ಅಮೆಜಾನ್ ಎಂಸಿಎಫ್ ಸ್ಥಾಪನೆ

Upayuktha
0



ಮಂಗಳೂರು: ದೇಶದ ಎಲ್ಲೆಡೆ ಬಹುಬಗೆಯ ದಾಸ್ತಾನು ಹಾಗೂ  ಪೂರೈಕೆ ಸೌಲಭ್ಯ ಕೇಂದ್ರಗಳನ್ನು (ಎಂಸಿಎಫ್) ಪ್ರಾರಂಭಿಸುವುದಾಗಿ ಅಮೆಜಾನ್‍ಡಾಟ್‍ಇನ್ ಪ್ರಕಟಿಸಿದೆ. ಈ ಸೌಲಭ್ಯಕ್ಕೆ ಚಾಲನೆ ನೀಡುವುದರೊಂದಿಗೆ ಡಿ2ಸಿ ಬ್ರ್ಯಾಂಡ್‍ಗಳು, ತಯಾರಕರು ಮತ್ತು ವಿವಿಧ ಉದ್ಯಮಗಳಾದ್ಯಂತದ ಚಿಲ್ಲರೆ ವ್ಯಾಪಾರಿಗಳು ಸೇರಿದಂತೆ ಮಾರಾಟಗಾರರು ಗ್ರಾಹಕರಿಗೆ ತಮ್ಮ ಸರಕುಗಳನ್ನು ಪೂರೈಸುವ ಕಾರ್ಯಾಚರಣೆಗಳಲ್ಲಿ ಕ್ರಾಂತಿಯನ್ನೇ  ಮಾಡಬಹುದು ಎಂದು ಪ್ರಕಟಣೆ ಹೇಳಿದೆ.


ಮಾರಾಟಗಾರರಿಗೆ ತಮ್ಮ ಅಮೆಜಾನ್‍ಗೆ ಹೊರತಾದ ಖರೀದಿದಾರರ  ಬೇಡಿಕೆಗಳನ್ನು ಪೂರೈಸುವುದನ್ನೂ 'ಎಂಸಿಎಫ್' ಸುಲಭಗೊಳಿಸಲಿದೆ. ಇಂತಹ ಗ್ರಾಹಕರ  ಮೇಲೆ ನಿಗಾ ಇರಿಸಲು  ಮತ್ತು ತೆರಿಗೆ ಸರಕುಪಟ್ಟಿ (ಇನ್‍ವಾಯ್ಸ್) ತಯಾರಿಸುವುದನ್ನು ಸುಲಭಗೊಳಿಸುತ್ತದೆ . ಅದೇ ಸಮಯದಲ್ಲಿ ತ್ವರಿತ ಸಾಗಾಟ ಮತ್ತು ವೇಗದ ವಿತರಣೆಯನ್ನು ಖಾತ್ರಿಪಡಿಸುತ್ತದೆ. ಇದು ಮಾರಾಟಗಾರರಿಗೆ ಸರಕುಗಳನ್ನು ಗ್ರಾಹಕರಿಗೆ ಪೂರೈಸುವ ಪ್ರಕ್ರಿಯೆಯನ್ನು ಸರಳಗೊಳಿಸುತ್ತದೆ ಎಂದು ಅಮೆಜಾನ್ ಇಂಡಿಯಾದ ಪೂರೈಕೆ ಚಾನೆಲ್‍ಗಳು ಮತ್ತು ಜಾಗತಿಕ ವ್ಯಾಪಾರದ ಉಪಾಧ್ಯಕ್ಷ ವಿವೇಕ್ ಸೋಮರೆಡ್ಡಿ ಹೇಳಿದ್ದಾರೆ.


ಮಾರಾಟಗಾರರ ಎಲ್ಲ ಬಗೆಯ ಪೂರೈಕೆ ಅಗತ್ಯಗಳಿಗಾಗಿ ಸಮಗ್ರ ಮತ್ತು ಉತ್ತಮ-ದರ್ಜೆಯ ಪರಿಹಾರವನ್ನು 'ಎಂಸಿಎಫ್' ಒದಗಿಸುತ್ತವೆ. ಮಾರಾಟಗಾರರು ಉತ್ಪನ್ನ ಅಭಿವೃದ್ಧಿ, ಮಾರಾಟ ತಂತ್ರ ಮತ್ತು ಗ್ರಾಹಕ ಸೇವೆಯಂತಹ ಪ್ರಮುಖ ವ್ಯಾಪಾರ ಚಟುವಟಿಕೆಗಳ ಮೇಲೆ ತಮ್ಮೆಲ್ಲ ಗಮನ ಕೇಂದ್ರೀಕರಿಸಲು ಅವಕಾಶ ಒದಗಿಸುತ್ತದೆ ಎಂದು ವಿವರಿಸಿದ್ದಾರೆ.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top