ಯಕ್ಷಗಾನ - ಭರತ ನೃತ್ಯ ಕಲಾವಿದೆ ಶ್ವೇತಾ ಅರೆಹೊಳೆ

Upayuktha
0

ರತನಾಟ್ಯ, ಯಕ್ಷಗಾನ ಕೇವಲ ಮನೋರಂಜನೆ ಆಯ್ಕೆಯಲ್ಲ. ಈ ಭಾರತೀಯ ಕಲೆಗೆ ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಪ್ರಶಸ್ತ ಸ್ಥಾನವಿದೆ. ಈ ನೃತ್ಯ ಕ್ಷೇತ್ರದಲ್ಲಿ ಚಿರಪರಿಚಿತ ಹಾಗೂ ಬಹುಮುಖ ಪ್ರತಿಭೆ, ಯಕ್ಷಗಾನ ಕಲಾವಿದೆ ಶ್ವೇತಾ ಅರೆಹೊಳೆ.


ಅರೆಹೊಳೆ ಪ್ರತಿಷ್ಠಾನದ ಅಧಕ್ಷ ಅರೆಹೊಳೆ ಸದಾಶಿವ ರಾವ್ ಹಾಗೂ ಗೀತಾ ಅರೆಹೊಳೆ ಇವರ ಮಗಳಾಗಿ 16.12.2000 ರಂದು ಕೇರಳದ ತ್ರಿಶೂರಿನಲ್ಲಿ ಜನನ. ಪತ್ರಿಕೋದ್ಯಮದಲ್ಲಿ ಪದವಿಯನ್ನು ಪಡೆದಿರುತ್ತಾರೆ.


6ನೇ ವಯಸ್ಸಿನಲ್ಲಿಯೇ ನೃತ್ಯಾಭ್ಯಾಸ ಆರಂಭಿಸಿ, ಪೂರ್ಣ ಪ್ರಮಾಣದ ನೃತ್ಯಾಭ್ಯಾಸವನ್ನು ಗುರುಗಳಾದ ಯು.ಕೆ ಪ್ರವೀಣ್ ಅವರಲ್ಲಿ ಪೂರೈಸಿದ್ದಾರೆ. ಭರತನಾಟ್ಯ ಜೂನಿಯರ್, ಸೀನಿಯರ್ ಮುಗಿಸಿದ್ದಾರೆ. ನೃತ್ಯದ ಜೊತೆಗೆ ಸಂಗೀತದಲ್ಲೂ ಆಸಕ್ತಿ ಹೊಂದಿರುವ ಶ್ವೇತಾ, ಉಷಾ ಪ್ರವೀಣ್ ಅವರಲ್ಲಿ ಸಂಗಿತ ಜೂನಿಯರ್ ಮುಗಿಸಿದ್ದಾರೆ, ಜೊತೆಗೆ ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ ಅವರಲ್ಲಿ ಭರತನಾಟ್ಯ ಪ್ರಿ ವಿದ್ವತ್ ಪೂರೈಸಿದ್ದಾರೆ.


ಕಲಗದ್ದೆ, ನಾಟ್ಯ ವಿನಾಯಕ ದೇವರ ಆಶೀರ್ವಾದ ಮತ್ತು ಇವರ ಹೆತ್ತವರ ಪ್ರೋತ್ಸಾಹದಿಂದ ಯಕ್ಷಗಾನ ರಂಗದಲ್ಲಿ ಕೂಡ ತಮ್ಮ ಪ್ರತಿಭೆಯನ್ನು ಯಕ್ಷಗುರು ಮಂಜುನಾಥ್ ಕುಲಾಲ್ ಐರೋಡಿ ಅವರ ಮಾರ್ಗದರ್ಶನದಲ್ಲಿ ಪ್ರದರ್ಶನ ನೀಡುತ್ತಿದ್ದಾರೆ.


ಅಭಿಮನ್ಯು ಕಾಳಗ, ಮಾರುತಿ ಪ್ರತಾಪ ಇವರ ನೆಚ್ಚಿನ ಪ್ರಸಂಗಗಳು. ಅಭಿಮನ್ಯು , ದಾಕ್ಷಾಯಣಿ ಮತ್ತು ಪುಂಡುವೇಷಗಳು ಇವರ ನೆಚ್ಚಿನ ವೇಷಗಳು.


ಭರತನಾಟ್ಯ ಕಲೆಯೆಡೆಗೆ ಆಕರ್ಷಿತರಾದದ್ದು ಹೇಗೆ:-

ಅಮ್ಮನ ಒತ್ತಾಯದ ಮೇರೆಗೆ ಬಾಲ್ಯದಿಂದ ಭರತನಾಟ್ಯ ತರಗತಿಗೆ ಹೋಗುತ್ತಿದ್ದೆ. ಹೇಗೋ ನೋಡುತ್ತಾ, ಕಲಿಯುತ್ತಾ, ವಿಪರೀತ ಆಸಕ್ತಿ ಹುಟ್ಟಿಕೊಂಡಿತು.


ನಿಮ್ಮ ಕಲಾಯಾನದಲ್ಲಿ ಸ್ಪೂರ್ತಿ ನೀಡಿದ ಕಲಾವಿದರು ಮತ್ತು ಪುಸ್ತಕಗಳು, ವ್ಯಕ್ತಿಗಳ ಕುರಿತು:-

ನಾನು ಎಲ್ಲರಿಂದಲೂ ಸ್ಫೂರ್ತಿ ಪಡೆಯುತ್ತೇನೆ. ಸಹಕಲಾವಿದರು, ಮತ್ತು ಭರತನಾಟ್ಯದ ದಿಗ್ಗಜರಾದ ರಮಾ ವೈದ್ಯನಾಥನ್, ಪಾಶ್ವನಾಥ್ ಉಪಾಧ್ಯೆ, ಆಯಣಾ ಡ್ಯಾನ್ಸ್ ಕಂಪೆನಿ, ವಿದ್ಯಾಶ್ರೀ ರಾಧಾಕೃಷ್ಣ ಇವರಿಂದ ಹೆಚ್ಚಿನ ಸ್ಫೂರ್ತಿ ಪಡೆಯುತ್ತೇನೆ.


ಕಾರ್ಯಕ್ರಮ ನೀಡುವಾಗ ಮಾಡಿಕೊಳ್ಳುವ ಅಧ್ಯಯನ, ಸಿದ್ಧತೆಗಳೇನು:-

ತಂಡವಾಗಿ ಕಾರ್ಯಕ್ರಮ ಕೊಡುವುದು ಜಾಸ್ತಿ. ಒಟ್ಟಾಗಿ ಅಭ್ಯಸಿಸುತ್ತೇವೆ.


ನೀವು ಭರತನಾಟ್ಯ ಶಿಕ್ಷಕರಾಗಿದ್ದೀರಾ? ಇದ್ದರೆ,  ಮಕ್ಕಳಲ್ಲಿ ಕಲಿಕಾಸಕ್ತಿ ಹೆಚ್ಚಿಸಲು ನೀವೇನು ಉಪಾಯ ಮಾಡುತ್ತೀರಿ?

ವ್ಯಾಯಾಮ, ಆಟ, ಇತ್ಯಾದಿ.


ನೃತ್ಯಾಭ್ಯಾಸಿಗಳಿಗೆ ನಿಮ್ಮ ಸಲಹೆ :-

ಶ್ರದ್ಧೆ, ಭಕ್ತಿಯಲ್ಲಿ ಅಭ್ಯಸಿಸಬೆಕು. ಅನುಭವಿಸಿ ನರ್ತಿಸಬೇಕು. ಮಾಡುವುದನ್ನು ಇಷ್ಟ ಪಡಬೇಕು.


ಭರತನಾಟ್ಯ ಕಲಾವಿದೆಯಾಗಿ  ಬೆಳೆದ ಬಗೆ ಹೇಗೆ?: ಇನ್ನೂ ಕಲಿಯುತ್ತಿದ್ದೇನೆ, ಬೆಳೆಯುತ್ತಿದ್ದೇನೆ.


ಯಕ್ಷಗಾನ ಇಂದಿನ ಸ್ಥಿತಿ ಗತಿ ಹಾಗೂ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ ಕೇಳಿದಾಗ ಹೀಗೆ ಹೇಳುತ್ತಾರೆ:-

ಬಹುತೇಕ ಪ್ರೇಕ್ಷಕರು ಇಡೀ ರಾತ್ರಿ ಆಟ ನೋಡುವ ಮನಸ್ಥಿತಿ ಇಲ್ಲದಿರುವುದರಿಂದ ಸಮಯ ಮಿತಿ ಪ್ರದರ್ಶನಗಳು ನಡೆಯುತ್ತಿದೆ ಹಾಗೂ ಇತ್ತೀಚೆಗೆ ಮಕ್ಕಳು, ಯುವ ಪ್ರೇಕ್ಷಕರು ಯಕ್ಷಗಾನದ ಕಡೆಗೆ ವಾಲುತ್ತಿರುವುದು ಯಕ್ಷಗಾನಕ್ಕೆ ಪೂರಕ ಬೆಳವಣಿಗೆ.


ಅನೇಕ ಯುವಕರು ಯಕ್ಷಗಾನಕ್ಕೆ ಮಾರುಹೋಗಿ, ಅಭಿಮಾನಿಗಳಾಗುತ್ತಿರುವುದು ಸಂತಸದ ವಿಷಯ. ಕೇವಲ‌ ಮನರಂಜನೆಗೆ ಇಟ್ಟುಕೊಳ್ಳದೇ, ಇಲ್ಲಿ ಸಿಗುವ ಅನೇಕ ವಿಚಾರಾನುಭವಗಳಿಂದ ಸ್ವಾಸ್ಥ್ಯ ಪ್ರಪಂಚದಲ್ಲಿ ಶಿಷ್ಟ ಕಲೆಯ ಮಹತ್ವ ಹೆಚ್ಚುವಂತೆ ಮಾಡಿದರೆ ಒಳ್ಳೆಯದು.


ಅರೆಹೊಳೆ ಪ್ರತಿಷ್ಠಾನದ ನಂದಗೋಕುಲ ಕಲಾ ತಂಡದ ನೇತೃತ್ವವಹಿಸಿಕೊಂಡು 200ಕ್ಕೂ ಹೆಚ್ಚು ನೃತ್ಯಗಳಿಗೆ ಸಂಯೋಜನೆ, ನಿರ್ದೇಶನ ಮಾಡಿದ್ದಾರೆ. ಶ್ವೇತಾ ಅವರು 450ಕ್ಕೂ ಅಧಿಕ ವೇದಿಕೆಗಳಲ್ಲಿ ನೃತ್ಯ ಪ್ರದರ್ಶನ ನೀಡಿರುತ್ತಾರೆ.


ಪ್ರಶಸ್ತಿ ಹಾಗೂ ಸನ್ಮಾನ:-

♦ ಪ್ರಜಾವಾಣಿ ಯುವ ಸಾಧಕಿ - 2022.

♦ ನಮ್ಮನೆ ಯುವ ಪುರಸ್ಕಾರ.

♦ ರಾಜ್ಯ ಚುಟುಕು ಸಾಹಿತ್ಯ ಪರಿಷತ್ತಿನ ನಾಟ್ಯ ಕಿಶೋರಿ ಪ್ರಶಸ್ತಿ.

♦ರಾಷ್ಟ್ರೀಯ ಮಟ್ಟದ ಭರತನಾಟ್ಯ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ.


ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

-ಶ್ರವಣ್ ಕಾರಂತ್ ಕೆ.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter  

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top