ಆಳ್ವಾಸ್ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಕಾಲೇಜಿಗೆ ಶೇ 100 ಫಲಿತಾಂಶ

Upayuktha
0


ಮೂಡುಬಿದಿರೆ: ರಾಜೀವ್ ಗಾಂಧಿ ಅರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಆಗಸ್ಟ್‍ನಲ್ಲಿ ನಡೆಸಿದ ಅಂತಿಮ ಮತ್ತು ತೃತೀಯ ಬಿಎನ್‍ವೈಎಸ್ ವಾರ್ಷಿಕ ಪರೀಕ್ಷೆಯಲ್ಲಿ ಆಳ್ವಾಸ್ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಕಾಲೇಜು ಶೇ 100 ಫಲಿತಾಂಶ ಪಡೆದಿದೆ.


ಅಂತಿಮ ವರ್ಷದ 10 ಮತ್ತು ತೃತೀಯ ವರ್ಷದ 12 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.  


ಕಾಲೇಜಿನ ವಿದ್ಯಾರ್ಥಿಗಳಾದ ಶ್ವೇತಾ, ಪ್ರಿಯ, ಪ್ರತೀಕ್ಷಾ, ಆಕಾಶ್, ಅನ್ನಪೂರ್ಣ, ಚೇತನಾ ಪ್ರಭ, ಅಕ್ಷತಾ, ಶುಭಲಕ್ಷ್ಮೀ, ಪ್ರನಿಲ್ ಉತ್ತಮ ಅಂಕ ಗಳಿಸಿದ್ದು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ, ಟ್ರಸ್ಟಿ ವಿವೇಕ ಆಳ್ವ ಪ್ರಾಂಶುಪಾಲರು, ಬೋಧಕ ವೃಂದ ಅಭಿನಂದಿಸಿದ್ದಾರೆ. 


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
To Top