ಮಂಗಳೂರು: ಶ್ರೀನಿವಾಸ ವಿಶ್ವವಿದ್ಯಾಲಯ ಮತ್ತು ತಲಪಾಡಿ ಪಂಚಾಯಿತಿ ಸಹಯೋಗದಲ್ಲಿ ಆಗಸ್ಟ್ 15ರಂದು ತಲಪಾಡಿ ದೇವಿಪುರ ಹಿಂದೂ ರುದ್ರಭೂಮಿಯ ಪರಿಸರದಲ್ಲಿ ಕೋಟಿವೃಕ್ಷ ಅಭಿಯಾನದಡಿ ಸಸಿನೆಡುವ ಮೂಲಕ ಸ್ವಾತಂತ್ರ್ಯ ದಿನ ಆಚರಿಸಲಾಯಿತು.
ಸ್ವಾತಂತ್ರ್ಯೊತ್ಸವದ ಧ್ವಜಾರೋಹಣ ಕಾರ್ಯಕ್ರಮವನ್ನು ಪಂಚಾಯಿತಿ ಕಚೇರಿಯಲ್ಲಿ ಅಧ್ಯಕ್ಷರಾದ ಟಿ ಇಸ್ಮಾಯಿಲ್ ಅವರು ನಡೆಸಿಕೊಟ್ಟರು. ಅಮೃತಸರೋವರ ಕೆರೆ ಭಜಂಗ್ರೆ ಇಲ್ಲಿ ಪಂಚಾಯಿತಿ ವತಿಯಿಂದ ಧ್ವಜಾರೋಹಣ ಕಾರ್ಯಕ್ರಮ ನಡೆಸಲಾಯಿತು. ಉಪಾಧ್ಯಕ್ಷರಾದ ಪುಷ್ಪಾವತಿ ಶೆಟ್ಟಿ ಧ್ವಜಾರೋಹಣಗೈದರು.
ಪಿಡಿಒ ಕೇಶವ ಪೂಜಾರಿ, ಲೆಕ್ಕಸಹಾಯಕರಾದ ಮಂಜಪ್ಪ ಹೆಚ್ ಹೆಚ್., ಶ್ರೀನಿವಾಸ ವಿಶ್ವವಿದ್ಯಾಲಯದ ಅಸಿಸ್ಟೆಂಟ್ ಪ್ರೊಫೆಸರ್ ಜಾಯ್ಸನ್ ಫ್ರಾಂಕೀಕಾರ್ಡೋಜ, ಪಂಚಾಯಿತಿ ಚುನಾಯಿತ ಸದಸ್ಯರು, ಶ್ರೀನಿವಾಸ ವಿಶ್ವವಿದ್ಯಾಲಯದ ಎಂಎಸ್ ಡಬ್ಲ್ಯೂ ವಿದ್ಯಾರ್ಥಿಗಳು¸ಶಾಲಾಮಕ್ಕಳು ,ಪಂಚಾಯಿತಿ ಸಿಬ್ಬಂದಿ, ಗಂಥಪಾಲಕರು, ಗ್ರಾಮಸ್ಥರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ