ಎಕೆಪಿಎ ಕುಂಬಳೆ ವಲಯದ ನೇತೃತ್ವದಲ್ಲಿ ರೋಗಿಗಳಿಗೆ ಹಣ್ಣುಹಂಪಲು ವಿತರಣೆ

Upayuktha
0

 ಆ.19 ವಿಶ್ವ ಛಾಯಾಗ್ರಾಹಕರ ದಿನಾಚರಣೆ



ಕುಂಬಳೆ: ವಿಶ್ವ ಛಾಯಾಗ್ರಾಹಕರ ದಿನಾಚರಣೆ ಅಂಗವಾಗಿ ಆಲ್ ಕೇರಳ ಫೋಟೋಗ್ರಾಫರ್ಸ್‌  ಅಸೋಸಿಯೇಶನ್ (ಎಕೆಪಿಎ) ಕುಂಬಳೆ ವಲಯದ ವತಿಯಿಂದ ಮಂಗಲ್ಪಾಡಿ ಸರಕಾರೀ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣುಹಂಪಲು ವಿತರಿಸಲಾಯಿತು.


ಜಿಲ್ಲಾ ಉಪಾಧ್ಯಕ್ಷ ವಿಜಯನ್ ಕೆ.ನಾಯರ್ ವಿತರಣೆಗೆ ಚಾಲನೆಯನ್ನು ನೀಡಿ ಮಾತನಾಡಿ ಛಾಯಾಗ್ರಹಣವೆಂಬ ಕಲೆಯನ್ನು ಒಲಿಸಿಕೊಂಡ ಅನೇಕರು ಈ ವೃತ್ತಿಯನ್ನು ನಿಷ್ಠೆಯಿಂದ ಮಾಡುತ್ತಿದ್ದಾರೆ. ಕಾಲಕಾಲಕ್ಕೆ ಬದಲಾವಣೆಯನ್ನು ಕಾಣುತ್ತಿರುವ ಈ ವಲಯದಲ್ಲಿ ವೃತ್ತಿನಿರತ ಛಾಯಾಗ್ರಾಹಕರು ಸಾಧನೆಯ ಮೂಲಕ ಗಮನಸೆಳೆಯುತ್ತಿದ್ದಾರೆ. ಅದರಂತೆ ಸಾಮಾಜಿಕ ಕಳಕಳಿಯಿಂದ ಅನೇಕ ಸಮಾಜಸೇವೆಯ ಮೂಲಕವೂ ಛಾಯಾಗ್ರಾಹಕರು ಸಂಘಟನೆಯ ಮೂಲಕ ಒಂದಾಗುತ್ತಿರುವುದು ಸಂತಸದ ವಿಚಾರವಾಗಿದೆ ಎಂದರು.


ಕುಂಬಳೆ ವಲಯ ಅಧ್ಯಕ್ಷ ಸುರೇಶ್ ಆಚಾರ್ಯ ಪೈವಳಿಕೆ, ಕಾರ್ಯದರ್ಶಿ ನಿತ್ಯಪ್ರಸಾದ್ ಕುಂಬಳೆ, ಕೋಶಾಧಿಕಾರಿ ವೇಣುಗೋಪಾಲ ನೀರ್ಚಾಲು, ಉಪ್ಪಳ ಯೂನಿಟ್ ಅಧ್ಯಕ್ಷ ಮಿಥುನ್, ಕಾರ್ಯದರ್ಶಿ ಸಂದೇಶ್, ಕುಂಬಳೆ ಯೂನಿಟ್ ಅಧ್ಯಕ್ಷ ನವೀನ್, ಕಾರ್ಯದರ್ಶಿ ಪ್ರಮೋದ್, ಕುಂಬಳೆ, ಉಪ್ಪಳ, ಬದಿಯಡ್ಕ ಯೂನಿಟ್ ಸದಸ್ಯರು, ಪದಾಧಿಕಾರಿಗಳು ಭಾಗವಹಿಸಿ ರೋಗಿಗಳೊಂದಿಗೆ ಕುಶಲೋಪರಿಯಾಗಿ ಮಾತನಾಡಿದರು. ಸರಕಾರಿ ವೈದ್ಯಾಧಿಕಾರಿ ಡಾ| ಶಾಂತಿ, ಸಿಬ್ಬಂದಿಗಳು ಉಪಸ್ಥಿತರಿದ್ದು ಹಣ್ಣುಹಂಪಲು ವಿತರಣೆಗೆ ಮಾಹಿತಿಯನ್ನು ನೀಡಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter   

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top