ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಐವರು ವಿದ್ಯಾರ್ಥಿಗಳು ಲಂಡನ್ ಸ್ಟಾಕ್ ಎಕ್ಸಚೇಂಜ್ ಗ್ರೂಪ್‍ಗೆ ಆಯ್ಕೆ

Upayuktha
0

ಆಕರ್ಷಕ 11.5 ಲಕ್ಷ ಪ್ಯಾಕೇಜ್ 


ಮೂಡುಬಿದಿರೆ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ  ಐವರು ವಿದ್ಯಾರ್ಥಿಗಳು ಪ್ರತಿಷ್ಟಿತ ಲಂಡನ್ ಸ್ಟಾಕ್ ಎಕ್ಸಚೇಂಜ್ ಗ್ರೂಪ್‍ಗೆ ಗ್ರಾಜುಯೇಟ್ ಇಂಜಿನಿಯರ್ ಟ್ರೈನಿ ಹುದ್ದೆಗೆ ತಲಾ 11.5 ಲಕ್ಷ ಪ್ಯಾಕೇಜ್‍ನೊಂದಿಗೆ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಮಿಜಾರಿನಲ್ಲಿರುವ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕ್ಯಾಂಪಸ್ ಸಂದರ್ಶನ ನಡೆದಿತ್ತು. 


ಕೊನೆಯ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳಾದ ವಿನಯ್ ಪಿ ಹುಂಡೇಕರ್ (ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್), ಖುಷಿ ವಿಕೆ (ಕಂಪ್ಯೂಟರ್ ಸೈನ್ಸ್  ಇಂಜಿನಿಯರಿಂಗ್), ಶ್ವೇತಾ ಶರ್ಮಾ(ಇನ್ರ್ಫೋಮೇಷನ್ ಸೈನ್ಸ್ ಆ್ಯಂಡ್ ಇಂಜಿನಿಯರಿಂಗ್)ಜೇಮ್ಸ್ ಜೋಸೆಫ್ (ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್), ಶ್ವೇತಾ ಸಿ(ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್) ಉನ್ನತ ಪ್ಯಾಕೇಜ್ ಪಡೆದ ವಿದ್ಯಾರ್ಥಿಗಳಾಗಿದ್ದಾರೆ.


ವಿಶ್ವದ ಪ್ರಮುಖ ಹಣಕಾಸು ಮಾರುಕಟ್ಟೆಗಳ ಮೂಲಸೌಕರ್ಯ ಪೂರೈಕೆದಾರರಲ್ಲಿ ಒಂದಾಗಿರುವ ಲಂಡನ್ ಸ್ಟಾಕ್ ಎಕ್ಸಚೇಂಜ್ ಕಂಪೆನಿಯು, ಪ್ರಪಂಚದ 190 ದೇಶಗಳಲ್ಲಿ 40,000 ಕ್ಕೂ ಹೆಚ್ಚು ಗ್ರಾಹಕರಿಗೆ ಹಣಕಾಸಿನ ಡೇಟಾ, ವಿಶ್ಲೇಷಣೆಗಳು, ಸುದ್ದಿ ಮತ್ತು ಸೂಚ್ಯಂಕದ ಮಾಹಿತಿಯನ್ನು ನೀಡುತ್ತಿದೆ. 


ಆಳ್ವಾಸ್ ಶಿಕ್ಷಣ ಸಂಸ್ಥೆಗಳಲ್ಲಿ ಒಂದು ಶೈಕ್ಷಣಿಕ ವರ್ಷದಲ್ಲಿ ಸರಾಸರಿ 400ಕ್ಕೂ ಅಧಿಕ ಕಂಪೆನಿಗಳು ನೇಮಕಾತಿಗಾಗಿ  ಕ್ಯಾಂಪಸ್‍ಗೆ ಆಗಮಿಸುತ್ತವೆ.   ಇಲ್ಲಿ ವಿದ್ಯಾಭ್ಯಾಸ ಮಾಡುವ 90 ಶೇಕಡಾ ವಿದ್ಯಾರ್ಥಿಗಳು ಕ್ಯಾಂಪಸ್ ನೇಮಕಾತಿಯ ಮೂಲಕವೇ ಉದ್ಯೋಗ ಪಡೆಯುತ್ತಿರುವುದು ಹೆಮ್ಮೆಯ ವಿಶೇಷ.  ದೇಶದ ಉನ್ನತ ಕಂಪೆನಿಗಳಾದ  ಸ್ಯಾಪ್ ಲ್ಯಾಬ್ಸ್, ಇವೈ, ಕಾಗ್ನಿಝೆಂಟ್, ಅಮೇಜಾನ್, ಟಿಸಿಎಸ್, ಕೆಪಿಎಂಜಿ, ಟೊಯೋಟೊ ಕಿರ್ಲೋಸ್ಕರ್, ಎಕ್ಸೇಂಚರ್, ವಿಧುಮ್ ನೇರ ನೇಮಕಾತಿಗಾಗಿ ಸದಾ ಕ್ಯಾಂಪಸ್‍ಗೆ ಆಗಮಿಸುತ್ತವೆ. ವಿದ್ಯಾರ್ಥಿಗಳಿಗೆ ಕ್ಯಾಂಪಸ್ ನೇಮಕಾತಿಯ ಜೊತೆಗೆ,  ಪ್ರತಿ ವರ್ಷ ನಡೆಯುವ ಆಳ್ವಾಸ್ ಪ್ರಗತಿ-ಬೃಹತ್ ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳುವ  ಅವಕಾಶವೂ ಇರುತ್ತದೆ.   


ಕಳೆದ ಶೈಕ್ಷಣಿಕ ವರ್ಷದಲ್ಲಿ,  ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಾದ ತುಳಸಿ ಹಾಗೂ ಅನೂಜ್  ಪ್ರತಿಷ್ಟಿತ ಫಿನ್‍ಟೆಕ್ ಕಂಪೆನಿ -ಜಸ್ಪೇಗೆ 21 ಲಕ್ಷದ ಪ್ಯಾಕೇಜ್‍ಗೆ ಆಯ್ಕೆಯಾಗಿರುವುದು ಸಂಸ್ಥೆಯ ಗುಣಮಟ್ಟದ ಶಿಕ್ಷಣ ಹಾಗೂ ತರಬೇತಿಗೆ ಹಿಡಿದ ಕೈಗನ್ನಡಿ ಯಾಗಿದೆ.


 ವಿದ್ಯಾರ್ಥಿಗಳ ಸಾಧನೆಯನ್ನು ಸಂಸ್ಥೆಯ ಅಧ್ಯಕ್ಷ ಡಾ ಎಂ ಮೋಹನ್ ಆಳ್ವ, ಟ್ರಸ್ಟಿ ವಿವೇಕ್ ಆಳ್ವ ಅಭಿನಂದಿಸಿದ್ದಾರೆ.    


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top