ನಾವು ಜಾಗೃತರಾದರೆ, ವಿಶ್ವದ ಯಾವುದೇ ಶಕ್ತಿ ಹಿಂದೂ ಸಂಪ್ರದಾಯಗಳೊಂದಿಗೆ ಆಟವಾಡಲು ಸಾಧ್ಯವಿಲ್ಲ: ಡಾ. ಅವಧೇಶಪುರಿ

Upayuktha
0

ಹಿಂದೂ ಯಾತ್ರೆಗಳಲ್ಲಿ ಮಾತ್ರ ಪಶುಪ್ರೇಮ, ಈದ್ ಸಮಯದಲ್ಲಿ ಏಕಿಲ್ಲ? - ವಿಶೇಷ ಸಂವಾದ


ಉಜ್ಜೈನಿ (ಮಧ್ಯಪ್ರದೇಶ): ಉಜ್ಜೈನಿನಲ್ಲಿ ಭಗವಾನ್ ಶ್ರೀ ಮಹಾಕಾಲನ ಶೋಭಾಯಾತ್ರೆಯಲ್ಲಿರುವ ಆನೆಯ ಬಗ್ಗೆ ‘ಪೀಪಲ್ ಫಾರ್ ಅನಿಮಲ್ಸ್’ (ಪಿಎಫ್‌ಎ) ಕಾರ್ಯದರ್ಶಿ ಪ್ರಿಯಾಂಶು ಜೈನ್ ಆಕ್ಷೇಪಿಸಿದ್ದಾರೆ. ಬಕ್ರಿ ಈದ್ ಸಮಯದಲ್ಲಿ ಲಕ್ಷಾಂತರ ಮೇಕೆಗಳನ್ನು ಹತ್ಯೆ ಮಾಡಲಾಗುತ್ತದೆ. ಪ್ರತಿನಿತ್ಯ ಸಾವಿರಾರು ಗೋವುಗಳನ್ನು ಹತ್ಯೆ ಮಾಡಲಾಗುತ್ತದೆ. ಜೈನ ಸಮಾಜದ ಮೆರವಣಿಗೆಗಳಲ್ಲಿ ‘ಇಂದ್ರ-ಇಂದ್ರಾಣಿ’ ಪಾತ್ರದಲ್ಲಿ ಕುದುರೆಗಳು ಮತ್ತು ಆನೆಗಳ ಮೇಲೆ ಸವಾರಿ ಮಾಡಲಾಗುತ್ತದೆ. ಆಗ ಅದನ್ನು ವಿರೋಧಿಸಲು ಸಾಧ್ಯವಿಲ್ಲ. ಭಗವಾನ್ ಶ್ರೀ ಮಹಾಕಾಲನ ಶೋಭಾಯಾತ್ರೆಯಲ್ಲಿ ಆನೆಯ ಮೇಲೆ ಸವಾರಿ ಮಾಡುವ ಸಂಪ್ರದಾಯಕ್ಕೆ ಯಾವುದೇ ರಾಜಿ ಇಲ್ಲ ಮತ್ತು ಮುಂದೆಯೂ ಸಂಪ್ರದಾಯದಂತೆ ಶೋಭಾಯಾತ್ರೆ ನಡೆಸಲಾಗುವುದು. ಹಿಂದೂಗಳು ಜಾಗೃತಗೊಂಡರೆ ಜಗತ್ತಿನ ಯಾವ ಶಕ್ತಿಯೂ ಹಿಂದೂಗಳ ಸಂಪ್ರದಾಯದ ಜೊತೆ ಚೆಲ್ಲಾಟವಾಡಲಾರರು ಎಂದು ಉಜ್ಜೈನಿಯ ಸ್ವಸ್ತಿಕ ಪೀಠದ ಪೀಠಾಧೀಶ್ವರ ಪರಮಹಂಸ ಡಾ. ಅವಧೇಶಪುರಿ ಮಹಾರಾಜರು ಪ್ರತಿಪಾದಿಸಿದರು.


ಅವರು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ನಡೆದ ‘ಹಿಂದೂ ಯಾತ್ರೆಗಳಲ್ಲಿ ಮಾತ್ರ ಪಶುಪ್ರೇಮ, ಈದ್ ಸಮಯದಲ್ಲಿ ಏಕಿಲ್ಲ ?’ ಈ ಕುರಿತ ವಿಶೇಷ ಸಂವಾದದಲ್ಲಿ ಮಾತನಾಡುತ್ತಿದ್ದರು.


ಈ ಸಮಯದಲ್ಲಿ ಅವರು ಹಿಂದೂಗಳ ಸಹಿಷ್ಣುತೆ ಮತ್ತು ಔದಾರ್ಯವನ್ನು ಯಾರಾದರೂ ದುರುಪಯೋಗಪಡಿಸಿಕೊಂಡರೆ ಅದನ್ನು ಸಹಿಸುವುದಿಲ್ಲ. ಹಿಂದೂ ಧರ್ಮ, ಸಂಸ್ಕೃತಿ, ಸಂಪ್ರದಾಯದ ಬಗ್ಗೆ ಯಾರಾದರೂ ಆಕ್ಷೇಪ ವ್ಯಕ್ತಪಡಿಸಿದರೆ ಅವರನ್ನು ಹಿಂದೂಗಳು ಒಗ್ಗಟ್ಟಿನಿಂದ ವಿರೋಧಿಸಿ ಹಿಂದೂ ಸಂಸ್ಕೃತಿ, ಸಂಪ್ರದಾಯ, ಧರ್ಮ ರಕ್ಷಣೆಗೆ ಮುಂದಾಗಬೇಕು ಎಂದರು.


ಈ ಸಮಯದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ನಾಗೇಶ ಜೋಶಿ ಮಾತನಾಡಿ, ಹಿಂದೂ ಧರ್ಮದಲ್ಲಿ ಮಾತ್ರ ಹಬ್ಬ, ಹರಿದಿನಗಳಲ್ಲಿ ಪ್ರಾಣಿಗಳನ್ನು ಪೂಜಿಸಲಾಗುತ್ತಿದ್ದು, ಇತರ ಧರ್ಮಗಳ ಹಬ್ಬ-ಹರಿದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ರಾಣಿಗಳನ್ನು ಕೊಲ್ಲಲಾಗುತ್ತದೆ. ಹಿಂದೂ ಹಬ್ಬಗಳಲ್ಲಿ ಮನುಷ್ಯ ಮತ್ತು ಪ್ರಾಣಿಗಳಲ್ಲಿ ಸಮನ್ವಯ ಸಾಧಿಸಲಾಗುತ್ತದೆ ಮತ್ತು ಪರಸ್ಪರರಲ್ಲಿ ಪ್ರೀತಿ ನಿರ್ಮಾಣ ಮಾಡಲಾಗುತ್ತದೆ; ಆದರೆ ಇದಕ್ಕೂ ಆಕ್ಷೇಪ ವ್ಯಕ್ತವಾಗುತ್ತಿದೆ. ಹಿಂದೂ ಧರ್ಮದಲ್ಲಿ ಹಬ್ಬಗಳಲ್ಲಿ ಪ್ರಾಣಿಗಳನ್ನು ಕ್ರೂರವಾಗಿ ನಡೆಸಿಕೊಳ್ಳಲಾಗುತ್ತದೆ ಎಂಬ ಸುಳ್ಳು ಚಿತ್ರಣವನ್ನು ನಿರ್ಮಾಣ ಮಾಡಲಾಗುತ್ತದೆ. ಹಿಂದೂಗಳ ಆಚಾರ-ವಿಚಾರ, ಸಂಪ್ರದಾಯಗಳನ್ನು ಗುರಿಯಾಗಿಸಿಕೊಂಡಿದ್ದಾರೆ. ಪೇಟಾ (PETA), ಪಿ.ಎಫ್.ಎ(PFA) ಈ ಸಂಸ್ಥೆಗಳು ಕೇವಲ ನಾಯಿಗಳು, ಬೆಕ್ಕುಗಳು, ಕುದುರೆಗಳ ರಕ್ಷಣೆಗಾಗಿ ಕೆಲಸ ಮಾಡುತ್ತವೆ; ಆದರೆ ಪ್ರತಿದಿನ ಗೋವುಗಳನ್ನು ಕೊಲ್ಲುವುದರ ಬಗ್ಗೆ ಈ ಸಂಘಟನೆಗಳು ಚಕಾರ ಎತ್ತುವುದಿಲ್ಲ. ಆಗ ಗೋರಕ್ಷಕರು ಮಾತ್ರ ಧಾವಿಸಿ ಬರುತ್ತಾರೆ. ಇವರ ಪ್ರಾಣಿ ಎಂಬ ವ್ಯಾಖ್ಯಾನಕ್ಕೆ ಗೋವು ಹೊಂದುವುದಿಲ್ಲವೇ? ಹಿಂದೂ ಧರ್ಮದಲ್ಲಿ ಪೂಜನೀಯವಾಗಿರುವ ಪ್ರಾಣಿಗೆ ಅವರು ಏನೂ ಮಾಡುವುದಿಲ್ಲ, ಇದು ಅವರ ಷಡ್ಯಂತ್ರದ ಮೂಲಕ ಸ್ಪಷ್ಟವಾಗುತ್ತದೆ ಎಂದರು.


ಕೊನೆಯಲ್ಲಿ ಹೇಗೆ ಸರಕಾರವು ಹಳೆಯ ದಂಡ ಸಂಹಿತೆಯನ್ನು ತೆಗೆದುಹಾಕಿ ಭಾರತೀಯ ನ್ಯಾಯಾಂಗ ಸಂಹಿತೆಯನ್ನು ಜಾರಿಗೆ ತಂದಿದೆಯೋ, ಅದೇ ರೀತಿ ಪಾಶ್ಚಾತ್ಯ ಸಿದ್ಧಾಂತದಿಂದ ಪ್ರೇರಿತವಾದ ಪ್ರಾಣಿಗಳ ಕುರಿತಾದ 1960 ರಿಂದ ಜಾರಿಯಲ್ಲಿರುವ ಹಳೆಯ ಕಾನೂನುಗಳನ್ನು ರದ್ದುಪಡಿಸಬೇಕು ಮತ್ತು ಭಾರತೀಯ ಸಂಸ್ಕೃತಿಯ ಸಿದ್ಧಾಂತದಿಂದ ಪ್ರೇರಿತವಾದ ನೂತನ ಕಾನೂನನ್ನು ಜಾರಿಗೆ ತರಬೇಕು ಎಂದು ಜೋಶಿಯವರು ಹೇಳಿದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter   

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top