ಬೆಂಗಳೂರು: ಪಂಡಿತ್ ಹಿಂದೂಸ್ತಾನಿ ಸಂಗೀತ ದಿಗ್ಗಜ ಮಲ್ಲಿಕಾರ್ಜುನ ಮನ್ಸೂರ್ ಅವರ ಸ್ಮರಣಾರ್ಥ ಬೆಂಗಳೂರು ಕಿಡ್ನಿ ಪೌಂಡೇಶನ್ ವತಿಯಿಂದ 18ನೇ ದ್ವನಿ ಸಂಗೀತ ಸಂಭ್ರಮವನ್ನು ಎರಡು ದಿನಗಳ ಕಾಲ ಬೆಂಗಳೂರಿನ ಜೆ ಎಸ್ ಎಸ್ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಸಂಗೀತ ವಿದುಷಿ ಪದ್ಮ ತಲ್ವಾಲ್ಕರ್ ಅವರಿಗೆ ಹಿಂದೂಸ್ತಾನಿ ಸಂಗೀತ ದಿಗ್ಗಜ ಪಂಡಿತ್ ಮಲ್ಲಿಕಾರ್ಜುನ ಮನ್ಸೂರ್ ಸ್ಮಾರಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಹಿರಿಯ ನಿವೃತ್ತ ಪೋಲಿಸ್ ಅಧಿಕಾರಿ ಗೋಪಾಲ್ ಹೊಸೂರ್, ಕೊಳಲು ವಾದಕ ಪ್ರವೀಣ್ ಗೊಡ್ಕಿಂಡಿ, ಬಿಕೆಎಫ್ ಫೌಂಡೇಶನ್‌ನ ಅಧ್ಯಕ್ಷ ಸುದೀರ್ ಶೆಣೈ, ಡಾ.ಪಿ.ಶ್ರೀನಿವಾಸ್ ಮತ್ತಿತರರು ಭಾಗವಹಿಸಿದ್ದರು.
ಕಾರ್ಯಕ್ರಮ ಉದ್ಘಾಟಿಸಿ, ಪ್ರಶಸ್ತಿ ಪ್ರಧಾನ ಮಾಡಿ ಮಾತನಾಡಿದ ಗೋಪಾಲ್ ಹೊಸೊರ್, ಕಾಡುಗಳ್ಳ ವೀರಪ್ಪನ್ ಕಾರ್ಯಾಚರಣೆ ಸಂದರ್ಭದಲ್ಲಿ ಗಾಯಗೊಂಡು ಆರು ತಿಂಗಳ ಕಾಲ ಚಿಕಿತ್ಸೆ ಪಡೆಯುತ್ತಿದ್ದಾಗ ಪ್ರತಿ ದಿವಸ ಮಲ್ಲಿಕಾರ್ಜುನ್ ಮನ್ಸೂರ್ ಅವರ ಹಿಂದೂಸ್ತಾನಿ ಸಂಗೀತವನ್ನು ಕೇಳುತ್ತಿದೆ.ಇದರಿಂದ ಬೇಗ ಹುಷರಾದೆ ಅಂತಹ ಶಕ್ತಿ ಹಿಂದೂಸ್ತಾನಿ ಸಂಗೀತಕ್ಕಿದೆ.ವಿಶೇಷವಾಗಿ ಕಿಡ್ನಿ ತೊಂದರೆ ರೋಗಿಗಳ ಆರೈಕೆಗೆ ನಿಧಿ ಸಂಗ್ರಹಕ್ಕಾಗಿ ಇಂತಹ ಸಂಗೀತ ಕಾರ್ಯಕ್ರಮ ಆಯೋಜಿಸುತ್ತಿರುವುದು ಅತ್ಯಂತ ಖುಷಿ ತಂದಿದೆ ಎಂದು ಹೇಳಿದರು.
ಪ್ರವೀಣ್ ಗೊಡ್ಖಿಂಡಿ ಮಾತನಾಡಿ, ಬೆಂಗಳೂರು ಕಿಡ್ನಿ ಪೌಂಡೇಶನ್ ಮಲ್ಲಿಕಾರ್ಜುನ ಮನ್ಸೂರ್ ಅವರ ಸ್ಮರಣಾರ್ಥ ಪ್ರತಿವರ್ಷ ಇಂತಹ ಸಂಗೀತ ಕಾರ್ಯಕ್ರಮ ಆಯೋಜಿಸುತ್ತಿರುವುದು ಸಮಾಜದ ಅನೇಕ ಬಡ ರೋಗಿಗಳಿಗೆ ಹೆಚ್ಚು ಅನುಕೂಲಕರವಾಗಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪಂಡಿತ ಸಂಜೀವ್ ಶಂಕರ್, ಪಂಡಿತ್ ಆಶ್ವಿನಿ ಶಂಕರ್ ಅವರ ಶಹನಾಯಿ ಸಂಗೀತ ಕಛೇರಿ ಮನಸೂರೆಗೊಂಡಿತ್ತು. ಪಂಡಿತ್ ಜಯತೀರ್ಥ ಮೇವುಂಡಿ ಅವರ ಗಾಯನ, ವಿದುಷಿ ದಿವ್ಯ ಶೆಣೈ ಅವರ ಗಾಯನ, ಸರ್ಪಾಜ್ ಖಾನ್ ಅವರಿಂದ ಸಾರಂಗಿ ವಾದನದೊಂದಿಗೆ ಸಂಪನ್ನಗೊಂಡಿತು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ