ಅಂಬಿಕಾದಲ್ಲಿ ‘ನಾಟ' ತರಗತಿಗಳ ಉದ್ಘಾಟನೆ

Upayuktha
0



ಪುತ್ತೂರು: ಪ್ರಸಕ್ತ ವಿದ್ಯಮಾನದಲ್ಲಿ ಡಾಕ್ಟರ್, ಇಂಜಿನಿಯರ್‍ ಗಳ ಸಾಲಿಗೆ ಸೇರುವ ಬಹು ಬೇಡಿಕೆಯ ಇನ್ನೊಂದು ವೃತ್ತಿ ಎಂದರೆ ‘ಆರ್ಕಿಟೆಕ್ಟ್'. ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಇರುವ ಈ ವೃತ್ತಿಪರ ಶಿಕ್ಷಣಕ್ಕೆ ಸೇರಬೇಕಾದರೆ ಪಿಯುಸಿಯ ನಂತರ ವಿದ್ಯಾರ್ಥಿಗಳು ನಾಟ (ನ್ಯಾಷನಲ್ ಆಪ್ಟಿಟ್ಯೂಡ್ ಟೆಸ್ಟ್ ಇನ್ ಆರ್ಕಿಟೆಕ್ಚರ್) ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಬೇಕು ಎಂದು ನಾಟ ಸಂಪನ್ಮೂಲ ವ್ಯಕ್ತಿ ಸುನಿಲ್ ಅಬ್ರಹಾಂ ಹೇಳಿದರು.


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ವಸತಿಯುತ ಪದವಿ ಪೂರ್ವ ವಿದ್ಯಾಲಯದಲ್ಲಿ 2023_ 24ನೇ ಶೈಕ್ಷಣಿಕ ಸಾಲಿನ ನಾಟ ತರಗತಿಗಳನ್ನು ಉದ್ಘಾಟನೆಗೈದು ನಡೆಸಲಾಯಿತು.


ಈ ಸಂದರ್ಭದಲ್ಲಿ ಸುನಿಲ್ ಅಬ್ರಹಾಂ ಅವರು ವಿದ್ಯಾರ್ಥಿಗಳಿಗೆ ಆರ್ಕಿಟೆಕ್ಚರ್ ವೃತ್ತಿಯ ಬಗೆಗಿನ ವಿವಿಧ ಮಾಹಿತಿಗಳನ್ನು ನೀಡಿದ್ದಲ್ಲದೆ ನಾಟ ಪರೀಕ್ಷೆಯ ತಯಾರಿ ಹೇಗಿರಬೇಕೆಂದು ತಿಳಿಸಿಕೊಟ್ಟರು.  ಕಾರ್ಯಕ್ರಮದಲ್ಲಿ ಅಂಬಿಕಾ ವಸತಿಯುತ ಪದವಿ ಪೂರ್ವ ವಿದ್ಯಾಲಯದ ಪ್ರಾಂಶುಪಾಲೆ ಸುಚಿತ್ರಾ ಪ್ರಭು ಉಪಸ್ಥಿತರಿದ್ದರು. ಪ್ರಯೋಗಾಲಯ ಸಹಾಯಕ ಕೌಶಿಕ್ ಸಹಕರಿಸಿದರು.


  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top