ಸೆ.28ರಂದು ಅಶೋಕೆ ಮಲ್ಲಿಕಾರ್ಜುನ ದೇವಾಲಯದ ಸಂಸ್ಕಾರ ಮಂಟಪ ಉದ್ಘಾಟನೆ

Upayuktha
0


ಗೋಕರ್ಣ: ಅಶೋಕೆಯ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿರುವ ಮಲ್ಲಿಕಾರ್ಜುನ ದೇವಾಲಯ ಪಕ್ಕ ನಿರ್ಮಿಸಿರುವ ಸಂಸ್ಕಾರ ಮಂಟಪದ ಲೋಕಾರ್ಪಣೆ ಈ ತಿಂಗಳ 28ರಂದು ನಡೆಯಲಿದೆ.


ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀಮಹಾಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕೊಯಮತ್ತೂರು ಶ್ರೀ ಚಂದ್ರಶೇಖರೇಂದ್ರ ಸರಸ್ವತೀ ವೇದ ವಿದ್ಯಾಲಯದ ವೇದಬ್ರಹ್ಮ ಶ್ರೀ ಜಂಬೂನಾಥ ಘನಪಾಠಿಗಳು ಮತ್ತು ಗೋಕರ್ಣ ಶಂಕರಲಿಂಗದ ವೇದಮೂರ್ತಿ ರಾಮಕೃಷ್ಣ ಭಟ್ಟರು ಅಭ್ಯಾಗತರಾಗಿ ಆಗಮಿಸುವರು.


ಮಧ್ಯಾಹ್ನ 12.30ಕ್ಕೆ ಸಂಸ್ಕಾರ ಮಂಟಪದ ಲೋಕಾರ್ಪಣೆ ನಡೆಯಲಿದೆ ಎಂದು ವಿವಿವಿ ಹಿರಿಯ ಲೋಕಸಂಪರ್ಕಾಧಿಕಾರಿ ಗಣಪತಿ ಕೃಷ್ಣಯ್ಯ ಹೆಗಡೆ ಪ್ರಕಟಣೆಯಲ್ಲಿ ಹೇಳಿದ್ದಾರೆ.


ಶ್ರೀ ಶಂಕರ ಭಗವತ್ಪಾದರು ದೇಶದಲ್ಲಿ ಮೂರು ಬಾರಿ ಭೇಟಿ ನೀಡಿದ ಏಕೈಕ ಸ್ಥಳ ಎನಿಸಿದ ಶ್ರೀ ಮಲ್ಲಿಕಾರ್ಜುನ ಸನ್ನಿಧಿಯಲ್ಲಿ ಮಂಗಲಮಯ ಸಂಸ್ಕಾರಗಳಿಗಾಗಿ ಈ ಸುಸಜ್ಜಿತ ಸಂಸ್ಕಾರ ಮಂಟಪವನ್ನು ನಿರ್ಮಿಸಲಾಗಿದೆ. ಶಾಸ್ತ್ರೀಯವಾಗಿ ವಾಸ್ತುನಿಯಮಗಳಿಗೆ ಅನುಸಾರವಾಗಿ ಈ ಆಕರ್ಷಕ ಶಿಲಾಮಂಟಪ ನಿರ್ಮಾಣಗೊಂಡಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top