ಅ.3ರಿಂದ 9ರ ವರೆಗೆ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಸರಣಿ ಪ್ರತಿಭಟನೆ

Upayuktha
0

ಸಾಂದರ್ಭಿಕ- ಪ್ರಾತಿನಿಧಿಕ ಚಿತ್ರ



ಮಂಗಳೂರು: ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸುವಂತೆ ಹಾಗೂ ಕಾರ್ಮಿಕರ ಸೌಲಭ್ಯಗಳನ್ನು ಕಡಿತ ಮಾಡಲು ಹೊರಟಿರುವ ಕಾರ್ಮಿಕರ ಮಂಡಳಿ ಮತ್ತು ಕಾರ್ಮಿಕ ಸಚಿವರ ನಡೆಯ ವಿರುದ್ದ ದಕ್ಷಿಣ ‌ಕನ್ನಡ ಜಿಲ್ಲೆಯ ಈ ಎಲ್ಲಾ ಸ್ಥಳಗಳಲ್ಲಿ ಬಿಎಂಎಸ್ ನ ಕಟ್ಟಡ ಕಾರ್ಮಿಕ ಮತ್ತು ಇತರೇ ನಿರ್ಮಾಣ ಕಾಮಗಾರಿ ಮಜ್ದೂರ್ ಸಂಘ ನೇತೃತ್ವದಲ್ಲಿ ಸರಣಿ ಪ್ರತಿಭಟನೆಗಳು ನಡೆಯಲಿವೆ ಎಂದು ಬಿಎಂಎಸ್ ರಾಜ್ಯ ಕಾರ್ಯದರ್ಶಿ ಜಯರಾಜ್ ಸಾಲಿಯಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಅಕ್ಟೋಬರ್ 3ರಂದು ಮಂಗಳವಾರ ಬೆಳ್ತಂಗಡಿ ತಹಶಿಲ್ದಾರರ ಕಛೇರಿ, ಸುಳ್ಯ ಬಸ್ ನಿಲ್ದಾಣದ ಬಳಿ, ವಿಟ್ಲ ನಾಡ ಕಛೇರಿ ಮುಂಭಾಗದಲ್ಲಿ ಹಾಗೂ ಮಂಗಳೂರು ಯೆಯ್ಯಾಡಿಯ ಕಾರ್ಮಿಕ‌ ಭವನ- ಮಹಿಳಾ ಐ.ಟಿ.ಐ ಕಾಲೇಜು ಎದುರು ಹಾಗೂ ಉಳ್ಳಾಲ ತಹಶಿಲ್ದಾರರ ಕಛೇರಿ ಎದುರು ಕಾರ್ಮಿಕರ ಪ್ರತಿಭಟನಾ ಪ್ರದರ್ಶನಗಳು ನಡೆಯಲಿವೆ.



ಅಕ್ಟೋಬರ್ 4 ರಂದು ಬುಧವಾರ ಮೂಡಬಿದಿರೆ ತಹಶಿಲ್ದಾರರ ಕಛೇರಿ, 5ರಂದು ಗುರುವಾರ ಬಂಟ್ವಾಳ ತಹಶಿಲ್ದಾರರ ಕಛೇರಿ, 6ರಂದು ಪುತ್ತೂರು ತಹಶಿಲ್ದಾರರ ಕಛೇರಿ, 9ರಂದು ಸೋಮವಾರ ಕಡಬ ತಹಶಿಲ್ದಾರರ ಕಛೇರಿ ಮುಂಭಾಗದಲ್ಲಿ ಪ್ರತಿಭಟನಾ ಸಭೆಗಳು ನಡೆಯಲಿವೆ. ಈ ಎಲ್ಲ ಸಭೆಗಳಲ್ಲಿ ಕಾರ್ಮಿಕರು ಅಗತ್ಯವಾಗಿ  ಪಾಲ್ಗೊಳ್ಳೋಣ ಎಂದು ಅವರು ಕರೆ ನೀಡಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top