ಹಬ್ಬದ ಸೀಸನ್: ಶಾಪ್ಸಿ ಮೇಳಕ್ಕೆ ಭಾರಿ ಸ್ಪಂದನೆ

Upayuktha
0



ಮಂಗಳೂರು: ಭಾರತದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಹೈಪರ್ -ವ್ಯಾಲ್ಯೂ ಇ-ಕಾಮರ್ಸ್ ಪ್ಲಾಟ್ ಫಾರ್ಮ್ ಆಗಿರುವ ಫ್ಲಿಪ್ ಕಾರ್ಟ್‍ನ ಶಾಪ್ಸಿ ಇತ್ತೀಚೆಗೆ ಆಯೋಜಿಸಿದ್ದ ಮೂರನೇ ಆವೃತ್ತಿಯ ತನ್ನ ಮೆಗಾ ಶಾಪಿಂಗ್ ಮೇಳವಾದ ದಿ ಗ್ರ್ಯಾಂಡ್ ಶಾಪ್ಸಿ ಮೇಳಕ್ಕೆ ಭಾರಿ ಸ್ಪಂದನೆ ವ್ಯಕ್ತವಾಗಿದೆ.


ಜತೆಗೆ ಇದು ಪ್ರಾದೇಶಿಕವಾಗಿ ಲಕ್ಷಾಂತರ ಮಾರಾಟಗಾರರ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಿದೆ. 2+ ಶ್ರೇಣಿಯ ನಗರಗಳ ಗ್ರಾಹಕರು ಹೆಚ್ಚಿನ ಫ್ಯಾಶನ್, ಮನೆ ಬಳಕೆಯ ಅಗತ್ಯ ವಸ್ತುಗಳು, ಬ್ಯೂಟಿ ಮತ್ತು ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ಖರೀದಿಸಿದ್ದಾರೆ. ಶಾಪ್ಸಿಯು ಫ್ಲಿಪ್ ಕಾರ್ಟ್ ನ ದಿ ಬಿಗ್ ಬಿಲಿಯನ್ ಡೇಸ್ 2023 ರ ಸಂದರ್ಭದಲ್ಲಿ ವಿಶೇಷವಾಗಿ 2 ನೇ ಶ್ರೇಣಿಯಿಂದ 4 ನೇ ಶ್ರೇಣಿಯ ನಗರಗಳ ಗ್ರಾಹಕರಿಗೆ ವಿಸ್ತಾರವಾದ ಮೌಲ್ಯಾಧಾರಿತವಾದ ಉತ್ಪನ್ನಗಳನ್ನು ಪೂರೈಕೆ ಮಾಡಲಿದೆ ಎಂದು ಫ್ಲಿಪ್ ಕಾರ್ಟ್ ನ ಶಾಪ್ಸಿ ಮುಖ್ಯಸ್ಥರಾದ ಕಪಿಲ್ ಥಿರಾನಿ ಹೇಳಿದ್ದಾರೆ.


ಈ ಅವಧಿಯಲ್ಲಿ ಶಾಪ್ಸಿಯ ಗ್ರಾಹಕರ ಸಂಖ್ಯೆಯಲ್ಲಿ 2 ಪಟ್ಟು ಹೆಚ್ಚಿದೆ, ಆರಂಭದಿಂದ ಶೂನ್ಯ ಕಮಿಷನ್ ಮಾರುಕಟ್ಟೆಯ ಮೂಲಕ ಭಾರತದಾದ್ಯಂತ ಡಿಜಿಟಲ್ ಕಾಮರ್ಸ್ ಅನ್ನು ಪ್ರವೇಶಿಸುವಂತೆ ಮಾಡುವುದು ಶಾಪ್ಸಿಯ ದೃಷ್ಟಿಕೋನವಾಗಿದೆ. ಇಂದು ಶಾಪ್ಸಿ ದೇಶಾದ್ಯಂತ 1300+ ವಿಭಾಗಗಳಲ್ಲಿ 160 ಮಿಲಿಯನ್ ಉತ್ಪನ್ನಗಳನ್ನು ಪೂರೈಕೆ ಮಾಡುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top