರುವ ವಿದ್ಯಾರ್ಥಿಗಳ ತಂಡದಲ್ಲಿ ಒಂದು ವ್ಯವಸ್ಥೆ ಇದೆ. ಆ ತಂಡದ ಪ್ರತಿ ವಿದ್ಯಾರ್ಥಿಗಳಿಗೆ ಅಧ್ಯಯನದ ಜೊತೆಗೆ ಶ್ರೀಗಳ ನಿತ್ಯಾನುಷ್ಠಾನ, ಪಟ್ಟದ ದೇವರ ಪೂಜೆ, ಪ್ರವಚನ, ಅವರ ಸಂಚಾರ ಕಾರ್ಯಗಳು ಹೀಗೆ ಎಲ್ಲ ಕೆಲಸಗಳಲ್ಲಿ ಸಹಕರಿಸಲು ಈ ವಿದ್ಯಾರ್ಥಿಗಳಿಗೆ ಕೆಲಸಗಳನ್ನು ಹಂಚಿ ಹಾಕಲಾಗುತ್ತದೆ. ಈ ಎಲ್ಲಾ ಕೆಲಸಗಳನ್ನೂ ವಿದ್ಯಾರ್ಥಿಗಳಿಂದ ಸಮ್ಯಕ್ ನಿರ್ವಹಣೆಗಾಗಿ ಓರ್ವನನ್ನು ತಲಾ ಹದಿನೈದು ದಿನಗಳ ಕಾಲ ಪೂರ್ಣ ಉಸ್ತುವಾರಿಯಾಗಿ ಕಾರ್ಯನಿರ್ವಹಿಸುವ ಜವಾಬ್ದಾರಿಯನ್ನು ನೀಡಲಾಗುತ್ತದೆ. ಹದಿನೈದು ದಿನಗಳ ಬಳಿಕ ಮತ್ತೊಬ್ಬನಿಗೆ ಉಸ್ತುವಾರಿ ಹಸ್ತಾಂತರವಾಗುತ್ತದೆ. ಹೀಗೆ 15 ದಿನಗಳ ಜವಾಬ್ದಾರಿಯನ್ನು ನಿರ್ವಹಿಸಿದ ವಿದ್ಯಾರ್ಥಿಯನ್ನು ಗುರುಗಳು ಅಭಿನಂದಿಸಿ ಆಶೀರ್ವದಿಸಿದ ಪರಿ ಇದು. ತನ್ನ ಜೊತೆಗೆ ಅಧ್ಯಯನಾರ್ಥ ಇದ್ದು, ಅದರ ಜೊತೆಗೆ ವಹಿಸಿದ ಕರ್ತವ್ಯಗಳನ್ನು ನಿರ್ವಹಿಸಿದ ಶಿಷ್ಯನನ್ನು ಗುರುಗಳು ಸಂತೋಷಪಡಿಸುವ ಈ ಪರಿಯೇ ಭಾರತದ ಪ್ರಾಚೀನ ಗುರುಕುಲ ಪದ್ಧತಿಯ ಶ್ರೇಷ್ಠ ಪರಿ.



ಇದನ್ನು ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಇತ್ತೀಚೆಗೆ ನಡೆಸಿದ ಒಂದು ಸಣ್ಣ ಆದರೆ ಅಷ್ಟೇ ಅಮೂಲ್ಯವಾದ ಒಂದು ಸಂದರ್ಭವನ್ನು ಹಂಚಿಕೊಳ್ತಾ ಇದ್ದೇನೆ.‌ ಈ ಹಿಂದೆ ಕಿರ್ತಿಶೇಷ ಶ್ರೀ ವಿಶ್ವೇಶತೀರ್ಥ ಶ್ರೀಪಾದರೂ ಇದೇ ಬಗೆಯ ಶಿಷ್ಯ ವಾತ್ಸಲ್ಯವನ್ನು ಹೊಂದಿದ್ದರು. ಅಲ್ಲದೇ ಈಗಲೂ ಶಾಸ್ತ್ರಾಧ್ಯಾಪನಾದಿಗಳನ್ನು ಚಾಚೂ ತಪ್ಪದೇ ನಡೆಸುತ್ತಿರುವ ಅನೇಕ ಮಠಾಧಿಪತಿಗಳೂ ಇದೇ ರೀತಿಯಲ್ಲಿ ಶಿಷ್ಯರನ್ನು ಪ್ರೋತ್ದಾಹಿಸುತ್ತಿರುವುದೂ ನಮ್ಮಲ್ಲಿ ಇಂದಿಗೂ ಪ್ರಾಚೀನ‌ ಶಿಕ್ಷಣ ಪದ್ಧತಿಯ ಬೇರುಗಳು ಜೀವಂತವಾಗಿರುವುದರ ದ್ಯೋತಕ ಎನ್ನಬಹುದು. ಸದ್ಯಕ್ಕಂತೂ ಶಿಷ್ಯವತ್ಸಲ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಪಾದಾರವಿಂದಕ್ಕೆ ಗೋವಿಂದಾ..ನ್ನಿ ಗೋವಿಂದ ಅನ್ನೋಣ 


-ಜಿ. ವಾಸುದೇವ ಭಟ್, ಪೆರಂಪಳ್ಳಿ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top