ಭಜನೆಯು ವಿಭಜಿಸುವುದಿಲ್ಲ, ಒಗ್ಗೂಡಿಸುತ್ತದೆ: ಎಡನೀರು ಶ್ರೀಗಳು

Upayuktha
0

ಧರ್ಮಸ್ಥಳ ಭಜನಾ ಕಮ್ಮಟದ ರಜತ ಮಹೋತ್ಸವ ಸಂಭ್ರಮದಲ್ಲಿ  ಭಜನಾ ತರಬೇತಿ




ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿರುವ 25ನೇ ವರ್ಷದ ಭಜನಾ ಕಮ್ಮಟದ ಮೂರನೇ ದಿನದ ಕಾರ್ಯಕ್ರಮಕ್ಕೆ ಕಾಸರಗೋಡಿನ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಇವರು ಭೇಟಿ ನೀಡಿ ಭಜನಾ ತರಬೇತಿಯಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳಿಗೆ ಭಜನೆಯು ವಿಭಜಿಸುವುದಿಲ್ಲ. ಬದಲಾಗಿ ಒಗ್ಗೂಡಿಸುತ್ತದೆ. 'ದೇವರನ್ನು ಭೇಟಿ ಮಾಡಲು ಸುಲಭದ ಮಾರ್ಗ ಭಜನೆಯಾಗಿದೆ'  ಎಂದು ಹೇಳಿದರು.


ಯಾರು ಸಮಾಜವನ್ನು ವಿಭಜಿಸುವ ಕಾರ್ಯಕ್ಕೆ ಯಾರು ಭಾಗಿಯಾಗುತ್ತಾರೋ ಅದು ಅಧರ್ಮದ ಅಪ್ರಕ್ರಿಯೆ. ಎಲ್ಲರನ್ನು ಒಗ್ಗೂಡಿಸುವ ಪ್ರಯತ್ನ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಆಗುತ್ತಿದೆ. ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆ ಧಾರ್ಮಿಕ ಸಂಘಟನೆ, ಸಾಮಾಜಿಕ, ಶೈಕ್ಷಣಿಕ ಸಂಸ್ಥೆಗಳ ಮೂಲಕ ಎಲ್ಲರ ಅಭಿವೃದ್ಧಿಗೆ ಕೈ  ಜೋಡಿಸುತ್ತಿದೆ. ಶ್ರೀ ಕ್ಷೇತ್ರ ಧರ್ಮಸ್ಥಳವು ಭಾರತದ ಭೂಪಟದಲ್ಲಿ ರಾರಾಜಿಸುವಂತೆ ಮಾಡಿದ ಕೀರ್ತಿ ಡಾ|| ಡಿ. ವೀರೇಂದ್ರ ಹೆಗ್ಗಡೆಯವರಿಗೆ ಸಲ್ಲುತ್ತದೆ. ಹೆಗ್ಗಡೆಯವರ ಈ ಕಾರ್ಯಕ್ಕೆ ವಿಶೇಷ ಅಭಿನಂದನೆಯನ್ನು ಸಲ್ಲಿಸುತ್ತೇನೆ ಎಂದು ಶುಭಹಾರೈಸಿದರು. 


ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿರುವ ಭಜನಾ ಕಮ್ಮಟದ ರಜತ ಮಹೋತ್ಸವದ ಮೂರನೇ ದಿನವಾದ ಇಂದು (ಸೆ.30) ಶಾಂತಿವನ ಟ್ರಸ್ಟ್‌ನ ಯೋಗ ನಿರ್ದೇಶಕ   ಡಾ|. ಐ ಶಶಿಕಾಂತ್ ಜೈನ್  ಇವರು ಮುಂಜಾನೆ ಶಿಬಿರಾರ್ಥಿಗಳಿಗೆ ಯೋಗ ಅಭ್ಯಾಸವನ್ನು ಮಾಡಿಸಿದರು. ಇಂದಿನ ಸಂಪನ್ಮೂಲ ವ್ಯಕ್ತಿಗಳಾಗಿ ರಾಜ್ಯದ ಪ್ರತಿಷ್ಠಿತ ಭಜನಾ ಕಲಾವಿದರಾದ ರಾಮಕೃಷ್ಣ ಕಾಟುಕುಕ್ಕೆ ಅವರು ಭಜನಾ ತರಬೇತಿಯನ್ನು ನಡೆಸಿಕೊಟ್ಟರು. ಮತ್ತು ಶ್ರೀಮತಿ ಸೌಮ್ಯ ಸುಭಾಷ್ ಅವರು ಭಜನೆ, ಶೋಭಾನೆ, ಸಂಪ್ರದಾಯ ಹಾಡುಗಳನ್ನು  ಕಮ್ಮಟದಲ್ಲಿ ಹೇಳಿಕೊಟ್ಟರು.


ಪ್ರತೀ ದಿನ ಪುರುಷ ಶಿಬಿರಾರ್ಥಿಗಳಿಗೆ ರಾಜ್ಯಮಟ್ಟದ ನೃತ್ಯ ಭಜನಾ ತರಬೇತುದಾರರಾದ ರಮೇಶ್ ಕಲ್ಮಾಡಿ ಹಾಗೂ ಶಂಕರ್,  ಅವರಿಂದ ಕುಣಿತ ಭಜನಾ ತರಬೇತಿಯನ್ನು, ಮಹಿಳಾ ಶಿಬಿರಾರ್ಥಿಗಳಿಗೆ ವಿದುಷಿ ಚೈತ್ರಾ ಧರ್ಮಸ್ಥಳ ಅವರಿಂದ ನೃತ್ಯ ಭಜನಾ ತರಬೇತಿಯನ್ನು  ನಡೆಸಲಾಗುತ್ತಿದೆ. 


ಮದ್ಯಾಹ್ನ 12 ಘಂಟೆಗೆ ಭಜನಾ ಮಂಡಳಿಗಳಲ್ಲಿ ಧಾರ್ಮಿಕ ಆಚರಣೆಗಳು ಎಂಬ ವಿಚಾರದ ಕುರಿತು ಉಜಿರೆ ಆಶೋಕ್ ಭಟ್ ರವರು ಉಪನ್ಯಾಸವನ್ನು ನಡೆಸಿಕೊಟ್ಟರು. ನೀನ್ಯಾಕೋ ನಿನ್ನ ಹಂಗ್ಯಾಕೋ, ದೇವರ ನಾದೋಪಾಸನೆ ದೇವರ ನಾಮಬಲವೇ ಸಾಕು. ಇಂದ್ರಿಯಗಳು ಅರಳಬೇಕು ಕೆರಳಬಾರದು. ಎಲ್ಲಾ ರಸಗಳಿಗೆ, ಎಲ್ಲಾ ಕಲೆಗಳಿಗೆ ಮೂಲ ದೇವರು ಎಂದು ನುಡಿದರು.


ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಎಸ್.ಡಿ.ಎಂ. 'ಕಲಾಕೇಂದ್ರ' ಉಜಿರೆ ಕಾಲೇಜಿನ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನಗೊಂಡಿತು. 


ಭಜನಾ ಕಮ್ಮಟದಲ್ಲಿ ಡಾ| ಡಿ ವೀರೇಂದ್ರ ಹೆಗ್ಗಡೆಯವರು, ಶ್ರೀ ಶ್ರೀ ಶ್ರೀ ಮೋಹನದಾಸ ಸ್ವಾಮೀಜಿ, ಶ್ರೀ ಧಾಮ ಮಾಣಿಲ. ಮಾತೃಶ್ರೀ ಡಾ| ಹೇಮಾವತಿ ವೀ. ಹೆಗ್ಗಡೆಯವರು, ಕಮ್ಮಟದ ಸಂಚಾಲಕರಾದ ಶ್ರೀ ಸುಬ್ರಹ್ಮಣ್ಯ ಪ್ರಸಾದ್, ಕಾರ್ಯದರ್ಶಿ ಸುರೇಶ್ ಮೊಯಿಲಿ, ಪರಿಷತ್‌ನ ಅಧ್ಯಕ್ಷರಾದ ಬಾಲಕೃಷ್ಣ ಪಂಜ, ಕಾರ್ಯದರ್ಶಿ ಪುರುಷೋತ್ತಮ ಪಿ.ಕೆ. ಕಮ್ಮಟದ ಸದಸ್ಯರಾದ ರತ್ನವರ್ಮ ಜೈನ್,  ಶ್ರೀನಿವಾಸ್‌ರಾವ್, ಕೋಶಾಧಿಕಾರಿ ಧರ್ಣಪ್ಪ, ಶ್ರೀಮತಿ ಭವಾನಿ, ಶ್ರೀಮತಿ ಸಂಗೀತ,  ಶ್ರೀನಿವಾಸ್, ಜನಾರ್ಧನ್, ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top