ಮಂಗಳೂರು: ಭಾರತದ ಪ್ರಮುಖ ಫ್ಯಾಷನ್‍ಕೇಂದ್ರವಾದ ಲೈಫ್‍ಸ್ಟೈಲ್ ಮಳಿಗೆ ಅತ್ಯಪೂರ್ವ ಶೈಲಿಯ ಆಟಂ- ವಿಂಟರ್ ಸಂಗ್ರಹವನ್ನು ಅನಾವರಣಗೊಳಿಸಿದೆ.
ಸ್ಟಾಕ್‍ಹೋಮ್ ಮೂಲದ ತಜ್ಞ ತೆರೆಜಾ ಒರ್ಟಿಜ್ ಅವರು ಈ ವಿಶೇಷ ಅಭಿಯಾನಕ್ಕೆ ನೆರವಾಗಿದ್ದು, ಬದಲಾಗುತ್ತಿರುವ ಋತುಗಳಿಗೆ ಅನುಸಾರವಾಗಿ ವೈವಿಧ್ಯಮಯ ಆದ್ಯತೆಗಳನ್ನು ಪೂರೈಸುವ ವಿನ್ಯಾಸಗಳು, ಶೈಲಿಗಳು ಮತ್ತು ಬಣ್ಣಗಳ ಆಕರ್ಷಕ ಶ್ರೇಣಿಯನ್ನು ಒದಗಿಸುತ್ತಿದೆ ಎಂದು ಮಾರ್ಕೆಟಿಂಗ್ ವಿಭಾಗದ ಸಹಾಯಕಉಪಾಧ್ಯಕ್ಷರಾದರೋಹಿಣಿ ಹಲ್ಡಿಯಾ ಹೇಳಿದ್ದಾರೆ.
ಲೈಫ್‍ಸ್ಟೈಲ್ ಆರಾಮದಾಯಕವಾದ ಶೈಲಿಯೊಂದಿಗೆ ಸೌಕರ್ಯವನ್ನು ಸಂಯೋಜಿಸುವ ಆಯ್ಕೆಯನ್ನು ಗ್ರಾಹಕರಿಗೆ ನೀಡುತ್ತಿದೆ. ಕಾರ್ಡಿಗನ್ಸ್ ಮತ್ತು ಹಗುರವಾದ ಜಾಕೆಟ್‍ಗಳಂತಹ ಉಡುಪುಗಳು, ಕಪ್ಪು, ಬಿಳಿ ಮತ್ತು ಮ್ಯೂಟ್ ಮಾಡಿದ ಗ್ರೇ ಬಣ್ಣಗಳ ಕ್ಲಾಸಿಕ್ ಛಾಯೆಗಳಲ್ಲಿ ದೊರೆಯಲಿದೆ. ಹಾಗೇ ನಯವಾದ ಸಿಲೂಯೆಟ್‍ಗಳ ಸಂಗ್ರಹವೂ ಇಲ್ಲಿವೆ. ಸೊಗಸಾದ ಮತ್ತು ಕ್ಲಾಸಿಕ್ ಮೇಳಗಳ ಶ್ರೇಣಿಯನ್ನು ಅನಾವರಣಗೊಳಿಸುವ ಮೂಲಕ ಮೆಲಾಂಜ್ ಸಂಗ್ರಹವು ಹಬ್ಬದ ಸಂದರ್ಭಕ್ಕೆ ಮತ್ತಷ್ಟು ರಂಗುತುಂಬಲಿದೆ ಎಂದು ಪ್ರಕಟಣೆ ಹೇಳಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ