ಸುದಾನ ಶಾಲೆಯಲ್ಲಿ ಸ್ವಾತಂತ್ರೋತ್ಸವದ ಸಂಭ್ರಮ

Chandrashekhara Kulamarva
0

ಪುತ್ತೂರು: “ಗುರುಗಳ ಮಾರ್ಗದರ್ಶನದಲ್ಲಿ ಗುರಿ ಎಡೆಗೆ ಮುನ್ನುಗ್ಗುವ ವಿದ್ಯಾರ್ಥಿಗಳು ದೇಶದ ಸತ್ಪ್ರಜೆಗಳಾಗಿ ಬೆಳೆಯುತ್ತಾರೆ ” ಎಂದು ನಿರಂಜನ ರೈ ಮಠಂತಬೆಟ್ಟು ಅವರು ಅಭಿಪ್ರಾಯ ಪಟ್ಟರು. ಇವರು ಪುತ್ತೂರಿನ ಸುದಾನ ವಸತಿ ಶಾಲೆಯಲ್ಲಿ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸಿ ಧ್ವಜಾರೋಹಣಗೈದು ಮಾತನಾಡುತ್ತಿದ್ದರು. 


ಇದೇ ಸಂದರ್ಭದಲ್ಲಿ ಶಾಲಾ ಸಂಚಾಲಕರಾದ ರೆ. ವಿಜಯ ಹಾರ್ವಿನ್ ರವರು ಶಾಲೆಯ ಕಿರಿಯ ಪ್ರಾಥಮಿಕ ವಿಭಾಗದ 100% ವಿದ್ಯಾರ್ಥಿಗಳ ಕಬ್- ಬುಲ್ ಬುಲ್ ಯುನಿಟ್ ನ್ನು ದಕ್ಷಿಣ ಕೊರಿಯಾದ ಜಾಂಬೂರಿಯಲ್ಲಿ ಪಾಲ್ಗೊಂಡು ಹಿಂದಿರುಗಿರುವ ರಾಜ್ಯ ಪುರಸ್ಕೃತ ಸೀನಿಯರ್ ಸ್ಕೌಟ್ಸ್‍ಗಳ ಗೌರವ ಸಲಾಂನೊಂದಿಗೆ ಉದ್ಘಾಟಿಸುತ್ತಾ “ ವಿದ್ಯಾರ್ಥಿಗಳಲ್ಲಿ ಶಿಸ್ತು ಮತ್ತು ಕರ್ತವ್ಯ ಪ್ರಜ್ಞೆ ಜಾಗೃತವಾಗಲು ಸ್ಕೌಟ್ಸ್- ಗೈಡ್ಸ್ ತರಬೇತಿ ಅತ್ಯಗತ್ಯ.” ಎಂದು ಶುಭ ಹಾರೈಸಿದರು. 


ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಡಾ| ಪೀಟರ್ ವಿಲ್ಸನ್ ಪ್ರಭಾಕರ್, ಕೋಶಾಧಿಕಾರಿ ರೊ. ಆಸ್ಕರ್ ಆನಂದ್ ಹಾಗೂ ಮುಖ್ಯ ಶಿಕ್ಷಕಿ ಶ್ರೀಮತಿ. ಶೋಭಾ ನಾಗರಾಜ್ ಶುಭಾಶಂಸನೆಗೈದರು. ದಿನದ ಮಹತ್ವದ ಬಗ್ಗೆ ರಿಶೆಲ್ ಎಲ್ಸಾ ಬೆನ್ನಿ (10ನೇ) ಮಾತನಾಡಿದರು. ಧ್ರುವಿಕಾ ಕೋಟ್ಯಾನ್ (10ನೇ) ಸ್ವಾಗತಿಸಿ, ಶಮನ್ ಸಿಕ್ವೇರಾ (10ನೇ) ಧನ್ಯವಾದವನ್ನರ್ಪಿಸಿದರು. 


ರಫಿಯಾ(10ನೇ) ಅಭ್ಯಾಗತರನ್ನು ಪರಿಚಯಿಸಿ ಸಾನ್ವಿ ಜೆ. ಎಸ್ (10ನೇ) ಕಾರ್ಯಕ್ರಮವನ್ನು ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ದೇಶಭಕ್ತಿ ಗೀತೆಯ ಗಾಯನ ಕಾರ್ಯಕ್ರಮ ನಡೆಯಿತು. ಸ್ವಾತಂತ್ರೋತ್ಸವದ ಅಂಗವಾಗಿ ವಿವಿಧ ಚಟುವಟಿಕೆಗಳನ್ನು ತರಗತಿವಾರು ಆಯೋಜಿಸಲಾಗಿತ್ತು. 


ಈ ಕಾರ್ಯಕ್ರಮವನ್ನು ಶಾಲೆಯ ಸೋಶಿಯಲ್ ಕ್ಲಬ್ ಹಾಗೂ ಸ್ಪೋಟ್ಸ್ ಕ್ಲಬ್ ಆಯೋಜಿಸಿತ್ತು. 

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter   

Post a Comment

0 Comments
Post a Comment (0)
To Top