ಮಂಗಳೂರು: ಕೆನರಾ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಅನಿಲಾ ಅವರು ಬರೆದ 'ಹೀಗೊಂದು ಹೆಣ್ಣಿನ ಮನದಾಳದಿಂದ' ಎಂಬ ಶೀರ್ಷಿಕೆಯ ಕನ್ನಡ ಲೇಖನಗಳ ಸಂಕಲನವನ್ನು ಕೆನರಾ ವಿಕಾಸ್ ಸಮೂಹ ಸಂಸ್ಥೆಗಳ ಸಂಯೋಜಕರಾದ ಬಸ್ತಿ ಪುರುಷೋತ್ತಮ ಶೆಣೈ ಅವರು ಕೆನರಾ ಸಂಧ್ಯಾ ಕಾಲೇಜು ಹಾಗೂ ಕೆನರಾ ವಿಕಾಸ್ ಸಮೂಹ ಸಂಸ್ಥೆಗಳ ಸಂಚಾಲಕರೂ ಕೆನರಾ ಹೈಸ್ಕೂಲ್ ಅಸೋಸಿಯೇಶನ್ ನ ಖಜಾಂಚಿಗಳೂ ಆಗಿರುವ ಸಿಎ ಎಂ.ವಾಮನ ಕಾಮತ್ ರವರ ಉಪಸ್ಥಿತಿಯಲ್ಲಿ ಇಂದು (ಸೆ.27) ಬಿಡುಗಡೆ ಮಾಡಿದರು.
ಕೆನರಾ ಕಾಲೇಜಿನ ವ್ಯವಸ್ಥಾಪಕರಾದ ಶಿವಾನಂದ್ ಶೆಣೈ ಹಾಗೂ ಕೆನರಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರೇಮಲತಾ ವಿ. ಇವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಪ್ರೊ. ಅನಿಲಾ ಅವರು ಆಂಗ್ಲ ಭಾಷೆಯಲ್ಲಿ ಈಗಾಗಲೇ ಎರಡು ಕೃತಿಗಳನ್ನು ಪ್ರಕಟಪಡಿಸಿದ್ದು,ಇದು ಅವರ ಮೂರನೆಯ ಕೃತಿಯಾಗಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


