ಕೌಶಲ್ಯ ಕರಗತ ಮಾಡಿಕೊಳ್ಳಿ : ಬಿಪಿಎಂನ ಸಹ ಉಪಾಧ್ಯಕ್ಷ ಶೇಖರ್ ಗಣೇಶನ್

Upayuktha
0



ಮಿಜಾರು: ‘ವಿದ್ಯಾರ್ಥಿ ಜೀವನದಲ್ಲಿ ಹೆಚ್ಚುವರಿ ಕೌಶಲ್ಯವನ್ನು ಕರಗತ ಮಾಡಿಕೊಳ್ಳಬೇಕು’ ಎಂದು ಬೆಂಗಳೂರು ಇನ್ಫೋಸಿಸ್ ಬಿಪಿಎಂನ ಸಹ ಉಪಾಧ್ಯಕ್ಷ ಶೇಖರ್ ಗಣೇಶನ್ ಹೇಳಿದರು.  


ಇನ್ಫೋಸಿಸ್ ಬಿಪಿಎಂ ಹಮ್ಮಿಕೊಂಡ ‘ಕಲಿಕೆ ವೇಳೆ ಗಳಿಕೆ’ (ಅರ್ನ್ ವೈಲ್ ಲರ್ನ್)  ಹಾಗೂ ಕಾರ್ಯಸ್ಥಳ (ವರ್ಕಸ್ಟೇಷನ್) ಸ್ಥಾಪನೆಯ ಕುರಿತ ಅಭಿವಿನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 


ವಿದ್ಯಾರ್ಥಿ ಜೀವನದಲ್ಲಿ ಹೆಚ್ಚುವರಿ ಅವಧಿ ಪರಿಶ್ರಮ ಹಾಕುವುದರಿಂದ ಸ್ವಲ್ಪ ಒತ್ತಡ ಉಂಟಾಗಬಹುದು. ಆದರೆ, ಅದು ನಿಮ್ಮ ಭವಿಷ್ಯಕ್ಕೆ ಭದ್ರ ಬುನಾದಿ ಆಗುತ್ತದೆ ಎಂದರು. 


ವಿದ್ಯಾರ್ಥಿಗಳಿಗೆ ನಾವು 18 ತಿಂಗಳು ಅರೆಕಾಲಿಕ ಕೆಲಸ ಮಾಡಲು ಅವಕಾಶ ಕಲ್ಪಿಸುತ್ತಿದ್ದು, ಈ ಬಗ್ಗೆ ಸಂದರ್ಶನ ನಡೆಸಲಿದ್ದೇವೆ. ಈ ಯೋಜನೆಯ ಮೂಲಕ  ವಿದ್ಯಾರ್ಥಿ ನೆಲೆಯಲ್ಲಿಯೆ ದುಡಿಮೆಯ ಅವಕಾಶವನ್ನು ಪಡೆಯಬಹುದು.  ಇದು ವಿದ್ಯಾರ್ಥಿಯ ಭವಿಷ್ಯದ ದೃಷ್ಟಿಯಿಂದ ಕೆಲಸದ ಮೇಲಿನ ಹಿಡಿತ ಹಾಗೂ ಹಣಕಾಸಿನ ಭದ್ರತೆಗೆ ಸಹಕಾರಿ ಎಂದರು.


ನಂತರ ತಂಡದ ಸದಸ್ಯರು ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿಗೆ ಭೇಟಿ ನೀಡಿ ಇನ್ಫೋಸಿಸ್ ಬಿಪಿಎಂನ ಕಾರ್ಯಸ್ಥಾನ ತೆರೆಯುವ ಕುರಿತು ಸ್ಥಳ ಪರಿಶೀಲನೆ ಹಾಗೂ ಚರ್ಚೆ  ನಡೆಸಿದರು.   


ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಇನ್ಫೋಸಿಸ್ ಬಿಪಿಎಂ  ಡಿಸಿ ಮುಖ್ಯಸ್ಥ ಲಲಿತ್ ರೈ, ಹಿರಿಯ ಪರಿಹಾರ ವಿನ್ಯಾಸ ಮುಖಸ್ಥ ಮುತ್ತುಕೃಷ್ಣನ್ ನಾಗರಾಜ್, ಪರಿಹಾರ ಸಮಾಲೋಚಕ ಶ್ಯಾಮ್ ಭಂಡಾರಿ, ತರಬೇತುದಾರರಾದ ಎಲೆನ್ ಹುಕ್ಕೇರಿ, ಆರೋಗ್ಯ ಕ್ಷೇಮ ಪ್ರಕ್ರಿಯಾ ವಿಭಾಗದ ಮುಖ್ಯಸ್ಥ ಪ್ರದೀಪ್ ಶೆಟ್ಟಿ, ಆಳ್ವಾಸ್ ಕಾಲೇಜಿನ ಸಹಾಯಕ ನಿಯೋಜನ ಅಧಿಕಾರಿ ರಂಜಿತಾ ಆಚಾರ್ಯ ಇದ್ದರು.  

   

 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


web counter      

إرسال تعليق

0 تعليقات
إرسال تعليق (0)
To Top