ಹಾಸನ: ಪ್ರತಿಮಾ ಸಂಭ್ರಮ ರಾಜ್ಯಮಟ್ಟದ ಕವಿಗೋಷ್ಠಿ

Upayuktha
0


ಹಾಸನ: ಪ್ರತಿಮಾ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ, ಹಾಸನ ವತಿಯಿಂದ  ಕನ್ನಡಿಗರ ಕಣ್ಣಲ್ಲಿ ಪುನೀತ್ (ಅಪ್ಪು) ರಾಜಕುಮಾರ್  ನೆನಪಿಗೆ ರಾಜ್ಯಮಟ್ಟದ ಕವಿಗೋಷ್ಠಿ  ಕಾರ್ಯಕ್ರಮವನ್ನು ಹಾಸನದ ವಿವೇಕಾನಂದ ಶಾಲೆಯಲ್ಲಿ ಏರ್ಪಡಿಸಲಾಗಿತ್ತು. ಪ್ರ.ಸಾ.ಸಾ.ಅ.ಪ್ರ. ಸಂಸ್ಥೆಯ  ನೀಲಮ್ಮ ಸುರೇಶ್  ಉದ್ಘಾಟನೆ ಮಾಡಿ ಈ ಸಂಸ್ಥೆಯು ನೊಂದವರ ಪರ ನಿಲ್ಲಲಿದೆ ಸಾಹಿತ್ಯ ಸೇವೆ ಮಾಡಲಿದೆ. ಒಳಿತಿನ ಕಾರ್ಯದಡೆಗೆ ಈ ಸಂಸ್ಥೆಯ ಕೆಲಸ ಮಾಡಲಿದೆ. ಒಳ್ಳೆಯ ದೃಷ್ಟಿಕೋನದಿಂದ ಎಲ್ಲಾ ರಂಗಗಳ ಸೇವೆಯನ್ನು ಮಾಡುವುದಾಗಿ ಆಶಯ ವ್ಯಕ್ತಪಡಿಸಿದರು. ಅಧ್ಯಕ್ಷತೆಯನ್ನು ಮಂಜುನಾಥ್ ಹೆಚ್ಎಸ್.ಆರೋಗ್ಯ ಇಲಾಖೆ ವಹಿಸಿದರು. ಅಪ್ಪುವಿಗೆ ಪುಷ್ಪಾರ್ಚನೆಯನ್ನು ದೇವರಾಜ್  ಹೆಚ್. ಪಿ. ಸಾಮಾಜಿಕ ಚಿಂತಕರು ನೆರವೇರಿಸಿದರು. ಸಿದ್ದಯ್ಯ ಗ್ರಾಹಕರ ವೇದಿಕೆಯ ಪ್ರಧಾನ ಕಾರ್ಯದರ್ಶಿ. ಕೊಟ್ರೇಶ್ ಉಪ್ಪಾರ್  ಅವರು ಅಪ್ಪುವಿನ  ಸಾಧನೆ ಸ್ಮರಿಸಿದರು.


ಪುಟ್ಟಣ್ಣ ಗೋಕಾಕ್, ರತೀಶ್, ರವಿಕಿರಣ್ ಉಪಸ್ಥಿತರಿದ್ದರು.  ಅಪ್ಪು  ಹಾಡಿಗೆ ಕುಮಾರಿ ಟೀಷ್ಮಾ  ಗೌಡ. ಕೆ. ಆರ್. ಮತ್ತು ಮೋಹನ್ ಗೌಡ ಕೆ ಆರ್. ನೃತ್ಯ  ಮಾಡಿದರು ನಿರೂಪಣೆ ಹೆಚ್. ಎಸ್. ಪ್ರತಿಮಾ ಹಾಸನ್, ಪ್ರಾರ್ಥನೆ  ಸವಿತಾ ಯೋಗೀಶ್, ಸ್ವಾಗತ ಮಮತ, ಪ್ರಾಸ್ತಾವಿಕ ನುಡಿ ಶುಭ ಮಂಗಳ ಸತೀಶ್ ವಂದನಾರ್ಪಣೆ ಸಾವಿತ್ರಮ್ಮ ಓಂ ಅರಸೀಕೆರೆ.  ನೆರವೇರಿಸಿದರು. ಕನ್ನಡಿಗರ ಕಣ್ಣಲ್ಲಿ ಪುನೀತ್ ರಾಜಕುಮಾರ್ (ಅಪ್ಪು)ರವರ ರಾಜ್ಯಮಟ್ಟದ ಕವಿಗೋಷ್ಠಿಯ ಉದ್ಘಾಟನೆಯನ್ನು  ಶ್ರೀಮತಿ ಮಾಳೇಟಿರ  ಸೀತಮ್ಮ ವಿವೇಕ್ ನೆರವೇರಿಸಿದರು.  ಅಧ್ಯಕ್ಷತೆಯನ್ನು ಡಾ. ಬಾ. ನಂ. ಲೋಕೇಶ್ ವಹಿಸಿದ್ದರು. ಸಾಹಿತಿ ಗೊರೂರು ಅನಂತರಾಜು, ರಮೇಶ್ ಡಿ, ಎಚ್ ಎನ್ ಮೊಹಮ್ಮದ್ ರಫಿ, ಚಿದಾನಂದ, ವಿಶ್ವಾಸ್ ಬಿ ಗೌಡ, ಶೇಖರ್, ಸುಂದರೇಶ್ ಉಡುವೇರೆ, ಸೋಮ ನಾಯಕ್, ಸತೀಶ್ ಏ ಬಿ, ಯಾಕುಬ್ , ಗೀತಾ ತಿಪ್ಪೇಸ್ವಾಮಿ ಐಗೂರು, ಸಾವಿತ್ರಿ ಬಿ ಗೌಡ  ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter  

Post a Comment

0 Comments
Post a Comment (0)
To Top