ಮಂಗಳೂರು: ನಮ್ಮ ದೇಶದಲ್ಲಿ ಅಲಂಕಾರಿಕ ಮೀನು ಸಂಪನ್ಮೂಲವು ಹೇರಳವಾಗಿದ್ದು, ಮೀನು ಕೃಷಿಕರ ಸಾಮಾಜಿಕ ಮತ್ತು ಆರ್ಥಿಕ ಭದ್ರತೆಯನ್ನು ಬಲಪಡಿಸುವಲ್ಲಿ ಈ ತರಬೇತಿ ಕಾರ್ಯಕ್ರಮವು ಸಹಕಾರಿಯಾಗಲಿದೆ ಎಂದು ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಪ್ರಧಾನ ವ್ಯವಸ್ಥಾಪಕ ಮಹೇಶ್ ಕುಮಾರ್ ಅವರು ಅಭಿಪ್ರಾಯ ಪಟ್ಟರು.
ಅವರು ಸೆ.25ರಂದು ನಗರದ ಎಕ್ಕೂರಿನ ಮೀನುಗಾರಿಕೆ ಅರ್ಥಶಾಸ್ತ್ರ, ಸಂಖ್ಯಾಶಾಸ್ತ್ರ ಮತ್ತು ವಿಸ್ತರಣಾ ವಿಭಾಗ, ಮೀನುಗಾರಿಕಾ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿ(ಓಈಆಃ), ಹೈದರಾಬಾದ್ ನವರ ಸಹಯೋಗದೊಂದಿಗೆ “ಕರಾವಳಿ ಪ್ರದೇಶದಲ್ಲಿ ಅಲಂಕಾರಿಕ ಮೀನುಕೃಷಿ” ಕುರಿತು 3 ದಿನಗಳ ಕೌಶಲ್ಯಾಭಿವೃದ್ಧಿ ತರಬೇತಿ ಉದ್ಘಾಟಿಸಿ ಮಾತನಾಡಿದರು.
ಗೌರವಾನ್ವಿತ ಅತಿಥಿಯಾಗಿ ಆಗಮಿಸಿದ ವಾಮಂಜೂರಿನ ಅಕ್ವಾಟಿಕ್ ಬಯೋಸಿಸ್ಟಮ್‍ನ ಸಂಸ್ಥಾಪಕರು ಹಾಗೂ ಮಂಗಳೂರಿನ ಪ್ರಸಿದ್ಧ ಅಲಂಕಾರಿಕ ಮೀನುಕೃಷಿಯ ಉದ್ಯಮಿ ರೊನಾಲ್ಡ್ ಡಿಸೋಜ ಅವರು ಶಿಬಿರಾರ್ಥಿಗಳಿಗೆ ಅಲಂಕಾರಿಕ ಮೀನಿನ ಮಾರುಕಟ್ಟೆ ವ್ಯವಸ್ಥೆ ಕುರಿತು ಕಿರು ಪರಿಚಯ ನೀಡಿದರು.
ಮೀನುಗಾರಿಕಾ ಮಹಾವಿದ್ಯಾಲಯದ ಡೀನ್ ಡಾ. ಎಚ್.ಎನ್. ಆಂಜನೇಯಪ್ಪ ಅಧ್ಯಕ್ಷತೆ ವಹಿಸಿದ್ದರು. ಸಂಯೋಜಕರಾದ ಡಾ. ಎಸ್. ಆರ್. ಸೋಮಶೇಖರ್ ಕಾರ್ಯಕ್ರಮದ ಕುರಿತು ಸಂಕ್ಷಿಪ್ತ ಮಾಹಿತಿ ನೀಡಿದರು.
ವಂದನಾ ನಿರೂಪಿಸಿದರು. ಡಾ. ತೇಜಸ್ವಿ ಕುಮಾರ್ ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


