ಕಲ್ಲಡ್ಕ ಮೊಸರು ಕುಡಿಕೆ ಉತ್ಸವ ಸಂಭ್ರಮ; ಆಕರ್ಷಕ ಶ್ರೀಕೃಷ್ಣ ಕುಚೇಲ ನೃತ್ಯರೂಪಕ

Upayuktha
1 minute read
0

ಬಂಟ್ವಾಳ: ಕಲ್ಲಡ್ಕದ ಶ್ರೀರಾಮ ಮಂದಿರದ 91ನೇ ವರ್ಷದ ಮೊಸರು ಕುಡಿಕೆ ಉತ್ಸವ ವಿಜೃಂಭಣೆಯಿಂದ ಜರಗಿತು. ಕಲ್ಲಡ್ಕ ಮಂದಿರದಿಂದ ಹೊರಟು ಪ್ರಮುಖ ರಸ್ತೆಯಲ್ಲಿ ಹಲವು ಟ್ಯಾಬ್ಲೋ ಸಹಿತ ಶ್ರೀಕೃಷ್ಣನ ಶೋಭಾಯಾತ್ರೆ ಸಹಸ್ರಾರು ಭಕ್ತರ ಪಾಲ್ಗೊಳ್ಳುವಿಕೆಯಿಂದ ಸಂಪನ್ನಗೊಂಡಿತು.


ಶ್ರೀ ರಾಮ ವಿದ್ಯಾಕೇಂದ್ರದ ಮಕ್ಕಳು ಕೃಷ್ಣ ಯಶೋದೆಯರ ವೇಷದಲ್ಲಿ ಪಾಲ್ಗೊಂಡು ಕೃಷ್ಣಲೋಕ ಸೃಷ್ಟಿಸಿದರು.

ನೇತಾಜಿ ಯುವಕ ಮಂಡಲ‌ ಕಲ್ಲಡ್ಕದ ಚಕ್ರವರ್ತಿ ಶಿವಾಜಿ, ಶ್ರೀಕೃಷ್ಣ ಕುಚೇಲ ನೃತ್ಯ ರೂಪಕ ಹಾಗೂ ಶಿಲ್ಪಗೊಂಬೆ ಬಳಗದ ನವಿಲು ನೃತ್ಯ ವಿಶೇಷ ಜನಮೆಚ್ಚುಗೆ ಪಡೆಯಿತು.


ಓಂ ಶಕ್ತಿ ಬಳಗದ ಗಜಾಸುರ ವಧೆ, ಕುದ್ರೆಬೆಟ್ಟು ಮಣಿಕಂಠ ಯುವಶಕ್ತಿಯ ಅರುಣಾಸುರ ವಧೆ, ರಾಯಪ್ಪ ಕೋಡಿ ತ್ರಿಶೂಲ್ ಫ್ರೆಂಡ್ಸ್‌ನ ವೃತ್ತಾಸುರ ವಧೆ, ಕಟ್ಟೆಮಾರು ಮಂತ್ರದೇವತಾ ಕ್ಷೇತ್ರದ ಬಂಡಾಸುರ ವಧೆ, ವಿಶ್ವ ಹಿಂದು ಪರಿಷತ್ ಭಜರಂಗ ದಳದ ಚೆಂಡೆವಾದನ, ನಾಸಿಕ್ ಬ್ಯಾಂಡ್ ಮೊದಲಾದ ಹಲವು ಸ್ತಬ್ದಚಿತ್ರಗಳು‌ ಆಕರ್ಷಣೆ ನೀಡಿದವು.


ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಶ್ರೀ ರಾಮ ವಿದ್ಯಾಕೇಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ ಮೊದಲಾದ ಪ್ರಮುಖರಿದ್ದರು.


ಶ್ರೀ ರಾಮಾಂಜನೇಯ ಸೇವಾಟ್ರಸ್ಟ್ ಅಧ್ಯಕ್ಷ ಡಾ. ಪ್ರಭಾಕರ ಭಟ್ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನೆರವೇರಿತು. ಮಂಗಳೂರು ವಿಭಾಗ ಸಹ ಕಾರ್ಯವಾಹ ಸುಭಾಶ್ಚಂದ್ರ ಕಳಂಜ ಮೊಸರು ಕುಡಿಕೆ ಮಹತ್ವ ತಿಳಿಸಿದರು.


ಪ್ರಧಾನ ಕಾರ್ಯದರ್ಶಿ ನಾಗೇಶ ಕಲ್ಲಡ್ಕ, ಶ್ರೀರಾಮ ಮಂದಿರ‌ ಆಡಳಿತ ಸಮಿತಿ‌ ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್, ಕಾರ್ಯದರ್ಶಿ ಕ.ಕೃಷ್ಣ ಪ್ಪ, ಶ್ರೀರಾಮ ಸೇವಾ ಸಮಿತಿಯ ಪುಷ್ಪರಾಜ ಶೆಟ್ಟಿಗಾರ್, ಕಾರ್ಯದರ್ಶಿ ಸುಜಿತ್ ಕೊಟ್ಟಾರಿ, ಶ್ರೀರಾಮ ಭಜನಾ ಮಂಡಳಿ ಅಧ್ಯಕ್ಷ ಹರೀಶ್, ಕಾರ್ಯದರ್ಶಿ ಉತ್ತಮ ಪಳನೀರು ಮೊದಲಾದವರು ನೇತೃತ್ವ ವಹಿಸಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

Post a Comment

0 Comments
Post a Comment (0)
To Top