ಉಡುಪಿ: ಅಧಿಕ ಶ್ರಾವಣ ಮಾಸದಂಗವಾಗಿ ಉಡುಪಿಯ ಕರಂಬಳ್ಳಿ ಶ್ರೀ ವೇಂಕಟರಮಣ ದೇವಸ್ಥಾನದಲ್ಲಿ ಲೋಕಕ್ಷೇಮಕ್ಕಾಗಿ ಒಂದು ತಿಂಗಳ ಪರ್ಯಂತ ಹಮ್ಮಿಕೊಂಡಿದ್ದ ಶ್ರೀರಾಮ ಮಂತ್ರ ಜಪ ಸಹಿತ ಲಕ್ಷಪ್ರದಕ್ಷಿಣ ನಮಸ್ಕಾರ ಸೇವೆ ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಳ್ಳುತ್ತಿದೆ.
ಸೋಮವಾರದಂದು ಮುಂಜಾನೆ ಶ್ರೀ ಪಾಡಿಗಾರು ವಾಸುದೇವ ತಂತ್ರಿಗಳ ನೇತೃತ್ವ ಮತ್ತು ಆಡಳಿತ ಮೊಕ್ತೇಸರ ಕೆ ರಘುಪತಿ ಭಟ್ಟರ ಯಜಮಾನಿಕೆಯಲ್ಲಿ ಈ ಸತ್ಕರ್ಮದ ಮಂಗಲಾಚರಣೆ ಮತ್ತು ಭಗವದರ್ಪಣ ಕಾರ್ಯಕ್ರಮಗಳು ನಡೆಯಲಿವೆ. ಶ್ರೀ ರಾಮತಾರಕ ಯಜ್ಞ, ಶ್ರೀ ದೇವರಿಗೆ ವಿಶೇಷ ಅಭಿಷೇಕ ಸಹಿತ ವಿಶೇಷ ಪೂಜೆ ಹಾಗೂ ಪ್ರಸಾದ ವಿತರಣೆಗಳು ನಡೆಯಲಿವೆ.
ಒಂದು ತಿಂಗಳ ಕಾಲ ನಡೆದ ಲಕ್ಷ ಪ್ರದಕ್ಷಿಣ ನಮಸ್ಕಾರ ಸೇವೆಯಲ್ಲಿ ಊರ ಪರವೂರ ನೂರಾರು ಭಕ್ತರು ಪಾಲ್ಗೊಂಡು ಲಕ್ಷಕ್ಕೂ ಮೀರಿದ ಸಂಖ್ಯೆಯಲ್ಲಿ ರಾಮ ಮಂತ್ರ ಸಹಿತ ಪ್ರದಕ್ಷಿಣ ನಮಸ್ಕಾರ ಸೇವೆ ಸಲ್ಲಿಸಿದ್ದಾರೆ. ಲಕ್ಷಲಕ್ಷ ಸಂಖ್ಯೆಯಲ್ಲಿ ರಾಮಮಂತ್ರ ಜಪವೂ ನಡೆದಿರುವುದು ಅತ್ಯಂತ ಸಂತಸ ತಂದಿದ್ದು ಭಾಗವಹಿಸಿದ ಎಲ್ಲ ಭಕ್ತರಿಗೂ ಶ್ರೀರಾಮ, ಶ್ರೀ ವೇಂಕಟರಮಣ ದೇವರು ಶ್ರೇಯಸ್ಸನ್ನು ಕರುಣಿಸಲಿ; ಈ ಸತ್ಕಾರ್ಯದ ಫಲವಾಗಿ ಲೋಕದಲ್ಲಿ ಶಾಂತಿ ಸುಭಿಕ್ಷೆ ಸಮೃದ್ಧಿಗಳು ನೆಲೆಯಾಗಲಿ ಎಂದು ಪ್ರಾರ್ಥಿಸುವುದಾಗಿ ರಘುಪತಿ ಭಟ್ಟರು ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ







