ಮಂಗಳೂರು: ಆಗಸ್ಟ್ 18 ರಂದು ಶುಕ್ರವಾರ ತುಳು ಕೂಟ ಸಂಸ್ಥೆಯ ಬಂಗಾರ್ ಪರ್ಬ ಸರಣಿಯ 6ನೇ ಕಾರ್ಯಕ್ರಮವು ಸರಕಾರಿ ಪ್ರೌಢ ಶಾಲೆ ಕೊಡ್ಮಾಣ್‌ನಲ್ಲಿ ಜರಗಲಿದೆ. ನಶಿಸಿ ಹೋಗುತ್ತಿರುವ ಹಳ್ಳಿ ಜನರ ಆಟಗಳನ್ನು ನೆನಪಿಸಿ- ಪರಿಚಯಿಸುವ 'ತುಳುವೆರೆ ಹಳ್ಳಿಗೊಬ್ಬುಲು' ಎಂಬ ವಿಶೇಷ ಕಾರ್ಯಕ್ರಮ ಜರಗಲಿದೆ. ಶಾಲಾ ವಿದ್ಯಾರ್ಥಿಗಳಿಂದ ಅದನ್ನು ಆಡಿಸಿ ಅದರ ಸವಿನೆನಪು ಅವರ ಚಿತ್ತದಲ್ಲಿ ಸದಾ ಹಸಿರಾಗಿ ಉಳಿಯುವಂತೆ ಮಾಡಲಾಗುವುದು ಎಂದು ಕೂಟದ ಅಧ್ಯಕ್ಷ ಬಿ. ದಾಮೋದರ ನಿಸರ್ಗ ಹೇಳಿದರು.
ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಶ್ರೀಮತಿ ಸರಳಾ ಕುಲಾಲ್ ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸುವರು. ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ ನ ಮಾಜಿ ಸದಸ್ಯರಾದ ಪದ್ಮನಾಭ ಕೋಟ್ಯಾನ್, ಮೇರಮಜಲು ಗ್ರಾ.ಪಂಚಾಯತ್ ನ ಅಧ್ಯಕ್ಷರಾದ ಸತೀಶ ನಾಯಗ 'ಶಾಲಾ ಮುಖ್ಯೋಪಾಧ್ಯಾಯರಾದ ಟಿ. ಭಾಸ್ಕರ ರಾವ್ ಅತಿಥಿಗಳಾಗಿ ಭಾಗವಹಿಸುವರು ಎಂದು ಕೂಟದ ಪ್ರಧಾನ ಕಾರ್ಯದರ್ಶಿ ವರ್ಕಾಡಿ ರವಿ ಅಲೆವೂರಾಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ