ಸನಾತನ ಧರ್ಮ ಅವಹೇಳನ ಮಾಡಿದ ಸ್ಟಾಲಿನ್ ಪುತ್ರನ ನಡೆಗೆ ದ.ಕ ಜಿಲ್ಲಾ ಬಿಜೆಪಿ ಖಂಡನೆ

Upayuktha
0


ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಖಂಡನೆ ಸನಾತನ ಧರ್ಮ ಡೆಂಗ್ಯೂ, ಮಲೇರಿಯಾ ಇದ್ದಂತೆ ಸಂಪೂರ್ಣ ನಿರ್ಮೂಲನೆ ಮಾಡಬೇಕೆಂದು ಹೇಳಿರುವ ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್‌ನವರ ಹೇಳಿಕೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಸುದರ್ಶನ ಎಂ. ಖಂಡಿಸಿದ್ದಾರೆ.


ಸನಾತನ ಧರ್ಮ ಯಾವುದೇ ವ್ಯಕ್ತಿಯಿಂದ ಸ್ಥಾಪಿತವಾದದ್ದು ಅಲ್ಲ. ಜಗತ್ತಿನಲ್ಲಿ ಭಾರತ ಗುರುತಿಸಿಕೊಳ್ಳುವುದು ಸನಾತನ ಧರ್ಮ ಮತ್ತು ಆಧ್ಯಾತ್ಮಿಕ ಚಿಂತನೆಯಿಂದ. ಸಾವಿರಾರು ವರ್ಷಗಳ ಕಾಲ ಈ ದೇಶದ ಧರ್ಮ, ಸಂಸ್ಕೃತಿಯ ಮೇಲೆ ನಿರಂತರ ದಾಳಿಯಾದರೂ ಧರ್ಮ ನಾಶ ಹೊಂದಿಲ್ಲ. ಜಗತ್ತು ಭಾರತದ ಧರ್ಮ, ಸಂಸ್ಕೃತಿ ಸ್ವೀಕಾರ ಮಾಡುತ್ತಿರುವ ಕಾಲಘಟ್ಟದಲ್ಲಿ ಉದಯನಿಧಿಯವರ ಹೇಳಿಕೆ ಮೂರ್ಖತನದ ಪರಮಾವಧಿ. ಇಂಡಿಯಾ ಒಕ್ಕೂಟದ ಉದ್ದೇಶ ದೇಶದ ಅಭಿವೃದ್ಧಿಯಾಗಿರದೆ, ಧರ್ಮ, ಸಂಸ್ಕೃತಿ ನಾಶ ಮಾಡುವ ಹುನ್ನಾರ ಅಡಗಿದೆ ಎಂದು ಈ ಹೇಳಿಕೆಯಿಂದ ಸಾಬೀತಾಗಿದೆ. ಭಾರತದ ಉಸಿರಾಗಿರುವ ಸನಾತನ ಧರ್ಮವನ್ನು ನಾಶ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಸುದರ್ಶನ್ ಹೇಳಿದರು.


إرسال تعليق

0 تعليقات
إرسال تعليق (0)
To Top