ಮಂಗಳೂರು: ಸರ್ವ ಕಾಲೇಜು ವಿದ್ಯಾರ್ಥಿ ಸಂಘ ಮಂಗಳೂರು ಘಟಕದ ವತಿಯಿಂದ ಕಾವೇರಿ ನೀರಿಗಾಗಿ ನಗರದ ಮಿನಿ ವಿಧಾನಸೌಧದ ಮುಂಭಾಗ ಶನಿವಾರ ಪ್ರತಿಭಟನೆ ನಡೆಸಲಾಯಿತು. ವಿಶೇಷ ಅಧಿವೇಶನ ಕರೆದು ಸುಗ್ರೀವಾಜ್ಞೆಯ ಮೂಲಕ ನಿರ್ಣಯ ಮಾಡಿ ಸಮಸ್ಯೆ ಬಗೆಹರಿಸಬೇಕೆಂದು ಈ ಸಂದರ್ಭ ಸರ್ಕಾರಕ್ಕೆ ಮನವಿ ಮಾಡಲಾಯಿತು. ದಕ್ಷಿಣ ಕನ್ನಡ ಭಾಗದ ಜನರು ಕಾವೇರಿ ಹೋರಾಟಕ್ಕೆ ಬೆಂಬಲ ನೀಡಿದ್ದು ಮುಂದಿನ ದಿನದಲ್ಲಿ ತುಳು ಭಾಷೆಯನ್ನು ಎರಡನೇ ಭಾಷೆಯಾಗಿ ಘೋಷಿಸಲು ಎಲ್ಲ ಕನ್ನಡಪರ ಸಂಘಟನೆಗಳು ಮತ್ತು 224 ಶಾಸಕರು ಬೆಂಬಲ ನೀಡುವಂತೆ ಆಗ್ರಹಿಸಲಾಯಿತು.
ಪ್ರತಿಭಟನೆಯ ನೇತೃತ್ವವನ್ನು ಸಂಘದ ರಾಜ್ಯ ನಾಯಕರಾದ ತುಷಾರ್ ಕದ್ರಿ, ತನುಷ್ ಎಂ ಶೆಟ್ಟಿ, ಅಬೂಬಕ್ಕರ್ ಸಿದ್ದಿಕ್, ಸಾಜನ್ ಶೆಟ್ಟಿ ಮತ್ತು ಸರ್ವ ಕಾಲೇಜು ವಿದ್ಯಾರ್ಥಿ ಸಂಘ ಜಿಲ್ಲಾ ಅಧ್ಯಕ್ಷ ಸುಧಾಂಶು ರೈ, ಜಿಲ್ಲಾ ಮುಖಂಡರಾದ ನಿಖಿಲ್, ಸ್ವರೂಪ ಪೂಂಜ, ಅಂಕುಶ ಶರ್ಮ, ಪ್ರಣವ್, ಕುಶಾಲ್ ಪಾಟೀಲ, ವಿನಾಯಕ್, ತೇಜಸ್ ರಾವ್, ಸಿದ್ದಾಂತ ಶೆಟ್ಟಿ, ವೈಭವ್ ಆರ್ ಶೆಟ್ಟಿ, ಮೊಹಮದ್ ಜಸಿಂ, ವಿಶಾಲ್ ಕುಲಾಲ್, ಆದಿಶ್ ಕುಂಪಲ, ತೇಜಸ್ ಪೂಜಾರಿ, ಮೊದಲಾದವರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ