ಜಿಲ್ಲಾಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಅಂಬಿಕಾ ಕಾಲೇಜಿನ ವಿದ್ಯಾರ್ಥಿ ವಂಶಿಕ್‌ ದ್ವಿತೀಯ

Upayuktha
0


ಪುತ್ತೂರು: ನಗರದ ನಟ್ಟೋಜ ಪೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆಯ ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ಪ್ರಥಮ ಪಿ.ಯು.ಸಿ ವಿದ್ಯಾರ್ಥಿ ಎಂ. ವಂಶಿಕ್ ರೈ ಇವರು ಪದವಿ ಪೂರ್ವ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಸೆಪ್ಟಂಬರ್ 26 ರಂದು ಕಟೀಲಿನ ಯಸ್.ಡಿ.ಪಿ.ಟಿ. ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಜಿಲ್ಲಾಮಟ್ಟದ ಕರಾಟೆ ಸ್ಪರ್ಧೆಯಲ್ಲಿ (35-40 ಕೆ.ಜಿ ವಿಭಾಗ) ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಇವರು ಪುತ್ತೂರಿನ ಶಶಿಧರ ರೈ ಮತ್ತು ರವಿಕಲಾ ರೈ ದಂಪತಿಯ ಪುತ್ರ.




إرسال تعليق

0 تعليقات
إرسال تعليق (0)
To Top