ಉಡುಪಿ: ಪುರುಷೋತ್ತಮ ಮಾಸವೆಂದೇ ಕರೆಯಲ್ಪಡುವ ಅಧಿಕ ಶ್ರಾವಣ ಮಾಸದ ಅಂಗವಾಗಿ ಉಡುಪಿ ಕರಂಬಳ್ಳಿ ಶ್ರೀ ವೇಂಕಟರಮಣ ದೇವಸ್ಥಾನದಲ್ಲಿ ಸ್ಥಳೀಯ ವೇಂಕಟರಮಣ ಮಹಿಳಾ ಭಜನಾ ಮಂಡಳಿಯ ಸದಸ್ಯೆಯರಿಂದ ಭಾನುವಾರ 33 ಹರಿದಾಸಕೀರ್ತನೆಗಳ ಸಾಮೂಹಿಕ ಗಾಯನ ನಡೆಯಿತು.
ಅಧಿಕ ಮಾಸದಲ್ಲಿ ಶ್ರೀ ವಿಷ್ಣುವಿನ 33 ವಿವಿಧ ರೂಪಗಳನ್ನು ಸ್ಮರಿಸಿಕೊಂಡು ವಿಶೇಷ ಸೇವೆಗಳನ್ನು ನಡೆಸಲಾಗುತ್ತದೆ. ಈ ಬಾರಿ ಅಧಿಕ ಶ್ರಾವಣ ಮಾಸವಿದ್ದು ಆಗಸ್ಟ್ 16 ರಂದು ಸಮಾಪ್ತಿಯಾಗಲಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ