ಮಂಗಳೂರು: ಮಹೀಂದ್ರಾ ಉದ್ಯಮ ಸಮೂಹದ ಮಹೀಂದ್ರಾ ಟ್ರಕ್ ಮತ್ತು ಬಸ್ ವಿಭಾಗ' (ಎಂಟಿಬಿಡಿ) ವತಿಯಿಂದ ಹೆಣ್ಣುಮಕ್ಕಳ ಉನ್ನತ ಶಿಕ್ಷಣದ ಹಕ್ಕನ್ನು ಬೆಂಬಲಿಸಿ ಅವರ ಜೀವನವನ್ನು ಪರಿವರ್ತಿಸುವ ನಿಟ್ಟಿನಲ್ಲಿ ಈ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. 'ಮಹೀಂದ್ರಾ ಸಾರಥಿ ಅಭಿಯಾನ'ದ ಮೂಲಕ ಟ್ರಕ್ ಚಾಲಕರ ಹೆಣ್ಣುಮಕ್ಕಳಿಗೆ ವಿದ್ಯಾರ್ಥಿವೇತನವನ್ನು ನೀಡಲು ಉದ್ದೇಶಿಸಲಾಗಿದೆ.
ಯಾವುದೇ ವಾಣಿಜ್ಯ ವಾಹನಗಳ ಕಂಪನಿ ನೀಡುತ್ತಿರುವ ಮೊಟ್ಟಮೊದಲ ನೆರವು ಇದಾಗಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ.10,000 ವಿದ್ಯಾರ್ಥಿವೇತನ ಮತ್ತು ಅವರ ಸಾಧನೆಯನ್ನು ಗುರುತಿಸಿ ಪ್ರಮಾಣಪತ್ರವನ್ನು ನೀಡಿ ಗೌರವಿಸಲಾಗುತ್ತದೆ ಎಂದು ಮಹೀಂದ್ರಾ & ಮಹೀಂದ್ರಾ ಲಿಮಿಟೆಡ್‍ನ ವಾಣಿಜ್ಯ ವಾಹನ ವಿಭಾಗದ ವ್ಯವಹಾರ ಮುಖ್ಯಸ್ಥ ಜಲಜ್ ಗುಪ್ತಾ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಈ ವಿದ್ಯಾರ್ಥಿವೇತನಕ್ಕೆ ಆಯ್ಕೆಯಾದ ಪ್ರತಿ ಬಾಲಕಿಗೆ 10,000 ರೂ.ಗಳ ನೇರ ಬ್ಯಾಂಕ್ ವರ್ಗಾವಣೆ ಮಾಡಲು ಮತ್ತು ಈ ಸಾಧನೆಯನ್ನು ಗುರುತಿಸಿ ಪ್ರಮಾಣಪತ್ರವನ್ನು ನೀಡುವ ಮೂಲಕ ಸನ್ಮಾನಿಸಲು ಕಂಪನಿಯು ಯೋಜಿಸಿದೆ. ಮುಂದಿನ ವರ್ಷದ ಜನವರಿಯಲ್ಲಿ ಮಹೀಂದ್ರಾ ಟ್ರಕ್ ಮತ್ತು ಬಸ್ ಲೀಡರ್‌ಶಿಪ್ ಇಂಡಿಯಾ' ಆಯ್ದ ಸ್ಥಳಗಳಲ್ಲಿ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಿದ್ದು, ಇದರಲ್ಲಿ ಟ್ರಕ್ ಚಾಲಕರ ಹೆಣ್ಣುಮಕ್ಕಳಿಗೆ ಮತ್ತೆ 1100 ವಿದ್ಯಾರ್ಥಿವೇತನಗಳನ್ನು ನೀಡಲಾಗುವುದು ಎಂದು ವಿವರಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ