ಕುಪ್ಪೆಪದವು: ವಿವಿಧ ಸೌಲಭ್ಯ ಉದ್ಘಾಟನೆ, ಕಾಮಗಾರಿಗೆ ಶಾಸಕ ಡಾ. ಭರತ್ ಶೆಟ್ಟಿ ಚಾಲನೆ

Upayuktha
0


ಕುಪ್ಪೆಪದವು: ಶ್ರೀ ನಾರಾಯಣ ಗುರು ಸೇವಾ ಸಮಿತಿ ಕುಪ್ಪೆ ಪದವು ಇದರ ವತಿಯಿಂದ 169ನೇ ಗುರು ಪೂಜೆಯ ಆಚರಣೆ ಹಾಗೂ ವಿವಿಧ ಸೌಲಭ್ಯದ ಉದ್ಘಾಟನೆ, ಕಾಮಗಾರಿಗೆ ಚಾಲನೆ ಕಾರ್ಯಕ್ರಮ ಭಾನುವಾರ ಜರಗಿತು.


ಜಿಲ್ಲಾ ಪಂಚಾಯತ್ 4 ಲಕ್ಷ ರೂ. ಅನುದಾನದಲ್ಲಿ ಸಂಘಕ್ಕೆ ಕೊಡ ಮಾಡಿದ ಶೌಚಾಲಯದ  ಉದ್ಘಾಟನೆ, 5 ಲಕ್ಷ ರೂ.ಸಂಸದರ ಅನುದಾನದಲ್ಲಿ  ಸಂಘದ ತಡೆಗೋಡೆಗೆ ಗುದ್ದಲಿ ಪೂಜೆಯನ್ನು ಶಾಸಕರಾದ ಡಾ.ಭರತ್ ಶೆಟ್ಟಿ ವೈ ಈ ಸಂದರ್ಭ  ನೆರವೇರಿಸಿದರು. ಸಂಘದ ವತಿಯಿಂದ ಶಾಸಕರಿಗೆ ಸಮ್ಮಾನ ನೆರವೇರಿಸಲಾಯಿತು.


ಸಂಘದ ಅಧ್ಯಕ್ಷರಾದ ರಾಮಚಂದ್ರ ಸಾಲಿಯನ್, ಕಾರ್ಯದರ್ಶಿ ರಘು ಎಂ ಅಗರಿ,ಯುವ ವೇದಿಕೆಯ ಅಧ್ಯಕ್ಷರಾದ ಶೇಖರ್ ಪೂಜಾರಿ, ಉಪಾಧ್ಯಕ್ಷರಾದ ಚಂದ್ರ ಬಿ, ಮಹಾಬಲ ಸಾಲಿಯಾನ್, ವಿನೋದ್ ಕುಮಾರ್ ಅಂಬೆ ಲೊಟ್ಟು,ಮುತ್ತೂರು ಪಂಚಾಯಿತಿನ ಮಾಜಿ ಅಧ್ಯಕ್ಷರಾದ ಸತೀಶ್ ಬಲ್ಲಾಜೆ, ನೂತನ ಅಧ್ಯಕ್ಷರಾದ ಪ್ರವೀಣ್ ಅಲ್ವಾ ಗುಂಡ್ಯ, ಉಪಾಧ್ಯಕ್ಷರಾದ ಸುಷ್ಮಾ,ಜಿಲ್ಲಾ ಪಂಚಾಯತಿ ಮಾಜಿ ಸದಸ್ಯರಾದ ಕೃಷ್ಣ ಅಮೀನ್, ದುರ್ಗೇಶ್ವರಿ ಜಿ ದೇವಸ್ಥಾನದ ಆಡಳಿತ ಮುಖ್ಯಸ್ಥರಾದ ಪ್ರವೀಣ್ ಕುಮಾರ್ ಜೈನ್, ಮುತ್ತೂರು ಗ್ರಾಮ ಪಂಚಾಯತ್ ಸದಸ್ಯರಾದ  ಶಶಿಕಲಾ, ಬಿಲ್ಲವ ಮುಖಂಡರು ಉಪಸಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

إرسال تعليق

0 تعليقات
إرسال تعليق (0)
To Top