ಮಂಗಳೂರು: ಶ್ರೀನಿವಾಸ ವಿಶ್ವವಿದ್ಯಾಲಯದ ಇನ್‌ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್‌ಮೆ೦ಟ್ ಮತ್ತು ಟೂರಿಸ೦ ಮತ್ತು ಡಿಪಾರ್ಟ್‌ಮೆ೦ಟ್ ಆಫ್ ಇ೦ಟೀರಿಯರ್ ಡಿಸೈನ್ 2023ರ ಫ್ರೆಶರ್ಸ್ ಡೇ (ಪ್ರಾರಂಭ್ 2023) ಆಗಸ್ಟ್ 12ರ ಶನಿವಾರದಂದು ಮ೦ಗಳೂರಿನ ಪಾ೦ಡೇಶ್ವರದಲ್ಲಿರುವ ಶ್ರೀನಿವಾಸ ವಿಶ್ವವಿದ್ಯಾಲಯದ ಸಿಟಿ ಕ್ಯಾ೦ಪಸ್‌ನಲ್ಲಿ ನಡೆಯಿತು.
ಶ್ರೀನಿವಾಸ ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಾಧಿಪತಿ ಡಾ. ಸಿಎ ಎ. ರಾಘವೇ೦ದ್ರ ರಾವ್, ಸಹ ಕುಲಾಧಿಪತಿ ಡಾ. ಎ. ಶ್ರೀನಿವಾಸ ರಾವ್, ಆಡಳಿತ ಮಂಡಳಿ ಟ್ರಸ್ತಿ- ಸದಸ್ಯರಾದ ಶ್ರೀಮತಿ ಎ. ವಿಜಯಲಕ್ಷ್ಮಿ ಆರ್ ರಾವ್, ಪ್ರೊ. ಎ.ಮಿತ್ರ ಎಸ್. ರಾವ್ ಅವರ ಮಾರ್ಗದರ್ಶನ ಮತ್ತು ಆಶೀರ್ವಾದದೊಂದಿಗೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಶ್ರೀನಿವಾಸ ವಿಶ್ವವಿದ್ಯಾಲಯ- ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಆ೦ಡ್ ಕಾಮರ್ಸ್ ಡೀನ್ ಡಾ.ವೆ೦ಕಟೇಶ್ ಅಮೀನ್ ಅವರು ನೂತನವಾಗಿ ಆಯ್ಕೆಯಾದ ವಿದ್ಯಾರ್ಥಿ ಪರಿಷತ್ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿ ಮಾತನಾಡಿ, ಹೋಟೆಲ್ ಮ್ಯಾನೇಜ್‌ಮೆ೦ಟ್ ಮತ್ತು ಇ೦ಟೀರಿಯರ್ ಡಿಸೈನ್ ಕೋರ್ಸ್‌ಗಳ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು. ಕಾಲೇಜಿನಲ್ಲಿ ನಡೆಸಿದ ವಿವಿಧ ಕಾರ್ಯಕ್ರಮಗಳಲ್ಲಿ ಹೋಟಿಲ್ ಮ್ಯಾನೇಜ್ಮೆಂಟ್ ಮತ್ತು ಇಂಟೀರಿಯರ್ ಡಿಸೈನ್ ವಿದ್ಯಾರ್ಥಿಗಳ ಭಾಗವಹಿಸುವಿಕೆಯನ್ನು ಶ್ಲಾಘಿಸಿದರು.
ಇನ್ಸ್ಟಿಟ್ಯೂಟ್ ಆಫ್ ಹೋಟಿಲ್ ಮ್ಯಾನೇಜ್ಮೆಂಟ್ ಮತ್ತು ಟೂರಿಸಂ ಮತ್ತು ಇ೦ಟೀರಿಯರ್ ಡಿಸೈನ್ ವಿಭಾಗದ ಡೀನ್ ಪ್ರೊ.ಸ್ವಾಮಿನಾಥನ್ ಎಸ್. ಅವರು ತಮ್ಮ ಭಾಷಣದಲ್ಲಿ ಶಿಸ್ತು ಮತ್ತು ಮುಂಬರುವ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳ ಸಕ್ರಿಯವಾಗಿ ಭಾಗವಹಿಸುವ ಅಗತ್ಯವನ್ನು ಒತ್ತಿ ಹೇಳಿದರು. ನೂತನವಾಗಿ ಆಯ್ಕೆಯಾದ ಎಲ್ಲ ವಿದ್ಯಾರ್ಥಿ ಪರಿಷತ್ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು.
ಶ್ರೀನಿವಾಸ ವಿಶ್ವವಿದ್ಯಾಲಯದ ಇನ್‌ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್‌ಮೆಂಟ್ ಅಂಡ್ ಟೂರಿಸ೦ನ ಕೋರ್ಸ್ ಸ೦ಯೋಜಕ ಪ್ರೊ. ಪ್ರಶಾ೦ತ್ ಪ್ರಭು ಮತ್ತು ಇ೦ಟೀರಿಯರ್ ಡಿಸೈನ್ ವಿಭಾಗದ ಕೋರ್ಸ್ ಸ೦ಯೋಜಕರು ಪೊ. ಯೋಗೀತಾ ಪೈ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಆದಿ ವಿ ರಾಜ್. ಸ್ವಾಗತಿಸಿ, ಶ್ರಾವಿ ಶೆಟ್ಟಿ ವಂದಿಸಿದರು. ಅಕಿಫಾ, ಪವನರಾಜ್ ನಿರೂಪಿಸಿದರು. ಸಾ೦ಸ್ಕೃತಿಕ ಕಾರ್ಯಕ್ರಮ, ಕೇಕ್ ಕತ್ತರಿಸುವುದು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ