ಪೇಜಾವರ ಶ್ರೀಗಳಿಗೆ ಮೈಸೂರು ಭಕ್ತರಿಂದ ತುಲಾಭಾರ, ಪುಷ್ಪವೃಷ್ಟಿಯ ಗೌರವ

Upayuktha
0


ಮೈಸೂರು: ಅರಮನೆ ನಗರಿ ಮೈಸೂರಿನಲ್ಲಿ ತಮ್ಮ ಚಾತುರ್ಮಾಸ್ಯ ವ್ರತವನ್ನು ಸಂಕಲ್ಪಿಸಿ ವೈವಿಧ್ಯಮಯವಾದ ನಿರಂತರ ಧಾರ್ಮಿಕ ಸಾಮಾಜಿಕ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಧರ್ಮಜಾಗೃತಿಯ ಜೊತೆಗೆ ಮೈಸೂರು ನಗರವನ್ನು ಪುನೀತರನ್ನಾಗಿಸಿದ ಶ್ರೀ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರಿಗೆ ಭಾನುವಾರ ಮೈಸೂರು ನಾಗರಿಕರ ಪರವಾಗಿ ವೈಭವದ ತುಲಾಭಾರ ಸೇವೆಗೈದು ಪುಷ್ಪವೃಷ್ಟಿಗೈದು ಗೌರವಿಸಲಾಯಿತು.  ಚಾತುರ್ಮಾಸ್ಯ ಸಮಿತಿ ಮತ್ತು ಶ್ರೀ ಕೃಷ್ಣ ಮಂಡಳಿಯ ನೇತೃತ್ವದಲ್ಲಿ ಈ ಕಾರ್ಯಕ್ರಮ ನೆರವೇರಿತು. ಪಟ್ಟದ ದೇವರಾದ ರಾಮ‌ ಕೃಷ್ಣ ವಿಠಲ ದೇವರನ ಕೈಯಲ್ಲಿ ಹೊತ್ತ ಶ್ರೀಗಳನ್ನು ತಕ್ಕಡಿಯಲ್ಲಿ ಕೂಡಿಸಿ ಇನ್ನೊಂದು ಕಡೆ ಫಲವಸ್ತುಗಳು ಧನ ಕನಕ ಸಹಿತ  ದಿವ್ಯ ವಸ್ತುಗಳನ್ನಿಟ್ಟು ತೂಗಿಸಿ ಮಂಗಳಾರತಿ ಬೆಳಗಲಾಯಿತು. ಮಠದ ವಿದ್ಯಾರ್ಥಿಗಳು ಚಂಡರವಾದನ ಮತ್ತು ಮಂತ್ರ ಘೋಷಗೈದರು.




ಮೈಸೂರು: ಮನಸೂರೆಗೊಂಡ ಎಂ ಡಿ ಪಲ್ಲವಿ ಗಾನ ಸುಧೆ ; ಕಿಕ್ಕಿರಿದ ಜನಸ್ತೋಮ

ಮೈಸೂರಿನಲ್ಲಿ ನಡೆಯುತಗತಿರಯವ ಪೇಜಾವರ ಶ್ರೀಗಳ ಚಾತುರ್ಮಾಸ್ಯದ ಸಾಂಸ್ಕೃತಿಕ ಸರಣಿ ಕಾರ್ಯಕ್ರಮಗಳ ಅಂಗವಾಗಿ ಅಂತಾರಾಷ್ಟ್ರೀಯ ಖ್ಯಾತಿಯ ಗಾಯಕಿ ಎಂ ಡಿ ಪಲ್ಲವಿಯವರಿಂದ ಗಾನ ಸುಧೆ ನೆರೆದ ಕಿಕ್ಕಿರಿದ ಜನಸ್ತೋಮದ ಮನಸೂರೆಗೊಂಡಿತು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top