ಎಲ್ಲೆಡೆ ಈಗ ಗಣೇಶ ಚತುರ್ಥಿಯ ಸಂಭ್ರಮ, ಅಬಾಲ ವೃದ್ಧಿರಾದಿಯಾಗಿ ಎಲ್ಲರೂ ಗಣೇಶನನ್ನು ಪೂಜಿಸುತ್ತಾರೆ.
ಗಣಪತಿಯ ಕುರಿತು ತಿಳಿಯುವ ವಿಷಯ ಬಹಳಷ್ಟಿದೆ. ವಿನಾಯಕೋಪಾಸನೆ ಬಗ್ಗೆ ಅರಿವನ್ನುಂಟು ಮಾಡುವ ಕಿರು ಪ್ರಯತ್ನ ಇದು. ಸಂಸ್ಕೃತಿ ಚಿಂತಕ ಡಾ ಗುರುರಾಜ ಪೋಶೆಟ್ಟಿಹಳ್ಳಿರವರ ‘ವಿಶ್ವ ವಂದಿತ ವಿನಾಯಕ’ ವಿಶಿಷ್ಟ ಕೃತಿಯನ್ನು ಆಧರಿಸಿ ಈ ಪ್ರಶ್ನಾವಳಿಯನ್ನು ಸಿದ್ಧಪಡಿಸಿದೆ. ಪುಸ್ತಕ ಬೇಕಿದ್ದಲ್ಲಿ ‘ಶ್ರೀ ಸಿದ್ಧಿವಿನಾಯಕ ಪ್ರಕಾಶನ’ವನ್ನು ದೂ. ನಂ. 9035618076 ಸಂಪರ್ಕಿಸಬಹುದು.
1. ಹೆಣ್ಣಾನೆ, ಗಂಡಾನೆ ಗಣಪತಿ ಎಂದು ಖ್ಯಾತವಾಗಿರುವ ಗಣಪತಿಯ ಗುಡಿ ಇರುವುದು ಎಲ್ಲಿ?
2. ದಕ್ಷಿಣ್ನಾಮಯ ಶೃಂಗೇರಿ ಶಾರದಾ ಪೀಠದಲ್ಲಿ ಆರಾಧಿಸಲ್ಪಡುವ ಶ್ರೀ ಗುರುವರ್ಯರ ಖಾಸಾ ಪೂಜೆಯ ಗಣಪತಿಯ ಹೆಸರೇನು?
3. ಗಣೇಶ ಗೀತೆ ಉಪದೇಶ ಪಡೆದ ರಾಜನ ಹೆಸರೇನು?
4. ಗಣೇಶಾಂಶ ಸಂಭೂತರಾದ ಪ್ರಸಿದ್ಧ ಹರಿದಾಸರು ಯಾರು?
5. ‘ ತಾ ಲೆಕ್ಕಣಕಿ, ತಾ ದೌತಿ’ ಎಂದು ಬೆನಕನನ್ನು ಉದ್ದೇಶಿಸಿ ಕೇಳುವ ವರ ಕವಿ ಯಾರು?
6. ಗಣಪತಿ ಆರಾಧನೆಯಲ್ಲಿ ಪ್ರಧಾನವಾಗಿ ಬಳಸುವ ಉಪನಿಷತ್ ಯಾವುದು?
7. ಗಣಪತಿ ಯಾವ ಅವಸ್ಥೆಗೆ ಪ್ರೇರಕ?
8. ಬೆಂಗಳೂರಿನ ಒಂದು ಪ್ರಸಿದ್ಧ ಹವ್ಯಾಸ ನಾಟಕ ತಂಡಕ್ಕೆ ಬಿ.ವಿ. ಕಾರಂತರು ವಿಶಿಷ್ಟವಾದ ಗಣಪತಿ ಹೆಸರನ್ನೇ ಇಟ್ಟು ಖ್ಯಾತಿಯನ್ನು ನೀಡಿದ್ದುಂಟು, ಯಾವುದೀ ರಂಗ ತಂಡ?
9. ಮಧುವಾಹಿನಿ ನದಿಯ ದಂಡೆಯಲ್ಲಿರುವ ಗಡಿನಾಡ ಪ್ರದೇಶ ಪ್ರಸಿದ್ಧ ಗಣೇಶ ಕ್ಷೇತ್ರ ಯಾವುದು?
10. ಗಣೇಶನ ಸ್ತ್ರೀ ರೂಪವನ್ನು ಏನ್ನೆನ್ನುತ್ತಾರೆ?
11. ಗಣಪತಿಯ ಸೊಂಡಿಲು ಯಾವ ಪಾರಮಾರ್ಥಿಕ ಚಿಹ್ನೆಯನ್ನು ಸೂಚಿಸುತ್ತದೆ?
12. ಯಾವ ದೇಶದ ಸರಕಾರವು ಗಣೇಶನಿರುವ ಅಂಚೆ ಚೀಟಿಯನ್ನು ಹೊರಡಿಸಿದೆ?
13. ಶನೀಶ್ವರನ ಅವಕೃಪೆಗೊಳಗಾಗದ ಎರಡು ದೇವತೆಗಳು ಯಾರು?
14. ‘ಸುಖಹರ್ತಾ ದು:ಖಹರ್ತಾ ವಾರ್ತಾ ವಿಘ್ನ ಚಿ’ ಈ ಪ್ರಸಿದ್ಧ ಮರಾಠೀ ಭಜನೆಯನ್ನು ರಚಿಸಿದವರು ಯಾರು?
15. ಶ್ರೀವೈಷ್ಣವ ಸಂಪ್ರದಾಯದಲ್ಲಿ ಗಣಪತಿಯ ಬದಲು ಕಾರ್ಯಾರಂಭದಲ್ಲಿ ಯಾವ ದೇವತೆಯನ್ನು ಪೂಜಿಸುತ್ತಾರೆ?
16. ಗಣಪತಿಯ ‘ವಿದ್ಯಾವಾರಿಧಿ’ ಎಂದು ಸಂಬೋಧಿಸಿದ ನಡುಗನ್ನಡದ ಕವಿ ಯಾರು? ಕೃತಿ ಯಾವುದು?
17. ತಿರುಪತಿ ಸಮೀಪದಲ್ಲಿ ಸತ್ಯ ಪ್ರಮಾಣಕ್ಕೆ ಪ್ರಖ್ಯಾತಿಯಾಗಿರುವ ಉದ್ಭವ ಗಣಪತಿಯ ಕ್ಷೇತ್ರ ಯಾವುದು?
18. ಗಣೇಶ ಚತುರ್ಥಿಯಂದು ಚಂದ್ರ ದರ್ಶನ ಪರಿಹಾರಾರ್ಥವಾಗಿ ಪಠಿಸುವ ಕಥಾ ಪ್ರಸಂಗ ಯಾವುದು?
19. ‘ಶ್ರೀ ಗಣೇಶಾಯ ನಮಃ’ ಎಂದು ಆರಂಭವಾಗುವ ಒಂದು ಶಾಸನವನ್ನು ಬರೆಯಿಸಿದ ಮುಸಲ್ಮಾನ ದೊರೆ ಹೆಸರೇನು?
20. ‘ಪಸುಗೆಯ ಚಕ್ಕುಲಿಯ ಗಾರಿಗೆಯಂ........’ ಹೀಗೆ ಗಣಪತಿಗೆ ಪ್ರಿಯವಾದ ತಿಂಡಿ ತಿನಿಸುಗಳ ಪಟ್ಟಿಯನ್ನೇ ತಮ್ಮ ಕಾವ್ಯದಲ್ಲಿ ವರ್ಣಿಸಿರುವ ಹೊಸಗನ್ನಡದ ಮುಂಗೋಳಿ ಯಾರು?
21. ರಾವಣನಿಂದ ಪಡೆದ ಆತ್ಮಲಿಂಗವನ್ನು ಗಣಪತಿ ಸ್ಥಾಪಿಸಿದ ಕ್ಷೇತ್ರ ಯಾವುದು?
**********
ಸರಿ ಉತ್ತರಗಳು
1) ಹೊರನಾಡು ಸಮೀಪದ ಕಳಸದಲ್ಲಿ
2) ರತ್ನಗರ್ಭ ಗಣಪತಿ
3) ವರೇಣ್ಯ ಮಹಾರಾಜ
4) ಗೋಪಾಲದಾಸರು
5) ದ.ರಾ. ಬೇಂದ್ರೆ
6) ಗಣೇಶ ಅಥರ್ವಶೀರ್ಷ
7) ಜಾಗೃತ
8) ಬೆಂಗಳೂರು ನಗರ ಕಲಾವಿದರು (ಬೆನಕ)
9) ಮಧೂರು (ಕಾಸರಗೋಡು)
10) ಗಣೇಶಾನಿ / ವಿನಾಯಕಿ
11) ಓಂಕಾರ
12) ಲಾವೋಸ್
13) ಹನುಮಂತ ಮತ್ತು ಗಣೇಶ
14) ಸಮರ್ಥ ರಾಮದಾಸರು
15) ವಿಶ್ವಕ್ಸೇನ
16) ಕುಮಾರವ್ಯಾಸ, ಕರ್ನಾಟ ಭಾರತ ಕಥಾಮಂಜರಿ
17) ಕಾಣಿಪಾಕಂ
18) ಸ್ಯಮಂತೋಪಖ್ಯಾನ
19) ಇಬ್ರಾಹಿಂ ಆದಿಲ್ ಷಾಹ
20) ಮುದ್ದಣ್ಣ
21) ಗೋಕರ್ಣ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ