ಫುಡ್ ಟೆಕ್ನಾಲಜಿ ಅಧ್ಯಯನ ಉತ್ತಮ ಆಯ್ಕೆ: ಡಾ. ಸಿದ್ದರಾಜು ಎಂ.ಎನ್‌

Upayuktha
0

ಉಡುಪಿ: ಉಡುಪಿ ಗ್ರೂಪ್ ಆಫ್ ಪ್ರೊಫೆಷನಲ್ ಕಾಲೇಜು, ಮಣಿಪಾಲ ಇಲ್ಲಿಯ ಆಹಾರ ತಂತ್ರಜ್ಞಾನ ವಿಭಾಗದ ವತಿಯಿಂದ ಇತ್ತೀಚೆಗೆ ಆಯೋಜಿಸಲಾಗಿದ್ದ ಎನ್‌.ಇ.ಪಿ ಪ್ರಾಯೋಗಿಕ ಪಠ್ಯಕ್ರಮದ ಒಂದು ದಿನದ ಕಾರ್ಯಾಗಾರವನ್ನು ಫುಡ್ ಟೆಕ್ನಾಲಜಿ ಅಧ್ಯಯನ ಮಂಡಳಿಯ ಸದಸ್ಯ, ವಿವಿ ಕಾಲೇಜು ಮಂಗಳೂರು ಇಲ್ಲಿನ ಸಸ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಸಿದ್ದರಾಜು ಎಂ.ಎನ್‌ ಉದ್ಘಾಟಿಸಿದರು.


ಅವರು ಪ್ರಸ್ತುತ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳಿಗೆ ಎನ್ಇಪಿ ಶಿಕ್ಷಣ ವ್ಯವಸ್ಥೆಯಲ್ಲಿ ವೃತ್ತಿಪರ ಕೋರ್ಸ್ ಗಳ ಅಧ್ಯಯನ ಹಾಗು ಫುಡ್ ಟೆಕ್ನಾಲಜಿ ಪಠ್ಯಕ್ರಮದಲ್ಲಿಯ ಬದಲಾವಣೆಗಳ ಕುರಿತು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಉಪ ಪ್ರಾಂಶುಪಾಲ ಶರತ್ ಆಳ್ವ, ಆಹಾರ ತಂತ್ರಜ್ಞಾನ ಅಧ್ಯಯನದ ಮಹತ್ವ ಮತ್ತು ಮುಂದಿನ ದಿನಗಳಲ್ಲಿ ದೊರಕುವ ಅವಕಾಶಗಳ ಕುರಿತು ಮಾತನಾಡಿದರು.


ಕಾರ್ಯಾಗಾರದ ಸಂಯೋಜಕಿ ಹಾಗೂ ಫುಡ್ ಟೆಕ್ನಾಲಜಿ ವಿಭಾಗದ ಮುಖ್ಯಸ್ಥೆ ಶಿಲ್ಪಾ ಕೆ, ಹೊಸ ಪಠ್ಯಕ್ರಮದ ವಿವಿಧ ವಿಷಯಗಳನ್ನು ಪ್ರಸ್ತಾಪಿಸಿ ವಿವಿಧ ಕಾಲೇಜುಗಳಿಂದ ಆಗಮಿಸಿದ್ದ ಅಧ್ಯಾಪಕರ ಅಭಿಪ್ರಾಯಗಳನ್ನು ದಾಖಲಿಸಿಕೊಂಡರು.ಉಡುಪಿ ಪ್ರೊಫೆಷಿನಲ್ ಕಾಲೇಜಿನ ಸೌಮ್ಯರವರ ಸ್ವಾಗತದೊಂದಿಗೆ ಪ್ರಾರಂಭವಾದ ಕಾರ್ಯಕ್ರಮ ನವ್ಯಾ ರವರ ವಂದನಾರ್ಪಣೆಯೊಂದಿಗೆ ಮುಕ್ತಾಯವಾಯಿತು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top