ಸುರತ್ಕಲ್: ಮಹಿಳಾ ಸಶಕ್ತೀಕರಣದ ಮೂಲಕ ಬಲಿಷ್ಠ ವಿಶ್ವ ನಿರ್ಮಾಣ ಸಾಧ್ಯ. ಶತಮಾನೋತ್ಸವದ ಸಂಭ್ರಮದಲ್ಲಿರುವ ಇನ್ನರ್‌ವೀವೀಲ್ ಕ್ಲಬ್ ಉತ್ತಮ ನಾಯಕಿಯರನ್ನು ರೂಪಿಸುತ್ತಿದೆ. ಸುವ್ಯವಸ್ಥಿತ ಕಾರ್ಯವೈಖರಿ ಹಾಗೂ ಸಮಾಜಮುಖಿ ಚಟುವಟಿಕೆಗಳ ಮೂಲಕ ಇನ್ನರ್‌ವೀಲ್ ಕ್ಲಬ್ ಕ್ರಿಯಾಶೀಲ ವಾಗಿದೆ ಎಂದು ಇನ್ನರ್‍ವೀಲ್ ಜಿಲ್ಲೆ 318ರ ಜಿಲ್ಲಾಧ್ಯಕ್ಷೆ ಪೂರ್ಣಿಮಾ ರವಿ ನುಡಿದರು.
ಅವರು ಸುರತ್ಕಲ್ ಇನ್ನರ್‌ವೀಲ್ ಕ್ಲಬ್‍ಗೆ ಅಧಿಕೃತ ಭೇಟಿ ಹಾಗೂ ಸಮಾಜಮುಖಿ ಕಾರ್ಯಯೋಜನೆಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಸಮಾಜಸೇವಾ ಚಟುವಟಿಕೆಗಳ ಅಂಗವಾಗಿ ಲ್ಯುಕೇಮಿಯಾ ರೋಗಿಯೊರ್ವರ ಚಿಕಿತ್ಸೆಗಾಗಿ ಧನ ಸಹಾಯ, ಸುರತ್ಕಲ್ ಜಿಲ್ಲಾ ಪಂಚಾಯತ್ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ನಲಿಕಲಿಯ 35 ಪೀಠೋಪಕರಣಗಳ ಕೊಡುಗೆ, ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ವಿಶೇಷ ಚೇತನ ಮಗುವಿಗೆ ಹಾಗೂ ಅಶಕ್ತ ಮಹಿಳೆಗೆ ಆರ್ಥಿಕ ನೆರವು, ಹೊಸಬೆಟ್ಟು ಅಂಗನವಾಡಿಗೆ ಜಮಖಾನೆ, ಕುಳಾಯಿ ತರುಣವೃಂದ ಅಂಗನವಾಡಿಗೆ ವಾಟರ್ ಫಿಲ್ಟರ್, ಅಂಚೆ ಇಲಾಖೆಯಲ್ಲಿ ಮಹಿಳಾ ಸಮ್ಮಾನ್ ಯೋಜನೆಯನ್ವಯ ಮೂವರು ಬಾಲಕಿಯರಿಗೆ ಧನ ಸಹಾಯ, ಸುರತ್ಕಲ್ ಬೋರುಗುಡ್ಡೆ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಗೆ ಗೋಡ್ರೆಜ್ ಕಪಾಟು ವಿತರಿಸಲಾಯಿತು. ಅಂತರಾಷ್ಟ್ರೀಯ ಇನ್ನರ್‌ವೀಲ್ ಶತವರುಷದ ಪ್ರಯುಕ್ತ ಪರಿಸರಸ್ನೇಹಿ ನೂರು ಚೀಲಗಳನ್ನು ಬಿಡುಗಡೆಗೊಳಿಸ ಲಾಯಿತು.
ಇನ್ನರ್‌ವೀಲ್ ಕ್ಲಬ್‍ನ ವಿಶೇಷ ಸಂಚಿಕೆಯನ್ನು ಸುರತ್ಕಲ್ ರೋಟರಿ ಕ್ಲಬ್‍ನ ಕಾರ್ಯದರ್ಶಿ ರೊ. ರಮೇಶ್ ರಾವ್ ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಇನ್ನರ್‌ವೀಲ್ ಕ್ಲಬ್‍ನ ಅಧ್ಯಕ್ಷೆ ಸಾವಿತ್ರಿ ರಮೇಶ್ ಭಟ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಪಾವನಾ ವರದಿ ಮಂಡಿಸಿದರು. ಪರಿಮಳ ರಾವ್ ಸಂದೇಶ ವಾಚಿಸಿದರು. ಕೋಶಾಧಿಕಾರಿ ಶುಭದಾ ಭಟ್ ಅತಿಥಿಗಳನ್ನು ಪರಿಚಯಿಸಿದರು. ವಿಶೇಷ ಸಂಚಿಕೆ ಸಂಪಾದಕಿ ಶೈಲಾ ಮೋಹನ್, ಡಾ. ಶಶಿಕಲಾ, ಶುಭ ಜಗದೀಶ್ ಮತ್ತು ಸುನಿತಾ ಗುರುರಾಜ್ ಯೋಜನೆಗಳ ಮಾಹಿತಿ ನೀಡಿದರು. ವೀಣಾ ನಾಗರಾಜ್ ಮತ್ತು ವಿದ್ಯಾ ರಾಮಮೋಹನ್ ಕಾರ್ಯಕ್ರಮ ನಿರೂಪಿಸಿದರು. ಸದಸ್ಯೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


