ತಂದೆಗೊಂದು ನಮನ

Upayuktha
0


'ಅಪ್ಪ' ಈ ಶಬ್ದದಲ್ಲೇ ಅದೆಂಥ ಗತ್ತು, ಗಾಂಭೀರ್ಯ, ಇದೊಂದು ಪದವಲ್ಲ ಇದೊಂದು ಶಕ್ತಿ. ಅಮ್ಮ ಮಗುವಿಗೆ ಜನ್ಮ ನೀಡುತ್ತಾಳೆ, ಆದರೆ ಮಗುವಿಗೆ ಜಗತ್ತನ್ನು ಪರಿಚಯಿಸುವುದು ತಂದೆ. ಅಪ್ಪ ಎಂದರೆ ಹೆಣ್ಣು ಮಕ್ಕಳಿಗೆ ಹೆಚ್ಚಾದ ಪ್ರೀತಿ, ವಿಶ್ವಾಸ. ತಂದೆಗೆ ಎಷ್ಟೇ ಕಷ್ಟ ಇದ್ದರೂ ತನ್ನ ಮಕ್ಕಳಿಗೆ ಅದನ್ನು ಯಾವುದನ್ನು ತೋರಿಸದೆ ಪ್ರೀತಿಯಿಂದ ಸಲಹುತ್ತಾರೆ. ಏನೇ ಕೇಳಿದರೂ ಎಲ್ಲ ಕೊಡಿಸುವ ಸಾಹುಕಾರ ಅಪ್ಪ. ಜೀವನದಲ್ಲಿ ಎಷ್ಟೇ ಪ್ರೀತಿ ತೋರಿಸುವ ವ್ಯಕ್ತಿ ಇದ್ದರೂ, ಅಪ್ಪನ ಪ್ರೀತಿ ಮುಂದೆ ಆ ಪ್ರೀತಿ ಏನೂ ಅಲ್ಲ. ಒಂದು ಮಗುವಿನ ಜೀವನದಲ್ಲಿ ತಂದೆಯ ಪಾತ್ರವನ್ನು ಬೇರೆ ಯಾರೂ ನಿಭಾಯಿಸಲಾರದು.


ಕುಟುಂಬವನ್ನು ಒಟ್ಟಿಗೆ ಹಿಡಿದಿಟ್ಟು ಕೊಳ್ಳುವ ಮತ್ತು ಜೀವನದ ಎಲ್ಲಾ ಹಂತಗಳಲ್ಲಿ ನಮಗೆ ಬೆಂಬಲಿಸುವ ಕುಟುಂಬದ ಆಧಾರ ಸ್ತಂಭ ತಂದೆ. ಸೋಲಲಿ ಬಲವಾಗಿ, ಗೆಲುವಲ್ಲಿ ಜೊತೆಯಾಗಿ ನಿಲ್ಲುವ ಜೀವ. ನಮಗೆ ಬೇಡಿದ್ದನ್ನೆಲ್ಲ ಕೊಡುವವನು ದೇವರಾದರೆ ಬೇಡದೆನೇ ಬಯಸಿದ್ದನ್ನೆಲ್ಲಾ ನೀಡುವುದು ಅಪ್ಪ.


ನಾವು ಎಲ್ಲಾ ವಿಷಯದಲ್ಲೂ ತಾಯಿಯ ಬಗ್ಗೆ ಬಣ್ಣಿಸುತ್ತೇವೆ, ತಾಯಿಯ ಪ್ರೀತಿಯ ಬಗ್ಗೆ ಶೋಗಳಲ್ಲಿ ಮತ್ತು ಹೆಚ್ಚಿನವುಗಳಲ್ಲಿ ಪದೇಪದೇ ಮಾತನಾಡುತ್ತೇವೆ. ನಾವು ಒಪ್ಪಿಕೊಳ್ಳಲು ವಿಫಲರಾಗುವುದು ತಂದೆಯ ಶಕ್ತಿಯನ್ನು ಲೆಕ್ಕಿಸದೆ ಗಮನಿಸುವುದರಲ್ಲಿ. ತಾಯಿಯ ಶ್ರಮ ಎಲ್ಲರಿಗೂ ತಿಳಿದಿದೆ, ಆದರೆ ತಂದೆಯ ಬೆವರ ಹನಿ ಯಾರಿಗೂ ಕಾಣುವುದಿಲ್ಲ. ತಾಯಿ ಮಗಳಿಗೆ ಸಣ್ಣಪುಟ್ಟ ವಿಷಯಕ್ಕೆ ಬಯ್ಯುವುದು ಸಹಜ, ಆದರೆ ಆ ಸಮಯದಲ್ಲಿ ಮಗಳ ಪರವಾಗಿ ತಂದೆ ಇರುತ್ತಾನೆ.


ತಂದೆ ಒಬ್ಬ ನೆಚ್ಚಿನ ಗುರು. ಒಬ್ಬ ತಂದೆ ಕಟ್ಟುನಿಟ್ಟಾಗಿ ಮತ್ತು ಶಿಸ್ತು ಬದ್ಧವಾಗಿ ತೋರುತ್ತಿದ್ದರೂ ತನ್ನ ಮಕ್ಕಳು ನೈಜ ಪ್ರಪಂಚವನ್ನು ಹೇಗೆ ಎದುರಿಸಲು ಕಲಿಯ ಬೇಕೆಂದು ಆತ ಬಯಸುತ್ತಾನೆ. ಅಪ್ಪ ಬರೀ ಅಪ್ಪನಾಗಿ ಉಳಿಯದೆ ಸ್ನೇಹಿತನಾಗಿ, ಹಿತೈಷಿಯಾಗಿ ಬೆಳೆದಿದ್ದಾನೆ.




- ತ್ರಿಶಾ ರಮೇಶ್

ಪತ್ರಿಕೋದ್ಯಮ ವಿಭಾಗ,  

ವಿವೇಕಾನಂದ ಮಹಾವಿದ್ಯಾಲಯ,      

(ಸ್ವಾಯತ್ತ), ಪುತ್ತೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 


Post a Comment

0 Comments
Post a Comment (0)
To Top