ಕೆ.ಆರ್.ಪೇಟೆ: ಪಟ್ಟಣದ ಸಾಹುಕಾರ್ ಚನ್ನೇಗೌಡ ಕಾಂಪ್ಲೆಕ್ಸ್ ನಲ್ಲಿರುವ ತಾಲ್ಲೂಕು ಶ್ರೀ ಕಾಳಿದಾಸ ಪತ್ತಿನ ಸಹಕಾರ ಸಂಘದ 2022-23ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷರಾದ ಮಾರ್ಗೋನಹಳ್ಳಿ ಜವರೇಗೌಡ ಅವರ ಅಧ್ಯಕ್ಷತೆಯಲ್ಲಿ ಭಾನುವಾರ ನಡೆಯಿತು.
ಶ್ರೀ ಕಾಳಿದಾಸ ಮಹರ್ಷಿಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಂಘದ ಅಧ್ಯಕ್ಷರಾದ ಜವರೇಗೌಡ ಅವರು, ನಮ್ಮ ಕಾಳಿದಾಸ ಪತ್ತಿನ ಸಹಕಾರ ಸಂಘವು 2022-23ನೇ ಸಾಲಿನಲ್ಲಿ ಸುಮಾರು 2 ಲಕ್ಷ ರೂಪಾಯಿಗಳ ಆದಾಯದಲ್ಲಿ ಮುನ್ನಡೆಯುತ್ತಿರುವುದು ಸಂತೋಷದ ವಿಚಾರವಾಗಿದೆ. ಇದಕ್ಕೆ ಸಂಘದ ಶೇರುದಾರರು ಹಾಗೂ ಆಡಳಿತ ಮಂಡಳಿಯ ನಿರ್ದೇಶಕರ ಸಹಕಾರ ಹಾಗೂ ಸಂಘದ ಕಾರ್ಯದರ್ಶಿಯವರ ಪರಿಶ್ರಮ ಕಾರಣವಾಗಿದೆ. ಸಂಘದ ನಿರ್ದೇಶಕರು ತಮ್ಮ ವ್ಯಾಪ್ತಿಯ ಸಾಲಗಾರರಿಂದ ಅವರ ಮನವೊಲಿಸಿ ಸಾಲ ಮತ್ತು ಬಡ್ಡಿಯನ್ನು ಸಂಘಕ್ಕೆ ಮರುಪಾವತಿ ಮಾಡಿಸಿದ ಕಾರಣ ಸಂಘದ ಲಾಭದತ್ತ ದಾಪುಗಾಲು ಇಟ್ಟಿದೆ. ಆದರೂ ಸಹ ಇನ್ನೂ ಸಹ ಹಳೆಯ ಸಾಲಗಾರರು ಸಾಲ ವಾಪಸ್ ಕಟ್ಟಲು ಮುಂದೆ ಬಂದರೆ ಇನ್ನೂ ಹೆಚ್ಚಿನ ಲಾಭ ಗಳಿಸಲು ಸಾಧ್ಯವಾಗುತ್ತದೆ. ಇದಕ್ಕೆ ಸಂಘದ ನಿರ್ದೇಶಕರು ಹೆಚ್ಚಿನ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದರು.
ಜೊತೆಗೆ ನಿಶ್ಚಿತ ಠೇವಣಿ, ಪಿಗ್ಮಿ ಖಾತೆ, ಉಳಿತಾಯ ಖಾತೆ ತೆರೆಯುವ ಮೂಲಕ ಸಂಘದ ಅಭಿವೃದ್ಧಿಗೆ ಶೇರುದಾರರು ಕೈಜೋಡಿಸಬೇಕು. ಸಂಘವು ಕಳೆದ 12ವರ್ಷಗಳ ಹಿಂದೆ ಪ್ರತಿ ಶೇರು 1 ಸಾವಿರ ರೂ ನಿಗಧಿ ಮಾಡಿತ್ತು. ಆದರೆ ಈಗ ಸಹಕಾರ ಇಲಾಖೆಯ ಆದೇಶದ ಪ್ರಕಾರ ಕಳೆದ ವಾರ್ಷಿಕ ಮಹಾಸಭೆಯಲ್ಲಿ ಶೇರು ದರವನ್ನು 1 ಸಾವಿರದಿಂದ ಎರಡು ಸಾವಿರಕ್ಕೆ ಹೆಚ್ಚಿಸಲಾಗಿದೆ. ಹಾಗಾಗಿ ಶೇರುದಾರರು 2024ರ ಮಾರ್ಚ್ 31ರೊಳಗೆ ಎಲ್ಲಾ ಶೇರುದಾರರು ಹೆಚ್ಚುವರಿಯಾಗಿ 1 ಸಾವಿರ ರೂ ಶೇರು ಹಣವನ್ನು ಪಾವತಿಸಿ ತಮ್ಮ ಸದಸ್ವತ್ವವನ್ನು ಉಳಿಸಿಕೊಳ್ಳಬೇಕು. ಈ ಬಗ್ಗೆ ಸಂಘದ ವತಿಯಿಂದ ಎಲ್ಲಾ ಶೇರುದಾರರಿಗೂ ಹೆಚ್ಚುವರಿ ಶೇರು ಧನ ಪಾವತಿಸುವಂತೆ ಕೋರಿ ತಿಳುವಳಿಕೆ ಪತ್ರವನ್ನು ಜಾರಿ ಮಾಡಲಾಗುವುದು ಹಾಗಾಗಿ ಎಲ್ಲಾ ಶೇರುದಾರರು ತಮ್ಮ ಸದಸ್ಯತ್ವ ಉಳಿಸಿಕೊಳ್ಳಬೇಕೆಂದು ಅಧ್ಯಕ್ಷರಾದ ಜವರೇಗೌಡ ಸರ್ವ ಸದಸ್ಯರ ಮಹಾಸಭೆಯಲ್ಲಿ ಶೇರುದಾರರಲ್ಲಿ ಮನವಿ ಮಾಡಿದರು.
ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರಾದ ಹೆಚ್.ಕೆ.ಅಶೋಕ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ, ಸಂಘದ ಆಡಳಿತ ಮಂಡಳಿಯವರು ನೀಡಿದ ಅಭಿನಂದನೆ ಸ್ವೀಕರಿಸಿ ಮಾತನಾಡಿ ಸಂಘವು ಅಭಿವೃದ್ಧಿ ಸಾಧಿಸಬೇಕಾದರೆ ಸಾಲಗಾರರು ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡುವ ಮೂಲಕ ಸಂಘದ ಅಭಿವೃದ್ದಿಗೆ ಕೈಜೋಡಿಸಬೇಕು. ಸಂಘಕ್ಕೆ ಡಿಸಿಸಿ ಬ್ಯಾಂಕ್ ವತಿಯಿಂದ ನೀಡಬಹುದಾದ ಸಾಲ ಸೌಲಭ್ಯ ಕೊಡಿಸಲು ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೆ.ಕುಮಾರ್ ಅವರು ಸಂಘದ ವಾರ್ಷಿಕ ವರದಿಯನ್ನು ಮಂಡಿಸಿ ಸದಸ್ಯರ ಪ್ರಶ್ನೆಗಳಿಗೆ ಉತ್ತರ ನೀಡಿದರು.
ಸಭೆಯಲ್ಲಿ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಮೂಡನಹಳ್ಳಿ ಎಂ.ಆರ್.ರಂಗಸ್ವಾಮಿ, ಉಪಾಧ್ಯಕ್ಷ ಡಿ.ಚಿಕ್ಕೇಗೌಡ, ನಿರ್ದೇಶಕರಾದ ಅಣೆಚೌಡೇನಹಳ್ಳಿ ಸಿ.ಕೆ.ಮಂಜೇಗೌಡ, ಕೆ.ಎನ್. ಕಾಳೇಗೌಡ, ಜಿ.ಬಿ.ಗಾಯಿತ್ರಮ್ಮ, ಡಾ.ಕೆ.ಎಸ್.ಚಂದ್ರು, ಎಲ್.ಎಸ್.ತ್ಯಾಗರಾಜು, ಗುಡುಗನಹಳ್ಳಿ ಜಿ.ಜೆ.ದೇವರಾಜು, ಶೆಟ್ಟಿಹಳ್ಳಿ ಎಸ್.ಕೆ.ನಂಜೇಗೌಡ, ಆದಿಹಳ್ಳಿ ರಾಜೇಗೌಡ, ವಿಶಾಲಾಕ್ಷಮ್ಮರಾಜು, ಸಿ.ಬಿ.ಶಿವಕುಮಾರ್, ಹೊನ್ನೇನಹಳ್ಳಿ ರಾಜಯ್ಯ, ಮುಖಂಡರಾದ ಕೆ.ಮುರುಳೀಧರ್, ಲತಾಮುರುಳಿ, ಸುನಿಲ್, ರುಕ್ಕೇಶ್, ತಾಲ್ಲೂಕು ಕುರುಬರ ಸಂಘದ ಉಪಾಧ್ಯಕ್ಷ ಹೊಸೂರು ನಿಂಗೇಗೌಡ, ತಾಲ್ಲೂಕು ಕುರುಬರ ಸಂಘದ ಯುವ ಘಟಕದ ಕಾರ್ಯಾಧ್ಯಕ್ಷ ಅಣೆಚೌಡೇನಹಳ್ಳಿ ಜೆ.ಸಿ.ಬಿ.ರವಿ, ಉಪಾಧ್ಯಕ್ಷ ಎಲ್.ಐ.ಸಿ ರವಿ, ಕುರುಬರ ಸಂಘದ ನಿರ್ದೇಶಕ ರಾಮನಹಳ್ಳಿ ಕುಮಾರ್, ಪ್ರೌಢಶಾಲಾ ಶಿಕ್ಷಕ ಕೆ.ಎಸ್.ರಾಜು, ನಿವೃತ್ತ ಬಿ.ಸಿ.ಎಂ ಅಧಿಕಾರಿ ನಿಂಗೇಗೌಡ, ನಿವೃತ್ತ ಶಿಕ್ಷಕ ರಾಜು, ಸಂಘದ ಮಾಜಿ ನಿರ್ದೇಶಕರಾದ ಮೊಗಣ್ಣಗೌಡ, ಬಸವರಾಜು, ಉಪನ್ಯಾಸಕ ತೆಂಗಿನಘಟ್ಟ ಶ್ರೀನಿವಾಸ್, ಶೆಟ್ಟಿಹಳ್ಳಿ ಮಹೇಶ್ ಸೇರಿದಂತೆ ನೂರಾರು ಶೇರುದಾರರು ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ