ಬದಿಯಡ್ಕ: ರಂಗಸಿರಿ ಗ್ರಾಮಪರ್ಯಟನೆ

Upayuktha
0


ಬದಿಯಡ್ಕ: ಗ್ರಾಮೀಣ ಪ್ರದೇಶಗಳನ್ನು ತಲುಪುವ ರಂಗಸಿರಿಯ ಗ್ರಾಮಪರ್ಯಟನೆಯಂತಹ ಕಾರ್ಯಕ್ರಮಗಳು ತುಂಬಾ  ಪರಿಣಾಮಕಾರಿಯಾಗಿವೆ ಎಂದು ವಿದ್ವಾನ್ ಪ್ರಭಾಕರ ಕುಂಜಾರು ಹೇಳಿದರು. ಸಂತ ಬಾರ್ತಲೋಮಿಯ ಅನುದಾನಿತ ಹಿರಿಯ ಪ್ರಾಥಮಿಕ  ಶಾಲೆಯಲ್ಲಿ ನಡೆದ ರಂಗಸಿರಿ ಗ್ರಾಮಪರ್ಯಟನೆಯ 7ನೇ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ಕಾರ್ಯಕ್ರಮವನ್ನು ನಡೆಸಲಾಯಿತು.


ರಂಗಸಿರಿ ಸಾಂಸ್ಕ್ರತಿಕ ವೇದಿಕೆಯ ಅಧ್ಯಕ್ಷೆ ಶ್ರೀಮತಿ ಪ್ರಭಾವತಿ ಕೆದಿಲಾಯ ಪುಂಡೂರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಬದಿಯಡ್ಕ ಗ್ರಾಮಪಂಚಾಯತು ಜನಪ್ರತಿನಿಧಿ ಶ್ರೀ ಶಂಕರ ಡಿ ಹಾಗೂ ಶಾಲಾ ಮುಖ್ಯ ಶಿಕ್ಷಕಿ ಭಕ್ರಿಸ್ಟೆಲ್ಲ ಫೆರ್ನಾಂಡಿಸ್  ಶುಭಹಾರೈಸಿದರು. ಮಂಡಲ ಆರ್ಟ್ ಕುರಿತಾಗಿ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ಭುವನೇಶ್ವರಿ ಪಿ ಪರಿಚಯ ನೀಡಿದರು. ಸಭಾ ಕಾರ್ಯಕ್ರಮದ ಬಳಿಕ ಮಂಡಲ ಆರ್ಟ್ ಕಾರ್ಯಾಗಾರ ಡೆಯಿತು. ಕಾಸರಗೋಡಿನ ವಿವಿಧ ಭಾಗಗಳಿಂದ ಮಕ್ಕಳು ಹಾಗೂ ಹಿರಿಯರು ಪಾಲ್ಗೊಂಡರು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

'ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


web counter  

إرسال تعليق

0 تعليقات
إرسال تعليق (0)
To Top