ಸೆ.23ರಂದು ಹಿರಿಯ ನಾಗರಿಕರಿಗೆ ಕ್ರೀಡಾಕೂಟ

Upayuktha
0


ಮಂಗಳೂರು: ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಪ್ರಯುಕ್ತ ಜಿಲ್ಲಾಮಟ್ಟದಲ್ಲಿ ಹಿರಿಯ ನಾಗರಿಕ ಇಲಾಖೆಯಿಂದ ವಿವಿಧ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಸೆ.23ರಂದು ಬೆಳಿಗ್ಗೆ 9 ಗಂಟೆಗೆ ಕರ್ನಾಟಕ ಎಜುಕೇಶನ್ ಸೊಸೈಟಿ ಕೆಸೆಸ್ ಕಾಂಪೌಂಡ್ ಬಲ್ಮಠದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.

 

ಸ್ಪರ್ಧೆಗಳು:

60ರಿಂದ 69ವರ್ಷ ವಯೋಮಿತಿಯವರಿಗೆ 200.ಮೀ ನಡಿಗೆ ಮತ್ತು ರಿಂಗ್ ಬಗೆಟ್‍ನಲ್ಲಿ ಎಸೆಯುವುದು ಮತ್ತು ಮ್ಯೂಸಿಕಲ್ ಚೇರ್. 70ರಿಂದ 79ವರ್ಷ ವಯೋಮಿತಿಯವರಿಗೆ 100.ಮೀ ನಡಿಗೆ ಮತ್ತು ರಿಂಗ್ ಬಜೆಟ್‍ನಲ್ಲಿ ಎಸೆಯುವುದು ಮತ್ತು ಮ್ಯೂಸಿಕಲ್ ಚೇರ್. 80 ವರ್ಷ ಮೇಲ್ಪಟ್ಟವರಿಗೆ 75 ಮೀಟರ್ ನಡಿಗೆ ಮತ್ತು ರಿಂಗ್ ಬಕೆಟ್‍ನಲ್ಲಿ ಎಸೆಯುವುದು ಮತ್ತು ಮ್ಯೂಸಿಕಲ್ ಚೇರ್.


ಮಹಿಳೆಯರಿಗೆ:

60ರಿಂದ 69 ವರ್ಷ ವಯೋಮಿತಿಯವರಿಗೆ 400 ಮಿ. ನಡಿಗೆ ಮತ್ತು ರಿಂಗ್ ಬಕೆಟ್‍ನಲ್ಲಿ ಎಸೆಯುವುದು ಮತ್ತು ಮ್ಯೂಸಿಕಲ್ ಚೇರ್. 70ರಿಂದ 79ವರ್ಷ ವಯೋಮಿತಿಯವರಿಗೆ 200 ಮೀ. ನಡಿಗೆ ಮತ್ತು ರಿಂಗ್ ಬಕೆಟ್‍ಗೆ ಎಸೆಯುವುದು ಮತ್ತು ಮ್ಯೂಸಿಕಲ್ ಚೇರ್, ಹಾಗೂ 80ವರ್ಷ ಮೇಲ್ಪಟ್ಟವರಿಗೆ 100 ಮೀ. ನಡಿಗೆ ಮತ್ತು ರಿಂಗ್  ಬಕೆಟ್‍ಗೆ  ಎಸೆಯುವುದು ಮತ್ತು ಮ್ಯೂಸಿಕಲ್ ಚೇರ್.


ಪುರುಷರಿಗೆ ಮತ್ತು ಮಹಿಳೆಯರಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು:

60ರಿಂದ 79 ವರ್ಷ, 70ರಿಂದ 79 ವರ್ಷ ಮತ್ತು 80ವರ್ಷ ಮೇಲ್ಪಟ್ಟ ವಯೋಮಿತಿಯವರಿಗೆ ಏಕ ಪಾತ್ರ ಅಭಿನಯ ಮತ್ತು ಗಾಯನ ಸ್ಪರ್ಧೆ ಹಾಗೂ ಚಿತ್ರಕಲೆ. ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸುವ ಹಿರಿಯ ನಾಗರಿಕರು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಾಗವಹಿಸುವಂತಿಲ್ಲ. ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಾಗವಹಿಸುವ ಹಿರಿಯ ನಾಗರಿಕರು ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸುವಂತಿಲ್ಲ. ಅಕ್ಟೋಬರ್1ರ ವಿಶ್ವ ಹಿರಿಯ ನಾಗರೀಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ವಿಜೇತರರಿಗೆ ಬಹುಮಾನವನ್ನು ವಿತರಿಸಲಾಗುವುದು ಎಂದು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣದ ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

'ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

Post a Comment

0 Comments
Post a Comment (0)
To Top