ಮಂಗಳೂರು: ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ (ರಿ) ಕೇಂದ್ರ ಸಮಿತಿ ಹುಬ್ಬಳ್ಳಿ ಜಿಲ್ಲಾ ಘಟಕ ಉಡುಪಿ ಮಂಗಳೂರು ಹಾಗೂ ಪರ್ಯಾಯ ಶ್ರೀಕೃಷ್ಣ ಮಠ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಪುಸ್ತಕ ದಾನ ಹಾಗೂ ಜಿಲ್ಲಾ ಸಮ್ಮೇಳನ ಸಂಭ್ರಮ ಉಡುಪಿ ರಾಜಾಂಗಣದಲ್ಲಿ ಆಗಸ್ಟ್ 13ರಂದು ನಡೆಯಲಿದ್ದು ಪರ್ಯಾಯ ಶ್ರೀ ಕೃಷ್ಣಾಪುರ ಮಠ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ಹಿರಿಯ ಕವಿ ಗೋಪಾಲಭಟ್ಟರು ಉದ್ಘಾಟಿಸಲಿದ್ದಾರೆ.
ಮಕ್ಕಳ ಸಾಹಿತಿ-ಚಿಂತಕ ಪ್ರೊ.ಜಿ.ಯು. ನಾಯಕರು ಸರ್ವಾಧ್ಯಕ್ಷತೆ ವಹಿಸಲಿದ್ದು, ಕ.ಚು.ಸಾ..ಪ ಹುಬ್ಬಳ್ಳಿ ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ, ಪರಿಷತ್ತಿನ ಪ್ರಸಾರಾಂಗ ನಿರ್ದೇಶಕ ಚನ್ನಬಸಪ್ಪ ಧಾರವಾಡ ಶೆಟ್ರು,
ಕ.ಚು.ಸಾ.ಪ ಘಟಕ ಉಡುಪಿ ಉಪಾಧ್ಯಕ್ಷ ಶ್ರೀರಾಜು ಎನ್ ಆಚಾರ್ಯ ಗೌರವ ಉಪಸ್ಥಿತಿಯಲ್ಲಿರುವರು. ಪ್ರೊ ಗಣಪತಿ ಭಟ್ಟರು ವರ್ಗಾಸರ ವೈಚಾರಿಕ ಚಿಂತಕರು ಶಿರಸಿ ಇವರ ಅಧ್ಯಕ್ಷತೆಯಲ್ಲಿ ಆಧ್ಯಾತ್ಮಿಕ ಚಿಂತನ ಗೋಷ್ಠಿ ನಡೆಯಲಿದೆ. ಹಿರಿಯ ಸಾಹಿತಿಗಳು ಜಯಾನಂದ ಪೆರಾಜೆ ವಿಷಯ ಮಂಡಿಸಲಿರುವರು.
ಕಾರ್ಯಕ್ರಮದ ಆರಂಭದಲ್ಲಿ ಡಾ. ವಾಣಿಶ್ರೀ ಕಾಸರಗೋಡು ನೇತೃತ್ವದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘದಿಂದ ಸಾಹಿತ್ಯ ಗಾನ ನೃತ್ಯ ವೈಭವ ನಡೆಯಲಿದೆ. ಕ.ಚು.ಸಾ.ಪ ಕರಾವಳಿ ಕರ್ನಾಟಕ ವಿಭಾಗೀಯ ಘಟಕದ ಅಧ್ಯಕ್ಷ ರವೀಂದ್ರ ಶೆಟ್ಟಿ ಬಳಂಜ ಇವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಲಿದೆ.
ಪರಿಷತ್ತಿನ ಹಾವೇರಿ ಅಧ್ಯಕ್ಷ ಡಾ.ಗಂಗಯ್ಯ ಕುಲಕರ್ಣಿ ಮುಖ್ಯ ಅತಿಥಿಗಳಾಗಿರುವರು.
ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಪರ್ಯಾಯ ಶ್ರೀ ಕೃಷ್ಣಾಪುರ ಮಠದ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ಪ್ರೊ. ಜಿ.ಯು. ನಾಯಕರ ಸರ್ವಾಧ್ಯಕ್ಷತೆಯಲ್ಲಿ ಕ.ಸಾ.ಪ. ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಹಿರಿಯ ಚಿಂತಕ ವಿಶ್ವನಾಥ ಶೆಟ್ಟಿ ಮುಖ್ಯ ಅತಿಥಿಗಳಾಗಿರುವರು.
ಕಾರ್ಯಕ್ರಮದಲ್ಲಿ ಶಿಕ್ಷಕಿ ಹಾಗೂ ಕ.ಚು.ಸಾ.ಪ ದ.ಕ ಸದಸ್ಯೆ ಶ್ರೀಮತಿ ಶಾಂತಾ ಪುತ್ತೂರು ಇವರಿಗೆ ಚುಟುಕು ಚೇತನ ಪ್ರಶಸ್ತಿ ನೀಡಿ ಗೌರವಿಸಲಾಗುವುದೆಂದು ಪರಿಷತ್ತಿನ ರಾಜ್ಯ ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ