ಮಿಜಾರು: ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆಯ ವಿದ್ಯಾರ್ಥಿಗಳು ಮಂಡಿಸಿದ ‘ಇನ್‍ವೆಸ್ಟಿಗೇಷನ್ ಆನ್ ಎಫೆಕ್ಟ್ ಆಫ್ ಕಾಸ್ಟಿಂಗ್ ಮೌಲ್ಡ್ಸ್ ಆನ್ ಮೆಕ್ಯಾನಿಕಲ್ ಪ್ರಾಪರ್ಟಿಸ್ ಆಪ್ ಅಲುಮಿನಿಯಮ್ ಅಲಾಯ್ಸ್’ ಸಂಶೋಧನಾ ಪ್ರಾತ್ಯಕ್ಷಿಕೆಯು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ (ಕೆಎಸ್‍ಸಿಎಸ್‍ಟಿ)ಯ 46ನೇ ವಿದ್ಯಾರ್ಥಿ ಪ್ರಾಜೆಕ್ಟ್ ಕಾರ್ಯಕ್ರಮ (ಎಸ್‍ಪಿಪಿ)ದ ‘ಬೆಸ್ಟ್ ಪ್ರಾಜೆಕ್ಟ್ ಆಪ್ ದಿ ಇಯರ್ 2022-23’ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಕೆಎಸ್‍ಸಿಎಸ್‍ಟಿಯು ಆಳ್ವಾಸ್ ಸಹಯೋಗದಲ್ಲಿ ಮೂಡುಬಿದಿರೆಯಲ್ಲಿ 46ನೇ ವಿದ್ಯಾರ್ಥಿ ಪ್ರಾಜೆಕ್ಟ್ ಕಾರ್ಯಕ್ರಮ (ಎಸ್‍ಪಿಪಿ) ಇತ್ತೀಚೆಗೆ ಹಮ್ಮಿಕೊಂಡಿತ್ತು. ವಿದ್ಯಾರ್ಥಿಗಳಾದ ಅಜಯ್ ಕುಮಾರ್ ಜೆ., ಶ್ರೀಶೈಲ ಎಸ್ ಮತ್ತು ತೇಜಸ್ ಗೌಡ ಎಂ. ಸಂಶೋಧನೆಯನ್ನು ನಡೆಸಿದ್ದರು. ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ, ಪ್ರಾಧ್ಯಾಪಕ ಡಾ. ಸತ್ಯನಾರಾಯಣ ಮಾರ್ಗದರ್ಶನ ನೀಡಿದ್ದರು.
ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನ 8 ವಿನೂತನ ಆವಿಷ್ಕಾರದ ಸಂಶೋಧನೆಗಳು ಕೆಎಸ್‍ಸಿಎಸ್‍ಟಿಯ 2022-23ನೇ ಸಾಲಿನ ಧನಸಹಾಯಕ್ಕೆ ಆಯ್ಕೆಯಾಗಿದ್ದು, ಈ ಪೈಕಿ ನಾಲ್ಕು ಸ್ಪರ್ಧೆಯ ಅಂತಿಮ ಹಂತಕ್ಕೆ ಬಂದಿತ್ತು. ಸಂಸ್ಥೆಯ ಟ್ರಸ್ಟಿ ವಿವೇಕ್ ಆಳ್ವ, ಪ್ರಾಚಾರ್ಯ ಡಾ ಪೀಟರ್ ಫೆರ್ನಾಂಡೀಸ್ ವಿದ್ಯಾರ್ಥಿಗಳ ಸಾಧನೆಯನ್ನು ಶ್ಲಾಘಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ