ಹೈಕೋರ್ಟ್ ಮೆಟ್ಟಿಲೇರಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿಯೋಜನೆ ಹಾಗೂ ಹೆಗ್ಗಡೆ ಕುಟುಂಬಸ್ಥರು

Upayuktha
0

 


ಉಜಿರೆ: 2012 ನೇ ಇಸವಿಯಲ್ಲಿ ನಡೆದ ಕು.ಸೌಜನ್ಯ ಅಸಹಜ ಸಾವಿನ ನಂತರ ಹಾಗೂ ಸಿ.ಬಿ.ಐ. (CBI) ನ್ಯಾಯಾಲಯದ ತೀರ್ಪಿನ ನಂತರದ ದಿನಗಳಲ್ಲಿ ಡಾ. ಡಿ ವೀರೇಂದ್ರ ಹೆಗ್ಗಡೆಯವರನ್ನು ಹಾಗೂ ಅವರ ಕುಟುಂಬದವರನ್ನು ಅವಮಾನಿಸುತ್ತಿದ್ದು  ಸ್ಥಾಪಿತ ಹಿತಾಸಕ್ತಿಗಳು ಹಾಗೂ ಅವಹೇಳನ ಮಾಡುತ್ತಿರುವ ವಿಚಾರದ ಕುರಿತಾಗಿ ರಾಜ್ಯ ಸರಕಾರಕ್ಕೆ ಸೌಜನ್ಯ ಸಾವಿಗೆ ನ್ಯಾಯಒದಗಿಸುವ ನಿಟ್ಟಿನಲ್ಲಿ ಯಾವುದಾದರೂ ತನಿಖೆ ನಡೆಸುವಂತೆ ಶ್ರೀ ಕ್ಷೇತ್ರಗ್ರಾಮಾಭಿವೃದ್ದಿ ಯೋಜನೆಯು ಮತ್ತು ಹೆಗ್ಗಡೆ ಕುಟುಂಬಸ್ಥರು ಕರ್ನಾಟಕದ ಉಚ್ಚ ನ್ಯಾಯಾಲಯದ ಮೊರೆ ಹೋಗಿದ್ದು, ಈ ಬಗ್ಗೆ ಯಾವುದೇ ರೀತಿಯ ತನಿಖೆಗೆ ಆದೇಶಿಸುವಂತೆ ಪ್ರಾರ್ಥಿಸಿದ್ದು, ನ್ಯಾಯಾಲಯದ ಆದೇಶಗಳನ್ನು ತಿರುಚಿ, ಸತ್ಯದ ವಿಚಾರವನ್ನು ಮರೆಮಾಚುತ್ತಿರುವ, ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸುತ್ತಿರುವ ಹಾಗೂ ನ್ಯಾಯಾಲಯ ಮತ್ತು ನ್ಯಾಯಾಧೀಶರನ್ನು ನಿಂದನೆ ಮಾಡುತ್ತಿರುವ ಮಹೇಶ ಶೆಟ್ಟಿತಿಮರೋಡಿಯವರ  ವಿರುದ್ಧ ಸಹಾ ಕಾನೂನು ಕ್ರಮ ಕೈಗೊಳ್ಳುವಂತೆ ರಿಟ್ ಅರ್ಜಿಯನ್ನು ದಾಖಲಾಗಿದ್ದು ನ್ಯಾಯಾಲಯದ ಮುಂದೆ ವಿಚಾರಣೆಗೆ ಬರಲಿದೆ. ಸದರಿ ಪ್ರಕರಣದಲ್ಲಿ ಸರಕಾರದ ಗೃಹ ಸಚಿವರು ಈ ಪ್ರಕರಣವನ್ನು ಈಗಾಗಲೇ ಮುಗಿದು ಹೋದ ಅಧ್ಯಾಯ ಎಂದು ಹೇಳಿಕೆ ಕೊಟ್ಟಿರುವುದು ಗಮನಾರ್ಹ.


  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top