ಉಡುಪಿ: ಬೃಹತ್ ರಕ್ತದಾನ ಶಿಬಿರ

Upayuktha
0


ಉಡುಪಿ:
  ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಉಡುಪಿ ಜಿಲ್ಲಾ ಶಾಖೆ, ಸೈಂಟ್ ಮೆರೀಸ್ ಇಂಗ್ಲೀಷ್ ಮಿಡಿಯಂ ಸ್ಕೂಲ್, ಲಯನ್ಸ್ ಕ್ಲಬ್ ಉಡುಪಿ ಮಿಡ್‍ಟೌನ್, ಲಯನ್ಸ್ ಕ್ಲಬ್ ಉಡುಪಿ ಪ್ರಕೃತಿ, ವಿಜಯ ಬ್ಯಾಂಕ್ ನಿವೃತ್ತ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ಉಡುಪಿ ಹಾಗೂ ಕಸ್ತೂರ್ಬಾ ಆಸ್ಪತ್ರೆ ರಕ್ತನಿಧಿ ಕೇಂದ್ರ ಮಣಿಪಾಲದ ಸಹಯೋಗದೊಂದಿಗೆ 40ನೇ ವರ್ಷದ ಮಾಣಿಕ್ಯ ವಾರ್ಷಿಕೋತ್ಸವದ ಸಲುವಾಗಿ ಆಗಸ್ಟ್ 13 ರಂದು  ಉಡುಪಿಯ ಸೈಂಟ್ ಮೆರೀಸ್ ಇಂಗ್ಲೀಷ್ ಮಿಡಿಯಂ ಸ್ಕೂಲ್‍ನ ಆವೆ ಮರಿಂಯ ಹಾಲ್‍ನ ಮದರ್ ಆಫ್ ಸೋರೋಸ್ ಚರ್ಚ್‍ನಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಯಿತು.


ಶಿಬಿರದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಉಡುಪಿ ಜಿಲ್ಲಾ ಶಾಖೆಯ ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿಯವರು ವಿನೂತನ ಶೈಲಿಯ ರಕ್ತದಾನದ ಅಣುಕು ಪ್ರತಿಯನ್ನು ಉದ್ಘಾಟಿಸಿ, ಭಾರತದಲ್ಲಿ 139ಕೋಟಿ ಜನಸಂಖ್ಯೆ ಇದ್ದರೂ ಹೆಚ್ಚು ಕಡಿಮೆ ಒಂದುವರೆ ಮಿಲಿಯ ರಕ್ತದಾನದ ಕೊರತೆ ಇರುವುದರಿಂದ, ಯುವಕ ಯುವತಿಯರು ಸದಾ ಸ್ವಯಂ ಪ್ರೇರಿತ ರಕ್ತದಾನ ಮಾಡಿ, ರೋಗಿಗಳಿಗೆ ಅಗತ್ಯವಿರುವ ರಕ್ತದ ಅವಶ್ಯಕತೆಗಳನ್ನು ಪೂರೈಸಬೇಕಾಗಿ ಶಿಬಿರಾರ್ಥಿಗಳಿಂದ ಪ್ರತಿಜ್ಞೆಯನ್ನು ಸ್ವೀಕರಿಸಿ, ರಕ್ತದಾನದ ಮಹತ್ವದ ಬಗ್ಗೆ ಸಂಪೂರ್ಣ ಅರಿವನ್ನು ಮೂಡಿಸಿದರು.

    

ಸೈಂಟ್ ಮೆರೀಸ್ ವಿದ್ಯಾಸಂಸ್ಥೆಯ ಸಂಚಾಲಕರಾದ ವಿ. ರೆವೆರೆಂಡ್ ಫಾದರ್ ಚಾರ್ಲಸ್ ಮೆನೆಜಸ್‍ರವರು ಅಧ್ಯಕ್ಷತೆ ವಹಿಸಿದ್ದರು. 

  

ಸಂಸ್ಥೆಯ ಪ್ರಾಂಶುಪಾಲರಾದ ರೆವೆರೆಂಡ್ ಫಾದರ್ ಜೋನ್ಸನ್ ಎಲ್ ಸಿಕ್ವೇರಾ, ಉಪಪ್ರಾಂಶುಪಾಲರಾದ ಗ್ರೇಟ್ಟಾ ಕ್ವಾಡ್ರಸ್,  ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ ರಕ್ತನಿಧಿ ಕೇಂದ್ರದ ಮೆಡಿಕಲ್ ಆಫೀಸರ್ ಡಾ. ದೀಪ್ ಹಾಗೂ ಸಿಬ್ಬಂದಿ ವರ್ಗ, ಲಯನ್ ವೀಣಾ ಶೆಟ್ಟಿ, ಲಯನ್ ಅನಂತ ಶೆಟ್ಟಿ, ಲಯನ್ ವಿ. ಸುಧಾಕರ್ ಶೆಟ್ಟಿ, ಲಯನ್ ಜ್ಯೋತಿ ಆರ್ ಶೆಟ್ಟಿ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು. 

ಈ ಶಿಬಿರದಲ್ಲಿ 70 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು. 


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter   

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top