ಡಾ. ಬೇಲೂರು ರಘು ನಂದನ್ ನಿರ್ದೇಶನದಲ್ಲಿ "ಗರ್ಭ" - ಹೊಸ ರಂಗ ಪ್ರಯೋಗ

Upayuktha
0


ಬೆಂಗಳೂರು: ರಂಗ ಚಂದಿರ ಮತ್ತು ಸಮೃದ್ಧಿ ತಂಡಗಳು ಅ.5ರಂದು ಸಂಜೆ 5:00 ಗಂಟೆಗೆ ನಯನ ಸಭಾಂಗಣದಲ್ಲಿ  "ರಂಗ ಪತಾಕೆ 2023"ರ ಶೀರ್ಷಿಕೆ ಅಡಿಯಲ್ಲಿ  "ಕಾಲೇಜು ರಂಗಭೂಮಿಯನ್ನು  ಪ್ರೋತ್ಸಾಹಿಸಿ' ಎಂಬ  ವಾಕ್ಯದೊಂದಿಗೆ ಮೌಂಟ್ ಕಾರ್ಮೆಲ್ ಕಾಲೇಜ್ ಕನ್ನಡ ಸಂಘದ ಮಹಿಳಾ ರಂಗ ತಂಡ ಅಭಿನಯಿಸುವ ಡಾ. ಬೇಲೂರು ರಘು ನಂದನ್ ರವರು ರಚನೆ, ವಿನ್ಯಾಸ, ಸಂಗೀತ, ನಿರ್ದೇಶನದಲ್ಲಿ ಮಹಿಳಾ ಪ್ರಧಾನ ನಾಟಕ "ಗರ್ಭ" ಹೊಸ ರಂಗ ಪ್ರಯೋಗವನ್ನು ಪ್ರದರ್ಶನ ಮಾಡಲಿದ್ದಾರೆ. 


ಈ ನಾಟಕ ಪ್ರದರ್ಶನವನ್ನು  ವಿಜಯವಾಣಿ ದಿನಪತ್ರಿಕೆಯ ಪ್ರಧಾನ ಸಂಪಾದಕ ಕೆ.ಎನ್ ಚನ್ನೇಗೌಡರು ಉದ್ಘಾಟನೆ ಮಾಡಲಿದ್ದಾರೆ, ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಎಂ. ಪ್ರಕಾಶ ಮೂರ್ತಿ, ಡಾ. ಜಾರ್ಜ್ ಲೇಖ, ಡಾ. ಬೇಲೂರು ರಘುನಂದನ್, ಡಾ. ರವೀಶ್, ಆರ್ ಕೆ ಹೆಗಡೆ, ಲಯನ್ ಶೋಭಾ ಶ್ರೀನಿವಾಸ್, ಮುಂತಾದವರು ಭಾಗವಹಿಸಲಿದ್ದಾರೆ, ಎಂದು ರಂಗ ಚಂದಿರದ ಕಾರ್ಯದರ್ಶಿ ಜಿಪಿಓ ಚಂದ್ರು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)
To Top