ಧರ್ಮಸ್ಥಳ: ಭಜನಾ ಕಮ್ಮಟದ ರಜತ ಮಹೋತ್ಸವ ಸಂಭ್ರಮದಲ್ಲಿ ಭಜನಾ ತರಬೇತಿ

Upayuktha
0


ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿರುವ ಭಜನಾ ಕಮ್ಮಟದ ರಜತ ಮಹೋತ್ಸವದಲ್ಲಿ ಮೊದಲ ದಿನ ಸೆ. 28 ರಂದು ಸಂಪನ್ಮೂಲ ವ್ಯಕ್ತಿಗಳಾಗಿ  ರಾಗ, ತಾಳ, ಶ್ರುತಿಗಳ ಬಗ್ಗೆ ಶ್ರೀಮತಿ ಮನೋರಮಾ ತೋಳ್ಪಾಡಿತ್ತಾಯ ಅವರು ತರಗತಿ ನಡೆಸಿದರು. ಶ್ರೀಮತಿ ಉಷಾ ಹೆಬ್ಬಾರ್ ಸಂಗೀತ ವಿದುಷಿ  ಅವರಿಂದ ಭಜನಾ ಅಭ್ಯಾಸ ಹಾಗೂ ಶ್ರೀ ಸುನಿಲ್ ಶೆಟ್ಟಿ ಕಲ್ಕೊಪ್ಪ ಅವರು ಜನಪದ ಹಾಡುಗಳು ಮತ್ತು ರಂಗಗೀತೆಗಳ ತರಬೇತಿಯನ್ನು ನಡೆಸಿಕೊಟ್ಟರು.  ಶ್ರೀ ಕ್ಷೇತ್ರ ಧರ್ಮಸ್ಥಳದ ಕ್ಷೇತ್ರ ಪರಿಚಯವನ್ನು ಸುಬ್ರಹ್ಮಣ್ಯ ಪ್ರಸಾದ್ ನಡೆಸಿಕೊಟ್ಟರು.


ಸೆ.29 ರಂದು ಕಮ್ಮಟದ ಎರಡನೇ ದಿನ ಭಜನಾ ಕಾರ್ಯಕ್ರಮವನ್ನು ಶ್ರೀಮತಿ ಸಂಗೀತ ಬಾಲಚಂದ್ರ ನಡೆಸಿಕೊಟ್ಟರು. ಶ್ರೀಮತಿ ಸೌಮ್ಯ ಸುಭಾಷ್ ಅವರು ಭಜನೆ, ಶೋಭಾನೆ, ಸಂಪ್ರದಾಯ ಹಾಡುಗಳನ್ನು ಹೇಳಿಕೊಟ್ಟರು.


ಪುರುಷ ಶಿಬಿರಾರ್ಥಿಗಳಿಗೆ ರಾಜ್ಯಮಟ್ಟದ ನೃತ್ಯ ಭಜನಾ ತರಬೇತುದಾರರಾದ ಶ್ರೀ ರಮೇಶ್ ಕಲ್ಮಾಡಿ ಹಾಗೂ ಶ್ರೀ ಶಂಕರ್,  ಅವರಿಂದ ಕುಣಿತ ಭಜನಾ ತರಬೇತಿ, ಮಹಿಳಾ ಶಿಬಿರಾರ್ಥಿಗಳಿಗೆ ವಿದುಷಿ ಚೈತ್ರಾ ಧರ್ಮಸ್ಥಳ ಇವರಿಂದ ನೃತ್ಯ ಭಜನಾ ತರಬೇತಿಯನ್ನು  ನಡೆಸಲಾಗುತ್ತಿದೆ. 


ಮಧ್ಯಾಹ್ನ 12 ಘಂಟೆಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಸಮಾಜ ಇತರ ಕ್ಷೇತ್ರಗಳಿಗೆ ನೀಡಿದ ಧಾರ್ಮಿಕ, ಸಾಮಾಜಿಕ ಕೊಡುಗೆಗಳು ಎಂಬ ವಿಚಾರದ ಕುರಿತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ  ಡಾ| ಎಲ್. ಎಚ್. ಮಂಜುನಾಥ್ ಇವರು ಅತಿಥಿ ಉಪನ್ಯಾಸ ನೀಡಿದರು.


ಚತುರ್ದಾನ ಪರಂಪರೆಯುಳ್ಳ ಕ್ಷೇತ್ರ ಧರ್ಮಸ್ಥಳ, ವಿಶ್ವದ ಎಲ್ಲಿಯೂ ಇಲ್ಲದ ಅಭಯದಾನ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿದೆ. ಅಭಯದಾನ ಎಂದರೆ ಕೇವಲ ಧೈರ್ಯ ತುಂಬುವುದು ಮಾತ್ರವಲ್ಲ, ಸ್ವಾವಲಂಬಿ ಬದುಕಿಗೆ ಪ್ರೇರಣೆ ನೀಡುವ ಕೆಲಸ ಶ್ರೀ ಕ್ಷೇತ್ರದಿಂದ ಆಗುತ್ತಿದೆ. 25 ವರ್ಷಗಳ ಹಿಂದೆ  ಅಬಲೆಯರಾಗಿದ್ದ ಮಹಿಳೆಯರು ಸಬಲೆಯರಾಗಿದ್ದಾರೆ. ಇದಕ್ಕೆ ಕಾರಣ ಗ್ರಾಮಾಭಿವೃದ್ಧಿ ಯೋಜನೆ ಎಂದು ಅವರು ತಿಳಿಸಿದರು.


ಕುಟುಂಬದಲ್ಲಿ ಲಿಂಗ ಸಮಾನತೆ ತಂದ ಸಾಧನೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯದ್ದಾಗಿದೆ. ವೈಯಕ್ತಿಕ ಕುಟುಂಬಗಳ ಅಭಿವೃದ್ಧಿಯ ಜೊತೆಗೆ ಗ್ರಾಮಗಳ ಅಭಿವೃದ್ದಿ, ಮೂಲ ಸೌಕರ್ಯಗಳ ಅಭಿವೃದ್ದಿಗೆ ಸಹಾಯಧನ ಕ್ಷೇತ್ರದ ಮೂಲಕ ಆಗಿದೆ. 350 ಕೋಟಿ ಮೊತ್ತದ ಧನ ಸಹಾಯ  ಶ್ರೀ ಕ್ಷೇತ್ರ ಧರ್ಮಸ್ಥಳದ ಮೂಲಕ ಆಗಿದೆ. ದುರಾಭ್ಯಾಸ ವಿರುದ್ಧ ಜಾಗೃತಿ ಮೂಡಿಸುವ ಕೆಲಸ, 125000 ಮಂದಿ ವ್ಯಸನ ಮುಕ್ತರಾಗಿದ್ದಾರೆ. ರಾಜ್ಯದ 106 ತಾಲೂಕುಗಳಲ್ಲಿ 10,000 ಮಂದಿ ವಿಪತ್ತು ನಿರ್ವಹಣಾ ಸದಸ್ಯರಿದ್ದಾರೆ. 3.5 ಲಕ್ಷ ಮಹಿಳೆಯರು ಜ್ಞಾನವಿಕಾಸ ಕೇಂದ್ರದ ಮೂಲಕ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ಕ್ಷೇತ್ರದ ಎಲ್ಲಾ ಸಧನೆಗಳಲ್ಲಿ, ಅಭಿವೃದ್ದಿಯಲ್ಲಿ ಶ್ರೀ ಅಣ್ಣಪ್ಪಸ್ವಾಮಿ, ಶ್ರೀ ಧರ್ಮದೇವತೆಗಳ ಪ್ರೇರಣೆ ಇದೆ ಎಂದು ಡಾ. ಎಲ್.ಎಚ್. ಮಂಜುನಾಥ್ ನುಡಿದರು. 


ಎಸ್.ಡಿ.ಎಂ. 'ಕಲಾಕೇಂದ್ರ' ಉಜಿರೆ ಕಾಲೇಜಿನ ವಿದ್ಯಾರ್ಥಿಗಳು ವೈವಿದ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಭಜನಾ ಕಮ್ಮಟದಲ್ಲಿ ಪೂಜ್ಯ ಡಿ ವೀರೇಂದ್ರ ಹೆಗ್ಗಡೆಯವರು, ಶ್ರೀ ಮೋಹನದಾಸ ಸ್ವಾಮೀಜಿ, ಶ್ರೀ ಧಾಮ ಮಾಣಿಲ. ಮಾತೃಶ್ರೀ ಡಾ| ಹೇಮಾವತಿ ವೀ. ಹೆಗ್ಗಡೆಯವರು, ಕಮ್ಮಟದ ಸಂಚಾಲಕರಾದ ಶ್ರೀ ಸುಬ್ರಹ್ಮಣ್ಯ ಪ್ರಸಾದ್, ಕಾರ್ಯದರ್ಶಿ ಶ್ರೀ ಸುರೇಶ್ ಮೊಯಿಲಿ, ಪರಿಷತ್‌ನ ಅಧ್ಯಕ್ಷರಾದ ಬಾಲಕೃಷ್ಣ ಪಂಜ, ಕಾರ್ಯದರ್ಶಿ ಪುರುಷೋತ್ತಮ ಪಿ.ಕೆ. ಕಮ್ಮಟದ ಸದಸ್ಯರಾದ ಶ್ರೀ ರತ್ನವರ್ಮ ಜೈನ್, ಶ್ರೀ ಭುಜಬಲಿ, ಶ್ರೀ ಶ್ರೀನಿವಾಸ್‌ರಾವ್, ಕೋಶಾಧಿಕಾರಿ ಶ್ರೀ ಧರ್ಣಪ್ಪ, ಶ್ರೀಮತಿ ಭವಾನಿ, ಶ್ರೀಮತಿ ಸಂಗೀತ,  ಶ್ರೀ ಶ್ರೀನಿವಾಸ್, ಶ್ರೀ ಜನಾರ್ಧನ್, ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


web counter 



Post a Comment

0 Comments
Post a Comment (0)
To Top